ಬದಲಾಗುತ್ತೆ ಸಂಚಾರ ಪೊಲೀಸರ ಸಮವಸ್ತ್ರ

ಶೀಘ್ರದಲ್ಲೇ ನಗರ ಸಂಚಾರಿ ಪೊಲೀಸರ ಸಮವಸ್ತ್ರ ಬದಲಾವಣೆ ಆಗಲಿದ್ದು, ಈ ಬಗ್ಗೆ ಸ್ವತಃ ಗೃಹ ಸಚಿವರೇ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಶೀಘ್ರದಲ್ಲೇ ನಗರ ಸಂಚಾರಿ ಪೊಲೀಸರ ಸಮವಸ್ತ್ರ ಬದಲಾವಣೆ ಆಗಲಿದ್ದು, ಈ ಬಗ್ಗೆ ಸ್ವತಃ ಗೃಹ ಸಚಿವರೇ ಮಾಹಿತಿ ನೀಡಿದ್ದಾರೆ.

ಶುಕ್ರವಾರ ಟ್ರಾಫಿಕ್ ಮ್ಯಾನೇಜ್ ಮೆಂಟ್ ಸೆಂಟರ್ ಗೆ ಭೇಟಿ ನೀಡಿ ಪೊಲೀಸ್  ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ  ಅವರು, ``ಸಂಚಾರಿ ಪೊಲೀಸರ ಸಮವಸ್ತ್ರ  ಬದಲಿಸುವ ಬಗ್ಗೆಯೂ ಚರ್ಚಿಸಿದ್ದು, ಈ ಬಗ್ಗೆ  ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ'' ಎಂದು ಹೇಳಿದರು.

ನಗರದ ಸಂಚಾರ ವ್ಯವಸ್ಥೆ ಸುಧಾರಣೆಗೆ ಹಲವು ಯೋಜನೆ ರೂಪಿಸಿದ್ದು, ಹಂತ ಹಂತವಾಗಿ  ಅನುಷ್ಠಾನಗೊಳಿಸಲಾಗುವುದು. ನಗರದಲ್ಲಿ ಸಂಚಾರ ಸಮಸ್ಯೆಯಿಂದ ಜನ ಬಹಳ ತೊಂದರೆ  ಅನುಭವಿಸುತ್ತಿದ್ದಾರೆ. ಪ್ರಸ್ತುತ ನಗರದಲ್ಲಿ ಕಾರು, ಬಸ್, ದ್ವಿಚಕ್ರ ವಾಹನ ಸೇರಿದಂತೆ 58 ಲಕ್ಷ  ವಾಹನಗಳಿವೆ. ಪ್ರತಿ ವರ್ಷ ವಾಹನಗಳ ಸಂಖ್ಯೆಯಲ್ಲಿ  ಹೆಚ್ಚಳವಾಗುತ್ತಿರುವುದರಿಂದ ಸಂಚಾರ  ಸಮಸ್ಯೆಯೂ ಹೆಚ್ಚಾಗುತ್ತಿದೆ. ಇರುವ ರಸ್ತೆಗಳು ವಾಹನಗಳ ಸಂಚಾರಕ್ಕೆ ಸಾಕಾಗುತ್ತಿಲ್ಲ. ಆದರೂ  ಸಂಚಾರ ಪೊಲೀಸರು ವ್ಯವಸ್ಥಿತ ಸಂಚಾರ ನಿರ್ವಹಣೆಗೆ ಪ್ರಯತ್ನಿಸುತ್ತಿದ್ದಾರೆ ಎಂದರು. 

ಕಾರಿಡಾರ್ ಗೆ ಡಿಪಿಆರ್
: ನಗರದಲ್ಲಿನ ಸಂಚಾರ ವ್ಯವಸ್ಥೆಯು ಮೂಲಭೂತ ಸೌಕರ್ಯಗಳ  ಸಮಸ್ಯೆ ಎದುರಿಸುತ್ತಿದೆ. ವಿಮಾನ ನಿಲ್ದಾಣ ರಸ್ತೆಯಲ್ಲಿ ನಾಲ್ಕು ಪಥದ ಮೇಲ್ಸೇತುವೆ ಹಾಗೂ  ನಾಲ್ಕು ಪಥದ ರಸ್ತೆ ಇದ್ದರೂ ವಾಹನ ಸಂಚಾರ ದುರ್ಗಮವಾಗಿದೆ. ಈ ಹಿನ್ನೆಲೆಯಲ್ಲಿ ನಗರದ  ಪೂರ್ವ, ಪಶ್ಚಿಮ, ಉತ್ತರ ಹಾಗೂ ದಕ್ಷಿಣ ವಿಭಾಗಗಳಲ್ಲಿ ಕಾರಿಡಾರ್ ನಿರ್ಮಿಸುವ ಸಂಬಂಧ  ಈಗಾ ಗಲೇ ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧವಾಗುತ್ತಿದೆ. ಇದು  ಕಾರ್ಯಗತವಾಗಲು ಕನಿಷ್ಠ 2 ವರ್ಷ ಬೇಕಾಗುತ್ತದೆ. ಹಾಗಾಗಿ ಸದ್ಯಕ್ಕೆ ಲಭ್ಯವಿರುವ   ಅನುದಾನದಲ್ಲೇ ಸಂಚಾರ ಸಮಸ್ಯೆ ನಿರ್ವಹಿಸುವ ಕುರಿತಂತೆ ಅಧಿಕಾರಿಗಳೊಂದಿಗೆ  ಚರ್ಚಿಸಿದ್ದೇನೆ ಎಂದು ಳಿಸಿದರು.

