ವೈಟ್‍ ಫೀಲ್ಡ್ ಠಾಣೆಗೆ ಗೃಹ ಸಚಿವ ದಿಢೀರ್ ಭೇಟಿ

ನಗರದ ವೈಟ್‍ ಫೀಲ್ಡ್ ಠಾಣೆಗೆ ಗೃಹ ಸಚಿವ ಜಿ. ಪರಮೇಶ್ವರ್ ಮಂಗಳವಾರ ದಿಢೀರ್ ಭೇಟಿ ನೀಡಿ, ಅಧಿಕಾರಿಗಳಿಗೆ ಶಾಕ್ ನೀಡಿದರು. ಬೆಳಗ್ಗೆ 8.45ಕ್ಕೆ ಇದ್ದಕ್ಕಿದ್ದಂತೆ ತಮ್ಮ ಗನ್ ಮಾ್ಯನ್‍ನೊಂದಿಗೆ ಖಾಸಗಿ ಕಾರಿನಲ್ಲಿ ಆಗಮಿಸಿದ ಸಚಿವರನ್ನು ಕಂಡು ಅಧಿಕಾರಿಗಳು ಒಂದು ಕ್ಷಣ ಕಕ್ಕಾಬಿಕ್ಕಿಯಾದರು...
ವೈಟ್‍ ಫೀಲ್ಡ್ ಠಾಣೆಗೆ ಗೃಹ ಸಚಿವ ದಿಢೀರ್ ಭೇಟಿ
ವೈಟ್‍ ಫೀಲ್ಡ್ ಠಾಣೆಗೆ ಗೃಹ ಸಚಿವ ದಿಢೀರ್ ಭೇಟಿ
Updated on

ಬೆಂಗಳೂರು: ನಗರದ ವೈಟ್‍ ಫೀಲ್ಡ್ ಠಾಣೆಗೆ ಗೃಹ ಸಚಿವ ಜಿ. ಪರಮೇಶ್ವರ್ ಮಂಗಳವಾರ ದಿಢೀರ್ ಭೇಟಿ ನೀಡಿ, ಅಧಿಕಾರಿಗಳಿಗೆ ಶಾಕ್ ನೀಡಿದರು. ಬೆಳಗ್ಗೆ 8.45ಕ್ಕೆ ಇದ್ದಕ್ಕಿದ್ದಂತೆ ತಮ್ಮ ಗನ್ ಮಾ್ಯನ್‍ನೊಂದಿಗೆ ಖಾಸಗಿ ಕಾರಿನಲ್ಲಿ ಆಗಮಿಸಿದ ಸಚಿವರನ್ನು ಕಂಡು ಅಧಿಕಾರಿಗಳು ಒಂದು ಕ್ಷಣ ಕಕ್ಕಾಬಿಕ್ಕಿಯಾದರು.

ಇದೇ ವೇಳೆ ವಿಷಯ ತಿಳಿದ ಕೂಡಲೇ ಪೂರ್ವ ವಲಯ ಹೆಚ್ಚುವರಿ ಕಮಿಷನರ್ ಹರಿಶೇಖರನ್ ಹಾಗೂ ಆಗ್ನೆಯ ವಿಭಾಗ ಡಿಸಿಪಿ ರೋಹಿಣಿ ಕಟೋಚ್ ಸೆಪೆಟ್ ಆಗಮಿಸಿದರು. ನಂತರ ಹಿರಿಯ ಹಾಗೂ ಕಿರಿಯ ಅಧಿಕಾರಿಗಳೊಂದಿಗೆ ಸುಮಾರು 2 ತಾಸು ಚರ್ಚೆ ನಡೆಸಿದರು. ಈ ಠಾಣೆ ವ್ಯಾಪ್ತಿಯಲ್ಲಿ ಐಷಾರಾಮಿ ಜನ ವಾಸ ಮಾಡುತ್ತಿದ್ದಾರೆ. ಹೆಚ್ಚು ಐಟಿ ಕಂಪನಿಗಳು, ಉದ್ಯೋಗಿಗಳು ಇದ್ದಾರೆ. ಆದ್ದರಿಂದ ಸಾರ್ವಜನಿಕರು ಹಾಗೂ ಮಲ್ಟಿನ್ಯಾಷನಲ್ ಕಂಪನಿಗಳೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳಿ. ಅಲ್ಲದೇ ಅಪಾರ್ಟ್‍ಮೆಂಟ್ ಹಾಗೂ ಸ್ಥಳೀಯ ನಿವಾಸಿಗಳೊಂದಿಗೆ ಸಮುದಾಯ ಸಭೆ, ಜನಸಂಪರ್ಕ ಸಭೆ ನಡೆಸಿ ಹಾಗೂ ಹಳೆ ಪ್ರಕರಣಗಳನ್ನು ಆದಷ್ಟು ಬೇಗ ಇತ್ಯರ್ಥಪಡಿಸಿ ಎಂದು ಸೂಚಿಸಿದರು.

ನಂತರ ಹಿರಿ, ಕಿರಿಯ ಅಧಿಕಾರಿಗಳು ಠಾಣೆಯ ಸಮಸ್ಯೆಗಳನ್ನು ಬಿಚ್ಚಿಟ್ಟರು. ಸಿಬ್ಬಂದಿ ಕೊರತೆಯಿದೆ. ಸರಿಯಾದ ಠಾಣೆ ಇಲ್ಲ ಎಂದು ಅಹವಾಲು ತೋಡಿ ಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಸಿಬ್ಬಂದಿ ಕೊರತೆ ಬಗ್ಗೆ ಚರ್ಚೆಯಾಗಿದೆ. ಸದ್ಯದಲ್ಲೇ ನೇಮಕ ಪ್ರಕ್ರಿಯೆಗೆ ಶುರುವಾಗಲಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com