ಹೋಟೆಲ್ ಉದ್ಯಮದ ಕೊಡುಗೆ ಅಪಾರ: ಸಚಿವ ಪರಮೇಶ್ವರ

ಹೋಟೆಲ್ ಉದ್ಯಮದ ಪ್ರಗತಿ ಮೇಲೆ ಒಂದು ದೇಶದ ಆರ್ಥಿಕ ಸ್ಥಿತಿಗತಿ ಮತ್ತು ಆ ದೇಶದ ಪ್ರಗತಿ ಅಳೆಯಬಹುದಾಗಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅಭಿಪ್ರಾಯಪಟ್ಟರು...
ಗೃಹ ಸಚಿವ ಡಾ.ಜಿ. ಪರಮೇಶ್ವರ್ (ಸಂಗ್ರಹ ಚಿತ್ರ)
ಗೃಹ ಸಚಿವ ಡಾ.ಜಿ. ಪರಮೇಶ್ವರ್ (ಸಂಗ್ರಹ ಚಿತ್ರ)
Updated on

ಬೆಂಗಳೂರು: ಹೋಟೆಲ್ ಉದ್ಯಮದ ಪ್ರಗತಿ ಮೇಲೆ ಒಂದು ದೇಶದ ಆರ್ಥಿಕ ಸ್ಥಿತಿಗತಿ ಮತ್ತು ಆ ದೇಶದ ಪ್ರಗತಿ ಅಳೆಯಬಹುದಾಗಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್
ಅಭಿಪ್ರಾಯಪಟ್ಟರು.

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಬೃಹತ್ ಬೆಂಗಳೂರು ಹೋಟೆಲುಗಳ ಸಂಘದ 80ನೇ ವರ್ಷಾಚರಣೆ ಅಂಗವಾಗಿ ಉದ್ಯಮಶ್ರೀ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಈ ಉದ್ಯಮವು ದೇಶದ ಅಭಿವೃದ್ಧಿಯಲ್ಲಿ ತನ್ನದೇ ಆದ ಪಾತ್ರ ವಹಿಸಿದೆ. ಹೋಟೆಲ್ ಉದ್ಯಮ ಸೇವೆ, ಆತಿಥ್ಯದ ಮೂಲಕ ಸಮಾಜಕ್ಕೆ ಕೊಡುಗೆ ನೀಡುವುದರ ಜೊತೆಗೆ ಲಾಭಗಳಿಸುವ ಉದ್ಯಮ ವಾಗಿದೆ. ಉದ್ಯಮಿಗಳಿಗೆ ದುಡಿಮೆಯ ಜೊತೆಗೆ ಹಸಿದವರ ಹೊಟ್ಟೆ ತುಂಬಿ ಸುವ ಸದವಕಾಶ ನೀಡಿದೆ ಎಂದು ತಿಳಿಸಿದರು.

ಸಮಾಜದ ಸಾಕ್ಷಿ ಪ್ರಜ್ಞೆಯಂತೆ ಹೋಟೆಲ್ ಗಳು ಕೆಲಸ ಮಾಡುತ್ತವೆ. ದೇಶದಲ್ಲಿ ನಡೆಯುವ ಪ್ರತಿಯೊಂದು ಘಟನೆಯ ಚರ್ಚೆ, ಕಾನೂನು ರೂಪಿಸುವುದು, ರಾಜಕೀಯ ಸೇರಿದಂತೆ ಆರ್ಥಿಕ ಘಟನೆಗಳ ಚರ್ಚೆಗೆ ಹೋಟೆಲ್‍ಗಳು ವೇದಿಕೆಯನ್ನು ಕಲ್ಪಿಸಿಕೊಟ್ಟಿವೆ ಎಂದು ಹೇಳಿದರು.

