ಉಪ ಲೋಕಾಯುಕ್ತ ನ್ಯಾ.ಸುಭಾಷ್ ಆಡಿ ವಿರುದ್ಧ ದಾಖಲೆ

ಉಪ ಲೋಕಾಯುಕ್ತ ನ್ಯಾ.ಸುಭಾಷ್ ಆಡಿ ವಿರುದ್ಧ ದಾಖಲೆ ಪೂರೈಸುತ್ತಿರುವವರಿಗೆ ಮಾಹಿತಿ ಹಕ್ಕು ಆಯುಕ್ತರ ಹುದ್ದೆ ನೀಡಲು ಸರ್ಕಾರ ಮುಂದಾಗಿದೆ....
ನ್ಯಾ. ಸುಭಾಷ್.ಬಿ. ಆಡಿ
ನ್ಯಾ. ಸುಭಾಷ್.ಬಿ. ಆಡಿ

ಬೆಂಗಳೂರು: ಉಪ ಲೋಕಾಯುಕ್ತ ನ್ಯಾ.ಸುಭಾಷ್ ಆಡಿ ವಿರುದ್ಧ ದಾಖಲೆ ಪೂರೈಸುತ್ತಿರುವವರಿಗೆ ಮಾಹಿತಿ ಹಕ್ಕು ಆಯುಕ್ತರ ಹುದ್ದೆ ನೀಡಲು ಸರ್ಕಾರ ಮುಂದಾಗಿದೆ ಎಂದು ಮಾಜಿ ಸಚಿವ ಸುರೇಶ್‍ಕುಮಾರ್ ಆರೋಪಿಸಿದ್ದಾರೆ.

ಸರ್ಕಾರ ಹೇಗಾದರೂ ಮಾಡಿ ನ್ಯಾ.ಸುಭಾಷ್ ಆಡಿ ಅವರನ್ನು ಪದಚ್ಯುತಿಗೊಳಿಸಬೇಕೆಂದು ನಿರ್ಧರಿಸಿದ್ದು, ಇದಕ್ಕಾಗಿ ಸಾಕ್ಷ್ಯಾಧಾರಗಳನ್ನು ಈಗ ಹುಡುಕುತ್ತಿದೆ. ಇದಕ್ಕೆ ಸಹಾಯಕರಾಗಿದ್ದಾರೆ ಎಂಬ ಕಾರಣಕ್ಕೆ ಆರ್‍ಟಿಐ ಕಾರ್ಯಕರ್ತ ಮೋಹನ್‍ಕುಮಾರ್ ಮಾಳಿಗೇರ್ ಅವರನ್ನ ಆಯುಕ್ತರನ್ನಾಗಿ ಮಾಡಬೇಕೆಂದು ಸಚಿವರೇ ಹೇಳುತ್ತಿದ್ದಾರೆ.

ಈ ಬಗ್ಗೆ ಸಚಿವರಾದ ವಿನಯ್ ಕುಲಕರ್ಣಿ ಮತ್ತು ಎಚ್.ಸಿ.ಮಹದೇವಪ್ಪ ಶಿಫಾರಸು ಮಾಡಿದ್ದಾರೆ ಎಂದು ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು. ಮಾಹಿತಿ ಹಕ್ಕು ಅರ್ಜಿ ಸಲ್ಲಿಸುವುದರಲ್ಲಿ ಹೆಚ್ಚು ಅನುಭವವುಳ್ಳ ಕಾರಣ ಮಾಳಿಗೇರ್ ಅವರನ್ನು ಆಯುಕ್ತರನ್ನಾಗಿ ಮಾಡಬೇಕೆಂದು ವಿನಯ್ ಕುಲಕರ್ಣಿ ಶಿಫಾರಸು ಮಾಡಿದ್ದಾರೆ. ತಮಾಷೆಯೆಂದರೆ ಮಾಳಿಗೇರ್ ಹೆಚ್ಚು ಆರ್‍ಟಿಐ ಮೇಲ್ಮನವಿ ಸಲ್ಲಿಸಿ ಅನುಭವ ಹೊಂದಿರುವ ಕಾರಣಕ್ಕೆ ಆಯುಕ್ತರನ್ನಾಗಿ ಮಾಡಬೇಕೆಂದು ಶಿಫಾರಸು ಮಾಡಿದ್ದಾರೆ. ಅಂದರೆ, ಸುಭಾಷ್ ಆಡಿ ವಿರುದ್ಧ ದಾಖಲೆ ಸಂಗ್ರಹಿಸುತ್ತಿರುವ ಮಾಳಿಗೇರ್‍ಗೂ ಸರ್ಕಾರಕ್ಕೂ ಯಾವ ರೀತಿ ಸಂಬಂಧವಿದೆ ಎನ್ನುವುದು ಇಲ್ಲಿ ವ್ಯಕ್ತವಾಗುತ್ತದೆ ಎಂದು ಸುರೇಶ್
ಕುಮಾರ್ ಶಂಕಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com