ಹೆಚ್ಚುತ್ತಿವೆ ಗರ್ಭಪಾತ ಪ್ರಕರಣಗಳು: ಡಾ. ಪದ್ಮಿನಿ ಪ್ರಸಾದ್

ಲೈಂಗಿಕ ಆರೋಗ್ಯದ ಅರಿವಿಲ್ಲದೆ ನಿತ್ಯ ಹತ್ತಾರು ಘಟನೆಗಳು ನಡೆಯುತ್ತಿವೆ. ಗ್ರಾಮೀಣ ಭಾಗಗಳಲ್ಲಿ ಈ ಪ್ರಮಾಣ ಹೆಚ್ಚಿದ್ದು, ಮದುವೆಗೂ ಮೊದಲೇ...ಗರ್ಭಪಾತ
ಬೆಂಗಳೂರಿನಲ್ಲಿ ಸೋಮವಾರ ನಡೆದ 2030ರ  ಸುಸ್ಥಿರ ಅಭಿವೃದ್ಧಿ ಜಾಗತಿಕ ಗುರಿಗಳು ಮತ್ತು ಲೈಂಗಿಕ ಸಂತಾನೋತ್ಪತ್ತಿ ಆರೋಗ್ಯ  ಮತ್ತು  ಹಕ್ಕುಗಳ ಪ್ರಾಮುಖ್ಯತೆ' ಕುರಿತ ಕಾರ್ಯಕ್ರಮದಲ್ಲಿ
ಬೆಂಗಳೂರಿನಲ್ಲಿ ಸೋಮವಾರ ನಡೆದ 2030ರ ಸುಸ್ಥಿರ ಅಭಿವೃದ್ಧಿ ಜಾಗತಿಕ ಗುರಿಗಳು ಮತ್ತು ಲೈಂಗಿಕ ಸಂತಾನೋತ್ಪತ್ತಿ ಆರೋಗ್ಯ ಮತ್ತು ಹಕ್ಕುಗಳ ಪ್ರಾಮುಖ್ಯತೆ' ಕುರಿತ ಕಾರ್ಯಕ್ರಮದಲ್ಲಿ

ಬೆಂಗಳೂರು: ಲೈಂಗಿಕ ಆರೋಗ್ಯದ ಅರಿವಿಲ್ಲದೆ ನಿತ್ಯ ಹತ್ತಾರು ಘಟನೆಗಳು ನಡೆಯುತ್ತಿವೆ. ಗ್ರಾಮೀಣ ಭಾಗಗಳಲ್ಲಿ ಈ ಪ್ರಮಾಣ ಹೆಚ್ಚಿದ್ದು, ಮದುವೆಗೂ ಮೊದಲೇ ಗರ್ಭಪಾತ   ಮಾಡಿಕೊಳ್ಳುವ ಪ್ರಕರಣ ಹೆಚ್ಚಾಗುತ್ತಿದೆ. ಎಚ್‍ಐವಿ ಏಡ್ಸ್ ಕುರಿತಾಗಿಯೂ ಮಾಹಿತಿಯ ಕೊರತೆ ಸಮಾಜದಲ್ಲಿ ಎದ್ದು ಕಾಣುತ್ತಿದೆ ಎಂದು ಕುಟುಂಬ  ಯೋಜನೆ  ಸಂಘಟನೆಯ ಬೆಂಗಳೂರು ಘಟಕದ ಉಪಾಧ್ಯಕ್ಷೆ ಡಾ.ಪದ್ಮಿನಿ ಪ್ರಸಾದ್ ಕಳವಳ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸೋಮವಾರ ಭಾರತೀಯ ಕುಟುಂಬ ಯೋಜನೆ ಸಂಘಟನೆ ಹಮ್ಮಿಕೊಂಡಿದ್ದ   2030ರ ಸ್ಥಿರ ಅಭಿವೃದ್ಧಿ ಜಾಗತಿಕ ಗುರಿಗಳು ಮತ್ತು ಲೈಂಗಿಕ    ಸಂತಾನೋತ್ಪತ್ತಿ ಆರೋಗ್ಯ ಮತ್ತು  ಹಕ್ಕುಗಳ  ಪ್ರಾಮುಖ್ಯತೆ' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಲೈಂಗಿಕ ಆರೋಗ್ಯ ಮತ್ತು  ಸಂತಾನೋತ್ಪತ್ತಿ ಹಕ್ಕುಗಳ ಕುರಿತು ಜನಸಾಮಾನ್ಯರಲ್ಲಿ ಅರಿವು  ಮೂಡಿಸದೇ ಇದ್ದರೆ ದೇಶದ  ಸುಸ್ಥಿರ ಅಭಿವೃದ್ಧಿ  ಸಾಧ್ಯವಿಲ್ಲ ಎಂದು ಹೇಳಿದರು.

