ಕಾದಂಬರಿಗಳ ಓದಿನಿಂದಾಗಿ ಸಿನೆಮಾ ಕ್ಷೇತ್ರಕ್ಕೆ ಬಂದೆ

ಬಾಲ್ಯದಲ್ಲಿ ಸಿನಿಮಾ ಬಗ್ಗೆ ವ್ಯಾಮೋಹವಿರಲಿಲ್ಲ. ನಂತರ ಕುವೆಂಪು, ಕಾರಂತರ ಕಾದಂಬರಿಗಳನ್ನು ಓದುತ್ತಾ ಮತ್ತು ಪುಣೆಯಲ್ಲಿನ ಸಹಪಾಠಿಗಳೊಂದಿಗಿನ ಒಡನಾಟ ಸಿನಿಮಾಕ್ಕೆ ಕರೆದುಕೊಂಡು ಬಂತು. ಇದು ಕನ್ನಡಕ್ಕೆ ಸಂದಿರುವ ಆರು ಸ್ವರ್ಣ ಕಮಲದಲ್ಲಿ ನಾಲ್ಕರ ಪಾಲು ಹೊಂದಿರುವ...
ನಿರ್ದೇಶಕ ಗಿರೀಶ್ ಕಾಸರವಳ್ಳಿ (ಸಂಗ್ರಹ ಚಿತ್ರ)
ನಿರ್ದೇಶಕ ಗಿರೀಶ್ ಕಾಸರವಳ್ಳಿ (ಸಂಗ್ರಹ ಚಿತ್ರ)
Updated on

ಬೆಂಗಳೂರು: ಬಾಲ್ಯದಲ್ಲಿ ಸಿನಿಮಾ ಬಗ್ಗೆ ವ್ಯಾಮೋಹವಿರಲಿಲ್ಲ. ನಂತರ ಕುವೆಂಪು, ಕಾರಂತರ ಕಾದಂಬರಿಗಳನ್ನು ಓದುತ್ತಾ ಮತ್ತು ಪುಣೆಯಲ್ಲಿನ ಸಹಪಾಠಿಗಳೊಂದಿಗಿನ ಒಡನಾಟ ಸಿನಿಮಾಕ್ಕೆ ಕರೆದುಕೊಂಡು ಬಂತು. ಇದು ಕನ್ನಡಕ್ಕೆ ಸಂದಿರುವ ಆರು ಸ್ವರ್ಣ ಕಮಲದಲ್ಲಿ ನಾಲ್ಕರ ಪಾಲು ಹೊಂದಿರುವ ಪದ್ಮಶ್ರೀ ಪುರಸ್ಕೃತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರ ಮಾತು.

ನಗರದ ಗಾಂಧಿಭವನದಲ್ಲಿ ಸೋಮವಾರ ಕರ್ನಾಟಕ ಚಲನಚಿತ್ರ ಅಕಾಡೆಮಿ ಏರ್ಪಡಿಸಿದ್ದ ಬೆಳ್ಳಿಹೆಜ್ಜೆ ಸಂವಾದದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ತಮಿಳು ಸಿನಿಮಾಗಳು ವೇಷ-ಭೂಷಣದಿಂದ, ಮಲಯಾಳಂ ಸಿನಿಮಾಗಳು ಪರಿಸರದಿಂದ ಗುರುತಿಸಿಕೊಳ್ಳುತ್ತಿವೆ. ಆದರೆ ಕನ್ನಡ ಸಿನಿಮಾಗಳು ನಿರ್ದಿಷ್ಟ ಸ್ಥಳೀಯತೆಯಲ್ಲಿ ನಿರ್ಮಾಣ ಮಾಡದ ಕಾರಣ ಗುರುತಿಸಿಕೊಳ್ಳುತ್ತಿ ಲ್ಲ. ಗುಣಮಟ್ಟದಲ್ಲಿ ಪ್ರಗತಿ ಸಾಧಿಸಬೇಕಿದೆ. ಸದ್ಯ ಕನ್ನಡ ಸಿನಿಮಾಗಳು ತಾಂತ್ರಿಕತೆಯಿಂದ ಅಭಿ-ನಯ ತೋರಿಸುತ್ತಿರುವುದು ಬೇರೆಯವರನ್ನು ಅನುಕರಣೆ ಮಾಡಿದಂತಿದೆ ಎಂದರು.

ಜನಪ್ರಿಯ ನಟರ ಜತೆ ಏಕೆ ಸಿನಿಮಾ ಏಕೆ ಮಾಡಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾವು ವರನಟ ಡಾ. ರಾಜಕುಮಾರ್ ಅವರ ಮನೆಗೆ ನಾವು ಹೋಗುವ ರೀತಿ ಇರಲಿಲ್ಲ.
ಹಾಗಾಗಿ ಪತ್ರಕರ್ತರೊಬ್ಬರ ಮೂಲಕ ರಾಜಕುಮಾರ್ ಅವರಿಗೆ ಹೇಳಿ ಕಳುಹಿಸಿದೆ ಎಂದರು. ಚಿತ್ರ ನಿರ್ದೇಶಕ ಪಿ. ಶೇಷಾದ್ರಿ, ಚ.ಹ. ರಘುನಾಥ್ ಪಾಲ್ಗೊಂಡಿದ್ದರು. ಕಾರ್ಯಕ್ರಮ
ದಲ್ಲಿ ಚಲನಚಿತ್ರ ಅಕಾಡೆಮಿ ನಿರ್ದೇಶಕ ಎಸ್ .ವಿ. ರಾಜೇಂದ್ರಸಿಂಗ್ ಬಾಬು, ನಿರ್ಮಾಪಕ ಸಾ.ರಾ. ಗೋವಿಂದು ಇದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com