
ಮಂಗಳೂರು: ಮಂಗಳೂರಿನಲ್ಲಿ ಬಜರಂಗದಳದ ಕಾರ್ಯಕರ್ತರು ಅಸಹಿಷ್ಣುತೆ ಬಗ್ಗೆ ಹೇಳಿಕೆ ನೀಡಿದ್ದ ಬಾಲಿವುಡ್ ನಟ ಶಾರುಖ್ ಖಾನ್ ಅಭಿನಯದ 'ದಿಲ್‌ವಾಲೆ' ಚಿತ್ರ ಪ್ರದರ್ಶನವನ್ನು ತಡೆ ಪ್ರತಿಭಟಿಸಿದರು.
ಬಜರಂಗದಳ ಕಾರ್ಯಕರ್ತರು ಚಿತ್ರ ಪ್ರದರ್ಶನವನ್ನು ವಿರೋಧಿಸಿ ಚಿತ್ರಮಂದಿರ ಪ್ರವೇಶಿಸಿದ ಧರಣಿ ನಡೆಸುತ್ತಿದ್ದರಿಂದ, ಭದ್ರತೆಯ ದೃಷ್ಟಿಯಿಂದ ಚಿತ್ರ ಮಾಲೀಕರು ಪ್ರದರ್ಶನವನ್ನು ರದ್ದುಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರೋಹಿತಿ ಶೆಟ್ಟಿ ನಿರ್ದೇಶನದ ದಿಲ್‌ವಾಲೆ ಚಿತ್ರ ನಗರ ಮೂರು ಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿತ್ತು. ಆದರೆ ನಿನ್ನೆ ಇದ್ದಕ್ಕಿದ್ದಂತೆ ಬಜರಂಗದಳದ ಕಾರ್ಯಕರ್ತರು ಸಿಟಿ ಸೆಂಟರ್ ಮಾಲ್, ಫೊರಂ ಮಾಲ್ ಹಾಗೂ ಫೊರಂ ಫಿಝಾ ಮಾಲ್ ಮತ್ತು ಭರತ್ ಮಾಲ್ ಬಳಿ ಪ್ರತಿಭಟನೆ ನಡೆಸಿದ್ದರಿಂದ ಚಿತ್ರ ಪ್ರದರ್ಶನವನ್ನು ರದ್ದುಗೊಳಿಸಲಾಗಿದೆ.
ಶಾರುಖ್ ಖಾನ್ ಹಾಗೂ ಆಮಿರ್ ಖಾನ್ ಅಭಿನಯದ ಯಾವುದೇ ಚಿತ್ರಗಳನ್ನು ಪ್ರದರ್ಶಿಸಿದಂತೆ ಪ್ರತಿಭಟನಾಕಾರರು ಚಿತ್ರಮಂದಿರದ ಮಾಲೀಕರಿಗೆ ಎಚ್ಚರಿಸಿದ್ದಾರೆ.
Advertisement