ಪ್ರಶಸ್ತಿ ಪ್ರದಾನ: ಮಯಾ್ಯಸ್ ಗ್ರೂಪ್ ನ ಮಾಲೀಕ ಸದಾನಂದಮಯಾ್ಯ ಮತ್ತು ಅಡ್ಯಾರ್ ಆನಂದ ಭವನ ಗ್ರೂಪ್ ಮಾಲೀಕ ಕೆ.ಟಿ. ಶ್ರೀನಿವಾಸರಾಜ ಅವರಿಗೆ `ಉದ್ಯಮಶ್ರೀ ಪ್ರಶಸ್ತಿ' ಪ್ರದಾನ ಮಾಡಲಾಯಿತು. ಗಣೇಶ್ ಸ್ವೀಟ್ಸ್ ಮಾಲೀಕ ಆರ್. ಸದಾಶಿವರಾವ್, ಹೋಟೆಲ್ ಇಂದ್ರಪ್ರಸ್ಥ ಮಾಲೀಕ ಪ್ರಕಾಶ್ ಮಯಾ್ಯ, ಆಶಾ ಸ್ವೀಟ್ಸ್ ಗ್ರೂಪ್ಸ್ ಮಾಲೀಕ ನರೇಂದ್ರ
ಕುಮಾರ್ ಗಾರ್ಗ್, ಎಸ್.ಎಲ್.ವಿ. ರಿಫ್ರೆಷ್ ಮೆಂಟ್ಸ್ ಮಾಲೀಕ ರಜನಿ ಪೈ, ಎಸ್.ಆರ್. ಎಸ್. ಎಂಟರ್ ಪ್ರೈಸಸ್ ಮಾಲೀಕ್ ಕಾಡೂರು ದೊಡ್ಮನೆ ಪ್ರಭಾಕರ ಶೆಟ್ಟಿ, ಪಂಚಮಿ ಗಾರ್ಡನ್ ಮಾಲೀಕ ಗೋವಿಂದ ಭಟ್ ಮತ್ತು ಕಾಮತ್ ಗ್ರೂಪ್ ಆಫ್ ಹೋಟೆಲ್ಸ್ ಮಾಲೀಕ ವೆಂಕಟೇಶ್ ಎಸ್. ಕಾಮತ್ ಅವರಿಗೆ `ಅತಿಥೋದ್ಯಮಿ ಪ್ರಶಸ್ತಿ' ಪ್ರದಾನ ಮಾಡಿದರು.

ಪುತ್ತಿಗೆ ಮಠದ ಸುಗಣೇಂದ್ರತೀರ್ಥ ಸ್ವಾಮೀಜಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿದ್ದರು. ಅರಣ್ಯ ಮತ್ತು ಪರಿಸರ ಸಚಿವ ರಮಾನಾಥ ರೈ, ಸಾಹಿತಿ ದೊಡ್ಡರಂಗೇಗೌಡ, ಬಿಬಿಎಂಪಿ ಮೇಯರ್ ಮಂಜುನಾಥರೆಡ್ಡಿ, ರಾಜ್ಯ ಸರ್ಕಾರದ ಕಿಯೋನಿಕ್ಸ್ ಅಧ್ಯಕ್ಷ ಯು.ಬಿ. ವೆಂಕಟೇಶ್, ಬಿಬಿಎಂಪಿ ಸದಸ್ಯ ಉಮೇಶ್ ಶೆಟ್ಟಿ, ಕೆ.ಪಿ.ಎಚ್.ಆರ್.ಎ ಅಧ್ಯಕ್ಷ ಎಂ. ರಾಜೇಂದ್ರ, ಸಂಘದ ಗೌರವಾಧ್ಯಕ್ಷ ಕೆ.ಎನ್. ವಾಸುದೇವ ಅಡಿಗ, ಅಧ್ಯಕ್ಷ ಚಂದ್ರಶೇಖರ್ ಹೆಬ್ಬಾರ್ ಮತ್ತು ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಹೊಳ್ಳ ಉಪಸ್ಥಿತರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com