ಲೈಂಗಿಕ ಆರೋಗ್ಯ, ಗರ್ಭಪಾತದ ವಿರುದ್ಧ ಸಮಾಜವನ್ನು ಎಚ್ಚರಿಸುವ ಕಾರ್ಯ ಮಾ ಡಬೇಕಾಗಿದೆ. ವಿವಿಧ ಸಂಘಟನೆಗಳು ಹಾಗೂ ಸರ್ಕಾರ ಅರಿವು ಮೂಡಿಸುವ ಕಾರ್ಯದಲ್ಲಿ  ತೊಡಗಿಕೊಂಡಿದೆ. ಆದರೂ, ಗ್ರಾಮೀಣ ಪ್ರದೇಶವನ್ನು ಸಮಗ್ರವಾಗಿ ತಲುಪುವಲ್ಲಿ  ವಿಫಲವಾಗುತ್ತಿದ್ದೇವೆ ಎಂದ ಅವರು, ಲೈಂಗಿಕ ಆರೋಗ್ಯ ಅಥವಾ ಸಂತಾನೋತ್ಪತ್ತಿ ಹಕ್ಕಿನ ಸಮಸ್ಯೆಗೆ ಒಳಗಾದವರು ಏಕಾಏಕಿ ತಪ್ಪು ನಿರ್ಧಾರ ತೆಗೆದುಕೊಳ್ಳುವುದು ಸರಿಯಲ್ಲ. ಸಮಸ್ಯೆ  ಉದ್ಭವಿಸಲು ಕಾರಣ ಏನೆಂಬುದನ್ನು ಅರಿತು, ಪಾಲಕರು- ವೈದ್ಯರೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕೇ ಹೊರತು, ಜೀವಹಾನಿ ಮಾಡಿಕೊಳ್ಳುವುದು ಸರಿಯಲ್ಲ ಎಂದರು.

2030ರ ವೇಳೆಗೆ ಭಾರತ ಲೈಂಗಿಕ ಆರೋಗ್ಯ ಹೊಂದಿರುವ ದೇಶವಾಗಬೇಕು. ಸಂತಾನೋತ್ಪತ್ತಿ ಹಕ್ಕುಗಳ ಕುರಿತು ಎಲ್ಲರೂ ಸ್ಪಷ್ಟವಾಗಿ ತಿಳಿದಿರಬೇಕು ಮತ್ತು ಈ ಮೂಲಕ  ಸ್ಥಿರ ಅಭಿವೃದ್ಧಿ ಕಾಣುವ ಗುರಿಯನ್ನು ನಮ್ಮ ಸಂಘಟನೆ ಹೊಂದಿದೆ ಎಂಬ  ಮಾಹಿತಿ  ನೀಡಿದರು.

ತಾಯಿ-ಶಿಶುಮರಣ ಕಡಿತಗೊಳಿಸುವ ಪಣ

ರಾಜ್ಯದಲ್ಲಿ 1 ಲಕ್ಷ ಜನನಕ್ಕೆ 144, ಬೆಂಗಳೂರಿನಲ್ಲಿ 1ಲಕ್ಷ ಜನನಕ್ಕೆ 178 ತಾಯಂದಿರ ಮರಣ ಸಂಭವಿಸುತ್ತಿದೆ. ಅದೇ ರೀತಿ ರಾಜ್ಯದಲ್ಲಿ 1000 ಸಜೀವ ಶಿಶು ಜನನಕ್ಕೆ 31 ಶಿಶುಗಳ ಮರಣ,  ಬೆಂಗಳೂರಿನಲ್ಲಿ ಒಂದು ಸಾವಿರಕ್ಕೆ 45 ಶಿಶುಗಳ ಮರಣ ದಾಖಲಾಗುತ್ತಿದೆ. ಈ   ಪ್ರಮಾಣವನ್ನು ಕಡಿಮೆ ಮಾಡುವ ದೃಷ್ಟಿಯಿಂದ ಫ್ಯಾಮಿಲಿ ಪ್ಲಾನಿಂಗ್  ಅಸೋಸಿಯೇಷನ್  ಆಫ್  ಇಂಡಿಯಾ ವಿಶೇಷ ಯೋಜನೆಯನ್ನು ಕೈಗೆತ್ತಿಕೊಂಡು ಕಾರ್ಯೋನ್ಮುಖವಾಗಿದೆ. `2030ರ  ಸುಸ್ಥಿರ ಅಭಿವೃದ್ಧಿ ಜಾಗತಿಕ ಗುರಿಗಳು ಮತ್ತು ಲೈಂಗಿಕ ಸಂತಾನೋತ್ಪತ್ತಿ ಆರೋಗ್ಯ  ಮತ್ತು  ಹಕ್ಕುಗಳ ಪ್ರಾಮುಖ್ಯತೆ' ಕುರಿತು ನಡೆದ ಸಭೆಯಲ್ಲಿ ಈ ವಿಚಾರ ಪ್ರಸ್ತಾಪವಾಯಿತು.  2030ರಲ್ಲಿ ಜಾಗತಿಕ ತಾಯಂದಿರ ಮರಣ  ಪ್ರಮಾಣವನ್ನು 1 ಲಕ್ಷ ಸಜೀವ ಜನನಕ್ಕೆ  70 ಕ್ಕಿಂತ ಕೆಳ ಪ್ರಮಾಣಕ್ಕೆ ಇಳಿಕೆ ಮಾಡುವುದು, 5ಕ್ಕಿಂತ ಒಳಗಿನ ಮರಣ ಪ್ರಮಾಣವನ್ನು  ಕನಿಷ್ಠ 1000ಕ್ಕೆ ಸಜೀವ ಜನನಕ್ಕೆ ಕನಿಷ್ಠ 12 ಕ್ಕಿಂತ ಕಡಿಮೆ  ಮಾಡುವುದು, 5 ವರ್ಷಕ್ಕಿಂತ  ಕೆಳಗಿನ ಮಕ್ಕಳು  ಮತ್ತು ನವಜಾತ ಶಿಶುವಿನ ಮರಣವನ್ನು 2030ರಷ್ಟರಲ್ಲಿ ಸಂಪೂರ್ಣ  ತಡೆಗಟ್ಟುವ ಬಗ್ಗೆ  ನಿರ್ಣಯ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com