ಬೆಂಗಳೂರು ಟ್ರಾಫಿಕ್ ಅಜೆಂಡಾ ಟಾಸ್ಕ್ ಫೋರ್ಸ್ ಚುರುಕುಗೊಳಿಸುವ ನಿಟ್ಟಿನಲ್ಲಿ  ಚಿಂತಿಸಲಾಗಿದೆ.  ಮಾನ್ಯವಾಗಿ ಬೆಳಗಿನ ವೇಳೆ ಸಂಚಾರ ದಟ್ಟಣೆ ಹೆಚ್ಚಾಗಿರುವುದರಿಂದ ಇದನ್ನು  ನಿರ್ವಹಿಸುವ ಬಗ್ಗೆ ಅಧಿಕಾರಿಗಳೊಂದಿಗೆ  ಚರ್ಚಿಸಿದ್ದೇನೆ. ಸಾಧ್ಯವಾದರೆ ಬೆಳಗಿನ ನಿರ್ದಿಷ್ಟ ಅವಧಿಗೆ  ನಗರದಲ್ಲಿ ಟ್ರಕ್  ಸಂಚಾರ ನಿಲ್ಲಿಸುವ ಬಗ್ಗೆಯೂ ಮಾತನಾಡಿದ್ದೇನೆ. ಆದರೆ, ಏಕಾಏಕಿ  ಇದನ್ನು  ಜಾರಿಗೆ ತರುವುದಿಲ್ಲ. ಈ ಸಂಬಂಧ ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳ ಜತೆ  ರ್ಚಿಸಿದ ಬಳಿಕ ಅಂತಿಮ ತೀರ್ಮಾನಕ್ಕೆ ಬರಲಾಗುವುದು. ಅಂತೆಯೇ ನಗರದ ಕೆಲ ರಸ್ತೆಗಳಲ್ಲಿ  ವಾಹನ ಸಂಚಾರ ವಲಯಗಳನ್ನು ಮಾಡಿ, ಸಂಚಾರ ದಟ್ಟಣೆ ತಗ್ಗಿಸಲು  ಚಿಂತಿಸಲಾಗಿದೆ. ಈ  ನಿಟ್ಟಿನಲ್ಲಿ ಕೆಲ ಕಠಿಣ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ಯೋಜನೆ ಉನ್ನತೀಕರಣ: ದೇಶದಲ್ಲೇ ಮೊದಲ ಬಾರಿಗೆ `ಬಿ' ಟ್ರ್ಯಾಕ್ ಯೋಜನೆ  ಅನುಷ್ಠಾನಗೊಳಿಸಿದ ಕೀರ್ತಿ ಕರ್ನಾಟಕಕ್ಕೆ ಸಲ್ಲುತ್ತದೆ. ಇದಕ್ಕಾಗಿ ಸರ್ಕಾರ 350 ಕೋಟಿ  ರೂಪಾಯಿ  ಮಂಜೂರು ಮಾಡಿದ್ದು, ಈಗಾಗಲೇ 187 ಕೋಟಿ  ಖರ್ಚಾಗಿದೆ. 2007 ರಿಂದ 2015ರವರೆಗೆ ಬಿ ಟ್ರ್ಯಾಕ್ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ 450 ಕೋಟಿ  ರೂಪಾಯಿ ದಂಡ ವಸೂಲಿಯಾಗಿದ್ದು, ಈ ಹಣದಲ್ಲಿ  ಸಂಚಾರ ನಿರ್ವಹಣೆಗೆ ಅರ್ಧ ಹಣ ವಿನಿಯೋಗಿಸಲು ಸರ್ಕಾರ ಆದೇಶಿಸಿದೆ. ಮುಂದಿನ ದಿನಗಳಲ್ಲಿ ಬಿ ಟ್ರ್ಯಾಕ್  ಯೋಜನೆ ಉನ್ನತ  ಮಟ್ಟಕ್ಕೆ   ಏರಿಸಲಾಗುವುದೆಂದರು.

100 ಹೆಚ್ಚುವರಿ ಕ್ಯಾಮೆರಾ: ಸಂಚಾರ ನಿರ್ವಹಣೆ ಹಿನ್ನೆಯಲ್ಲಿ ಪ್ರಸ್ತುತ ನಗರದ ವಿವಿಧ ರಸ್ತೆ  ಜಂಕ್ಷನ್‍ಗಳಲ್ಲಿ 179 ಕ್ಯಾಮೆರಾ ಅಳವಡಿಸಲಾಗಿದೆ. ಇದೀಗ ಹೆಚ್ಚುವರಿ 100 ಕ್ಯಾಮೆರಾಗಳನ್ನು ಅಳವಡಿಸಲು ಸೂಚಿಸಲಾಗಿದೆ. ಅಂತೆಯೇ ಸಂಚಾರಿ ಪೊಲೀಸರ ವಾಕಿಟಾಕಿ ಮೊದಲಾದ  ಉಪಕರಣಗಳನ್ನು ಉನ್ನತೀಕರಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಜತೆಗೆ ಸಂಚಾರಿ ಪೊಲೀಸರ ಸಮವಸ್ತ್ರ ಬದಲಿಸುವ  ಬಗ್ಗೆಯೂ ಚರ್ಚಿಸಿದ್ದು, ಈ ಬಗ್ಗೆ  ಪ್ರಸ್ತಾವನೆ ಸಲ್ಲಿಸಲು  ನಿರ್ಧರಿಸಲಾಗಿದೆ ಎಂದು ಪರಮೇಶ್ವರ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com