3 ತಿಂಗಳಾದ್ರೂ ಮೂರ್ತಿ ಕರಗಲಿಲ್ಲ!

ಗಣೇಶ ಚತುರ್ಥಿ ಕಳೆದು 3 ತಿಂಗಳು ಕಳೆದರೂ ಪ್ಲಾಸ್ಟರ್ ಆಫ್ ಪ್ಯಾರೀಸ್‍ನಿಂದ ತಯಾರಿಸಿರುವ ಗಣೇಶನ...
ಕರಗದೆ ಹಾಗೆಯೇ ಉಳಿದುಕೊಂಡಿರುವ ಗಣೇಶ ಮೂರ್ತಿಗಳು
ಕರಗದೆ ಹಾಗೆಯೇ ಉಳಿದುಕೊಂಡಿರುವ ಗಣೇಶ ಮೂರ್ತಿಗಳು

ಬೆಂಗಳೂರು: ಗಣೇಶ ಚತುರ್ಥಿ ಕಳೆದು 3 ತಿಂಗಳು ಕಳೆದರೂ ಪ್ಲಾಸ್ಟರ್ ಆಫ್  ಪ್ಯಾರೀಸ್‍ನಿಂದ ತಯಾರಿಸಿರುವ ಗಣೇಶನ ಮೂರ್ತಿಗಳ ಅವಶೇಷಗಳು ಇನ್ನೂ ಕೆರೆಯಲ್ಲಿ  ಹಾಗೆಯೇ ಉಳಿದಿವೆ.

ಬಿಬಿಎಂಪಿ ಅಧಿಕಾರಿಗಳು ಗಣೇಶನ ಮೂರ್ತಿ ವಿಸರ್ಜನೆ ಕುರಿತು ಜನರಲ್ಲಿ ಅದೆಷ್ಟೋ ಜಾಗೃತಿ  ಮೂಡಿಸಿದರೂ ಫಲಿತಾಂಶ ಮಾತ್ರ  ಶೂನ್ಯವಾಗಿದೆ.

ಗಣೇಶನ ಹಬ್ಬ ಮುಗಿದ ನಂತರ ಜನರನ್ನು ಪ್ರಶ್ನಿಸಿದರೆ ಕೆರೆಯಲ್ಲಿ ನೀರು ಕಡಿಮೆ ಇರುವುದರಿಂದ ಮೂರ್ತಿ ಮುಳುಗಿಲ್ಲ ಎನ್ನುವ ಸಬೂಬುಗಳು ಕೇಳಿಬಂದಿದ್ದವು. ಆದರೆ   ಬೆಂಗಳೂರಿನ ಕೆರೆಗಳು ಕಳೆದೆರಡು ತಿಂಗಳಿನಿಂದ ಧಾರಾಕಾರ ಮಳೆಯನ್ನು ಕಂಡರೂ  ಮೂರ್ತಿಗಳು ತಮ್ಮ ಜಾಗವನ್ನು ತೊರೆದಿಲ್ಲ. ಹಲಸೂರು ಕೆರೆಯಲ್ಲಿ ಗಣೇಶ ಮೂರ್ತಿ  ಮಾಯವಾಗಿದೆ. ಆದರೆ, ಎಲ್ಲೆಂದರಲ್ಲಿ ಮೂರ್ತಿಗಳ ವಿವಿಧ ಭಾಗಗಳು ಗೋಚರಿಸುತ್ತಿವೆ. ಅವು  ಕರಗುವುದಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ಕ್ರೇನ್‍ಗಳನ್ನು ಬಳಸಿ  ಸ್ಥಳಾಂತರಿಸಿದ್ದರೂ ನೂರಾರು ಗಣಪತಿ  ವಿಗ್ರಹಗಳ ಅವಶೇಷಗಳು ಹಾಗೆಯೇ ಉಳಿದಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com