ಅಡಮಾನ ಮುಕ್ತ ಮಾಡಲು ತೀರ್ಮಾನ

ಬಿಬಿಎಂಪಿಯು ಕೆ.ಆರ್.ಮಾರುಕಟ್ಟೆ ಹಾಗೂ ಯುಟಿಲಿಟಿ ಕಟ್ಟಡಗಳನ್ನು ಅಡಮಾನ ಮಾಡಿ ಹುಡ್ಕೋದಿಂದ ಪಡೆದಿರುವ ರು.1251 ಕೋಟಿಗಳಿಗೆ ಈ ಎರಡೂ ಕಟ್ಟಡಗಳನ್ನು ಅಡಮಾನ ಮುಕ್ತಗೊಳಿಸಲು ತೀರ್ಮಾನಿಸಿದೆ...
ಕೆ.ಆರ್.ಮಾರುಕಟ್ಟೆ (ಸಂಗ್ರಹ ಚಿತ್ರ)
ಕೆ.ಆರ್.ಮಾರುಕಟ್ಟೆ (ಸಂಗ್ರಹ ಚಿತ್ರ)

ಬೆಂಗಳೂರು: ಬಿಬಿಎಂಪಿಯು ಕೆ.ಆರ್.ಮಾರುಕಟ್ಟೆ ಹಾಗೂ ಯುಟಿಲಿಟಿ ಕಟ್ಟಡಗಳನ್ನು ಅಡಮಾನ ಮಾಡಿ ಹುಡ್ಕೋದಿಂದ ಪಡೆದಿರುವ ರು.1251 ಕೋಟಿಗಳಿಗೆ ಈ ಎರಡೂ ಕಟ್ಟಡಗಳನ್ನು ಅಡಮಾನ ಮುಕ್ತಗೊಳಿಸಲು ತೀರ್ಮಾನಿಸಿದೆ.

ನಗರದ ಕೆ.ಆರ್ ಮಾರುಕಟ್ಟೆಯನ್ನು ರು.500 ಕೋಟಿಗೆ ಅಡಮಾನ ಇಡಲಾಗಿತ್ತು. ಕಟ್ಟಡದ ಮಾರುಕಟ್ಟೆ ಮೌಲ್ಯ ಸುಮಾರು ರು.837 ಕೋಟಿಯಾಗಿದ್ದು, 2027ರವರೆಗೆ ಬಡ್ಡಿ ಹಾಗೂ ಅಸಲು ಸೇರಿ ರು.965 ಕೋಟಿ ಸಾಲ ಪಾವತಿಸಬೇಕಿತ್ತು. ಅದೇ ರೀತಿ ರು.974 ಕೋಟಿ ಮೌಲ್ಯದ ಯುಟಿಲಿಟಿ ಕಟ್ಟಡವನ್ನು ನಾಲ್ಕು ಭಾಗಗಳನ್ನಾಗಿ ಮಾಡಿ ರು.751 ಕೋಟಿಗೆ ಅಡಮಾನವಿಡಲಾಗಿತ್ತು. ಈ ಎರಡೂ ಕಟ್ಟಡಗಳಿಂದ ಸುಮಾರು ರು.1251 ಕೋಟಿ ಸಾಲದ ಜತೆಗೆ ಕೋಟ್ಯಂತರ ಬಡ್ಡಿಯನ್ನು ದೀರ್ಘಾವಧಿಗೆ ಪಾವತಿಸಬೇಕಿತ್ತು.

ವಿವಿಧ ಕಾಲಿಕ ಸಾಲ ಮರುಪಾವತಿಯಿಂದ ಪಾಲಿಕೆ ಖಜಾನೆಗೆ ಹೆಚ್ಚಿನ ಹೊರೆ ಬೀಳುತ್ತಿದೆ ಎಂಬುದನ್ನು ಮನಗಂಡ ಬಿಬಿಎಂಪಿ ಇದೀಗ ಕೆ.ಆರ್ ಮಾರುಕಟ್ಟೆ ಹಾಗೂ ಯುಟಿಲಿಟಿ ಕಟ್ಟಡಗಳನ್ನು ಅಡಮಾನದಿಂದ ಬಿಡಿಸಿಕೊಳ್ಳಲು ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com