![(ಸಂಗ್ರಹ ಚಿತ್ರ)](http://media.assettype.com/kannadaprabha%2Fimport%2F2015%2F12%2F10%2Foriginal%2FBangalore-University.jpg?w=480&auto=format%2Ccompress&fit=max)
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿಭಾಗದ ಕೋರ್ಸ್‍ಗಳ ಹೆಸರು ಬದಲಾಗಿರುವ ಕಾರಣ ವಿದ್ಯಾರ್ಥಿಗಳ ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ನಾಲ್ಕು ಕೋರ್ಸ್‍ನ ಹೆಸರು ಬದಲಾಗಿದೆ.
ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ದೇಶದ ಎಲ್ಲ ವಿವಿಯ ನಾಲ್ಕು ಕೋರ್ಸ್‍ಗಳ ಹೆಸರು ಬದಲಾವಣೆಗೆ 2014ರ ಜು.5 ರಂದು ಆದೇಶ ನೀಡಿತ್ತು. ಅದರಂತೆ ವಾಣಿಜ್ಯ ಮತ್ತು ವಿಜ್ಞಾನ ವಿಭಾಗದ ತಲಾ ಎರಡು ಕೋರ್ಸ್‍ಗಳು ಸೇರಿವೆ. ವಾಣಿಜ್ಯ ವಿಭಾಗದ ಕೋರ್ಸ್ ಬದಲಾಗಿರುವುದು ಅಷ್ಟೇನೂ ಸಮಸ್ಯೆಯಾಗಿಲ್ಲ. ಬೆಂವಿವಿ ಆಡಳಿತ ಮಂಡಳಿ ನಿರ್ಲಕ್ಷ್ಯದಿಂದ 2014--15ನೇ ಸಾಲಿನಲ್ಲಿ ಎಂ.ಎಸ್. ಕಮ್ಯುನಿಕೇಷನ್ ಮತ್ತು ಎಂ.ಎಸ್. ವಿದ್ಯುನ್ಮಾನ ಮಾಧ್ಯಮ ಕೋಸ್ರ್ ನ ಬದಲಾಗಿರುವ ಕಾರಣ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ.
ಸಮಸ್ಯೆ ಎಲ್ಲೆಲ್ಲಿ?
ನೆಟ್ ಮತ್ತು ಸ್ಲೆಟ್ ಪರೀಕ್ಷೆ ಬರೆಯುವ ಸಮಯದಲ್ಲಿ ವಿಭಾಗವನ್ನು ಕಲಾ ಅಥವಾ ವಿಜ್ಞಾನ ಯಾವುದನ್ನು ದಾಖಲಿಸಬೇಕು ಎಂಬ ಗೊಂದಲ ಉಂಟಾಗಿದೆ. ಯುಜಿಸಿ ನಿಯಮದಂತೆ
ಬಿಬಿಎಂ-ಬಿಬಿಎ ಎಂದು, ಎಂಬಿಎಸ್ / ಎಂಟಿಎಸ್ ಕೋರ್ಸ್‍ಗಳನ್ನು ಎಂಎಂಎಸ್/ಎಂಬಿಎ ಎಂದು, ಎಂಎಸ್ ಕಮ್ಯುನಿಕೇಶನ್ ಕೋರ್ಸ್ ಅನ್ನು ಎಂ.ಎ. ಜರ್ನಲಿಸಂ ಆ್ಯಂಡ್
ಮಾಸ್ ಕಮ್ಯುನಿಕೇಶನ್ ಎಂದು ಮತ್ತು ಎಂಎಸ್ಸಿ ಎಲೆಕ್ಟ್ರಾನಿಕ್ ಮೀಡಿಯಾಕೋರ್ಸ್ ಅನ್ನು ಎಂ.ಎ. ಎಲೆಕ್ಟ್ರಾನಿಕ್ ಮೀಡಿಯಾ ಎಂದು ಬದಲಿಸಿ ಆದೇಶ ಹೊರಡಿಸಿತ್ತು. ಅದರಂತೆ ಬೆಂಗಳೂರು ವಿಶ್ವವಿದ್ಯಾಲಯವು ಬದಲಾವಣೆ ಮಾಡಿದೆ.
Advertisement