ಕರಾಮುವಿ ವಿರುದ್ಧ ವಿದ್ಯಾರ್ಥಿಗಳ ಧರಣಿ

ಯುಜಿಸಿ ಮಾನ್ಯತೆ ಪಡೆಯದೆ ತಾಂತ್ರಿಕ ಕೋರ್ಸ್‍ಗಳನ್ನು ನಡೆಸುತ್ತಿರುವ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ದೇಶಾದ್ಯಂತ...ಲಕ್ಷಾಂತರ
ಯುಜಿಸಿ ಮಾನ್ಯತೆ ಪಡೆಯದೆ ತಾಂತ್ರಿಕ ಕೋರ್ಸ್‍ಗಳನ್ನು ನಡೆಸುತ್ತಿರುವ  ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ  ಲಕ್ಷಾಂತರ ವಿದ್ಯಾರ್ಥಿಗಳು ತೊಂದರೆ  ಅನುಭವಿಸುವಂತಾಗಿದೆ ಎಂದು ವಿದ್ಯ
ಯುಜಿಸಿ ಮಾನ್ಯತೆ ಪಡೆಯದೆ ತಾಂತ್ರಿಕ ಕೋರ್ಸ್‍ಗಳನ್ನು ನಡೆಸುತ್ತಿರುವ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಲಕ್ಷಾಂತರ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ ಎಂದು ವಿದ್ಯ

ಬೆಂಗಳೂರು: ಯುಜಿಸಿ ಮಾನ್ಯತೆ ಪಡೆಯದೆ ತಾಂತ್ರಿಕ ಕೋರ್ಸ್‍ಗಳನ್ನು ನಡೆಸುತ್ತಿರುವ  ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ದೇಶಾದ್ಯಂತ  ಲಕ್ಷಾಂತರ ವಿದ್ಯಾರ್ಥಿಗಳು    ತೊಂದರೆ  ಅನುಭವಿಸುವಂತಾಗಿದೆ ಎಂದು ಕೇರಳ ಮೂಲದ ತಾಂತ್ರಿಕ ವಿದ್ಯಾರ್ಥಿ   ಸಂಘಟನೆ ಆರೋಪಿಸಿದೆ.

ಗುರುವಾರ ನಗರದ ರೈಲ್ವೆ ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದ ಸಂಘಟನೆಯು, ನಂತರ  ರಾಜ್ಯಪಾಲರಿಗೆ ಮನವಿ ಸಲ್ಲಿಸಿತು.

ಪ್ರತಿಭಟನೆಯಲ್ಲಿ ಮಾತನಾಡಿದ ಸಂಘಟನೆಯ ಅಧ್ಯಕ್ಷ ಡಾ. ಬಿ.ಆರ್. ಮಂಜುನಾಥ್, ಕೇರಳ ರಾಜ್ಯವೊಂದರಲ್ಲೇ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ(ಕರಾಮುವಿ)ವು ಸುಮಾರು 85ಕ್ಕೂ ಹೆಚ್ಚು ಪ್ರಾಂತೀಯ ಕಚೇರಿಗಳನ್ನು ಹೊಂದಿದೆ. 25 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ದೂರ ಶಿಕ್ಷಣ ಪಡೆಯುತ್ತಿದ್ದಾರೆ. ದೇಶಾದ್ಯಂತ ಸುಮಾರು 400 ಕೇಂದ್ರಗಳ   ಮೂಲಕ  ಎರಡು ಲಕ್ಷಕ್ಕೂ  ಹೆಚ್ಚಿನ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು,  ಅವರ ಪರಿಸ್ಥಿತಿ ಕೂಡ ಭಿನ್ನವಾಗಿಲ್ಲ ಎಂದು ಹೇಳಿದರು.

ಇದೀಗ ಯುಜಿಸಿಯು ಮುಕ್ತ ವಿವಿಯ ಮಾನ್ಯತೆ ರದ್ದು ಮಾಡಿರುವ ಕಾರಣ  ವಿದ್ಯಾರ್ಥಿಗಳಿಗೆ  ತೊಂದರೆಯಾಗಿದೆ. 2012- ರಿಂದ 2014ರ ಸಾಲಿನಲ್ಲಿ ವ್ಯಾಸಂಗ ಮಾಡಿದ   ಎಂಜಿನಿಯರಿಂಗ್  ಮತ್ತು ಡಿಪ್ಲೊಮಾ ವಿದ್ಯಾರ್ಥಿಗಳು ಸಮಸ್ಯೆಗೆ ಸಿಲುಕಿದ್ದಾರೆ.ವಿದ್ಯಾರ್ಥಿಗಳ  ಹಿತದೃಷ್ಟಿಯಿಂದ ಕೂಡಲೇ  ರಾಜ್ಯ ಸರ್ಕಾರವು ಮುಂದಾಗಿ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಮತ್ತು ಉದ್ಯೋಗಕ್ಕೆ  ತೊಡಕಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com