ಪದವಿ ಮೌಲ್ಯಮಾಪನ ಬಹಿಷ್ಕರಿಸಲು ನಿರ್ಧಾರ

ಮೌಲ್ಯಮಾಪನಕ್ಕೆ ಪ್ರಧ್ಯಾಪಕರು ಹಾಜರಾಗದಿದ್ದಲ್ಲಿ ಪದವಿ ಕಾಲೇಜುಗಳ ಮಾನ್ಯತೆ ರದ್ದು ಮಾಡುತ್ತೇವೆಂಬ ಕಟ್ಟುನಿಟ್ಟಿನ ಆದೇಶಕ್ಕೂ ಬಗ್ಗದ ಪ್ರಾಧ್ಯಾಪಕರು ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಅನಿರ್ಧಿಷ್ಟಾವಧಿ ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಬೆಂಗಳೂರು: ಮೌಲ್ಯಮಾಪನಕ್ಕೆ ಪ್ರಧ್ಯಾಪಕರು ಹಾಜರಾಗದಿದ್ದಲ್ಲಿ ಪದವಿ ಕಾಲೇಜುಗಳ ಮಾನ್ಯತೆ ರದ್ದು ಮಾಡುತ್ತೇವೆಂಬ ಕಟ್ಟುನಿಟ್ಟಿನ ಆದೇಶಕ್ಕೂ ಬಗ್ಗದ ಪ್ರಾಧ್ಯಾಪಕರು ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಅನಿರ್ಧಿಷ್ಟಾವಧಿ ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಮೌಲ್ಯಮಾಪನದಿಂದ ಕೆಲವು ಪ್ರಾಧ್ಯಾಪಕರು ಹಿಂದೆ ಸರಿದಿದ್ದು, ಡಿ. 9ರಿಂದ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಮುಂದೆ ನಿರ್ದಿಷ್ಟಾವಧಿ ಧರಣಿ ಕೈಗೊಳ್ಳಲು ನಿರ್ಧರಿಸಿದ್ದಾರೆ.

ಶೇ.5 ರಷ್ಟು ಮಾತ್ರ ಮೌಲ್ಯಮಾಪನ:
ಬೆಂವಿವಿಯಲ್ಲಿ ಶೇ.25ರಷ್ಟು ಮೌಲ್ಯಮಾಪನ ಮಾತ್ರ ಪೂರ್ಣಗೊಂಡಿದ್ದು ಮುಂದಿನ 15 ದಿನಗಳಲ್ಲಿ ಉಳಿದ ಶೇ.75ರಷ್ಟು ಕಾರ್ಯ ನಡೆಯಬೇಕಿದೆ. ಡಿ.20ರಿಂದ ಕಾಲೇಜುಗಳು ಮರು ಪ್ರಾರಂಭವಾಗಬೇಕಿದ್ದು, ಅಷ್ಟರೊಳಗೆ ಮೌಲ್ಯಮಾಪನ ಪೂರ್ಣಗೊಳ್ಳಬೇಕು. ಆದರೆ, ಪ್ರಾಧ್ಯಾಪಕರು ಮೌಲ್ಯಮಾಪನ ಬಹಿಷ್ಕರಿಸಿ ಹೋರಾಟಕ್ಕೆ ಮುಂದಾಗಿರುವ ಪರಿಣಾಮ ಫಲಿತಾಂಶ ಪ್ರಕಟ ಮತ್ತು ಕಾಲೇಜುಗಳ ಮರು ಪ್ರಾರಂಭ ತಡವಾಗಬಹುದು.

ಕಾಲೇಜು, ವಿವಿಗಳ ಬೋಧಕರ ಬೇಡಿಕೆಗಳು ಕಳೆದ ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿವೆ. ದಿನದಿಂದ ದಿನಕ್ಕೆ ಸಮಸ್ಯೆಗಳು ಹೆಚ್ಚಳವಾಗುತ್ತಿದ್ದು, ಪರಿಹಾರ ಮಾತ್ರ ಕಂಡುಕೊಳ್ಳುತ್ತಿಲ್ಲ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ಸಚಿವರು ಮತ್ತು ಮುಖ್ಯಮಂತ್ರಿಗಳ ಬಳಿ ಮನವಿ ಸಲ್ಲಿಸಿದ್ದರೂ ಸಮಸ್ಯೆ ಮಾತ್ರ ಇತ್ಯರ್ಥವಾಗಿಲ್ಲ. ಈ ಹಿನ್ನೆಲೆಯಲ್ಲಿ ಮೌಲ್ಯಮಾಪನ ಬಹಿಷ್ಕಾರ ಅನಿವಾರ್ಯವಾಗಿದೆ ಎನ್ನುತ್ತಾರೆ ಕಾಲೇಜು ಅಧ್ಯಾಪಕರ ಅಸೋಸಿಯೇಷನ್ ಅಧ್ಯಕ್ಷ ಡಾ. ಎಚ್. ಪ್ರಕಾಶ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com