
ಬೆಂಗಳೂರು: ಕಬ್ಬನ್ ಉದ್ಯಾನದಲ್ಲಿ ಶುಕ್ರವಾರ ಸಂಜೆ 10ರಿಂದ ಸೋಮವಾರ ಬೆಳಗ್ಗೆ 8ರವರಗೆ ವಾಹನ ಸಂಚಾರ ನಿಷೇಧಿಸಲಾಗಿದೆ.
ಮುಂಬರುವ ದಿನಗಳಲ್ಲಿ ಶನಿವಾರವೂ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲು ತೋಟಗಾರಿಕಾ ಇಲಾಖೆ ನಿರ್ಧರಿಸಿದೆ. ವರ್ಷದ 3 ರಾಷ್ಟ್ರೀಯ ದಿನಾಚರಣೆ ಸಂದರ್ಭದಲ್ಲೂ ಕಬ್ಬನ್ ಪಾರ್ಕ್‍ನಲ್ಲಿ ವಾಹನ ಸಂಚಾರ ನಿಷೇಧಿಸಲಾಗುತ್ತದೆ. ಪ್ರತಿ ಭಾನುವಾರ ಕಬ್ಬನ್ ಉದ್ಯಾನದಲ್ಲಿ ವಾಹನ ನಿಷೇಧವಿರುವ ಹಿನ್ನೆಲೆಯಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಳು ನಡೆಯುತ್ತಿವೆ. ಭಾನುವಾರ ನಡೆಯಲಿರುವ ಉದಯರಾಗ ಕಾರ್ಯಕ್ರಮದಲ್ಲಿ ಎಂ.ಎಸ್. ತ್ಯಾಗರಾಜು ತಂಡದಿಂದ ಪಿಟೀಲು ವಾದನ ನಡೆಯಲಿದೆ.
ಯೂನಿವರ್ಸ್ ಆಟ್ರ್ಸ್ ಫೌಂಡೇಶನ್‍ನ ಅಂಜನ ರಮೇಶ್ ಅವರಿಂದ ಭರತನಾಟ್ಯ, ಬಾಲಭವನ ಸಹಯೋಗದಲ್ಲಿ ಭ್ರಮರಿ ನೃತ್ಯ ತಂಡದಿಂದ ಕಾವ್ಯ ಬಾಗಿನ ನಡೆಯಲಿದೆ. ಸಂಜೆ 4ಗಂಟೆಗೆ ಎಸ್‍ಎಫ್ಎಸ್ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ. ಶಾಂತರಾಜು ಅವರಿಂದ ತೀ.ನಂ. ಶ್ರೀಕಂಠಯ್ಯ ಅವರ ಕೊಡುಗೆಗಳು ಬಗ್ಗೆ ಉಪನ್ಯಾಸವಿದೆ. ವಿದ್ಯಾರಣ್ಯ ಸ್ವಯಂ ಸೇವಾ ಸಂಸ್ಥೆ ಮಕ್ಕಳಿಗಾಗಿ ನೃತ್ಯ, ಚಿತ್ರಬಿಡಿಸುವ ಕಾರ್ಯಕ್ರಮ, ಚಿತ್ರಗಳಿಗೆ ಬಣ್ಣ ಹಚ್ಚುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಸಂಧ್ಯಾರಾಗ ಕಾರ್ಯಕ್ರಮದಲ್ಲಿ ಶಾಂತರಾಜು ಮತ್ತು ತಂಡದಿಂದ ಜಾನಪದ ಸಂಭ್ರಮ ನಡೆಯಲಿದೆ.
Advertisement