ಜಲಮಂಡಳಿ: 3.28 ಕೋಟಿ ಬಾಕಿ

ಬೆಂಗಳೂರು ಜಲ ಮಂಡಳಿಯು ನೀರಿನ ಸಂಪರ್ಕ ಪಡೆದ ಗ್ರಾಹಕರಿಂದ ಬಾಕಿ ವಸೂಲು ಮಾಡಲು ಹಮ್ಮಿಕೊಂಡಿದ್ದ ಕಾರ್ಯಾಚರಣೆಯ...
ಬೆಂಗಳೂರು ಜಲಮಂಡಳಿ
ಬೆಂಗಳೂರು ಜಲಮಂಡಳಿ

ಬೆಂಗಳೂರು: ಬೆಂಗಳೂರು ಜಲ ಮಂಡಳಿಯು ನೀರಿನ ಸಂಪರ್ಕ ಪಡೆದ ಗ್ರಾಹಕರಿಂದ  ಬಾಕಿ ವಸೂಲು ಮಾಡಲು ಹಮ್ಮಿಕೊಂಡಿದ್ದ ಕಾರ್ಯಾಚರಣೆಯ ನಾಲ್ಕನೇ ಹಂತದಲ್ಲಿ  ಒಟ್ಟು  3.28 ಕೋಟಿ ವಸೂಲು ಮಾಡಿದ್ದು, ಇದರಲ್ಲಿ ಪ್ರೊರೇಟಾ, ಉಳಿಸಿಕೊಂಡಿದ್ದ ಬಾಕಿ  ಹಣವೂ ಸೇರಿದೆ.

ಈ ಕಾರ್ಯಚರಣೆಯಲ್ಲಿ ದಕ್ಷಿಣ ವಿಭಾಗದಿಂದ ಅತಿ ಹೆಚ್ಚು 81.62 ಲಕ್ಷ, ದಕ್ಷಿಣ ವಿಭಾಗದಿಂದ 66.71 ಲಕ್ಷ, ವಾಯುವ್ಯ ವಿಭಾಗದಿಂದ 36.07  ಲಕ್ಷ, ಪಶ್ಚಿಮ ವಿಭಾಗದಿಂದ 31.50 ಲಕ್ಷ,  ಕೇಂದ್ರ ವಿಭಾಗದಿಂದ 25.70 ಲಕ್ಷ, ಈಶಾನ್ಯ ವಿಭಾಗದಿಂದ 23.64 ಲಕ್ಷ, ಪಶ್ಚಿಮ  ವಿಭಾಗದಿಂದ 21.96 ಲಕ್ಷ ಹಾಗೂ ಆಗ್ನೇಯ ವಿಭಾಗದಿಂದ 21 ಲಕ್ಷ ಸೇರಿ ಒಟ್ಟು 3.28  ಟಿಎಂಸಿ   ಸಂಗ್ರಹವಾಗಿದೆ. ಈ ಹಿಂದೆ ಡಿಸೆಂಬರ್ 9ರ ಕಾರ್ಯಾಚರಣೆಯಲ್ಲಿ 1.87 ಕೋಟಿ, ಡಿಸೆಂಬರ್ 6ರ ಕಾರ್ಯಾಚರಣೆಯಲ್ಲಿ .95 ಕೋಟಿ ಸಂಗ್ರಹವಾಗಿದೆ. ಈ ಸಾಧನೆ ಮಾಡಿದ  ಜಲಮಂಡಳಿ ಸಿಬ್ಬಂದಿಯನ್ನು ಮಂಡಳಿ ಅಧ್ಯಕ್ಷ ಟಿ.ಎಂ. ವಿಜಯ್ ಭಾಸ್ಕರ್ ಅಭಿನಂದಿಸಿದ್ದಾರೆ.

ನಾಳೆ ಹೂಳೆತ್ತುವ ಕಾರ್ಯಾಚರಣೆ:  ಜಲಮಂಡಳಿಯು ಡಿಸೆಂಬರ್ 26 ರಂದು ನಗರದ ವಿವಿಧೆಡೆ ತೀವ್ರ ಹೂಳೆತ್ತುವ ಕಾರ್ಯಾಚರಣೆ  ಹಮ್ಮಿಕೊಳ್ಳಲಿದೆ.  ನೈರುತ್ಯ ಉಪ ವಿಭಾಗದ   ಸಾರಕ್ಕಿ ಅಗ್ರಹಾರ, ಕೇಂದ್ರೀಯ ಉಪವಿಭಾಗದ ಕೆ.ಜಿ. ಹಳ್ಳಿ, ವಾಯುವ್ಯ ಉಪವಿಭಾಗದ  ರಾಜಗೋಪಲನಗರ 2ನೇ ಹಂತ, ಪೀಣ್ಯ ಕೈಗಾರಿಕಾ ಪ್ರದೇಶ, ಆಗ್ನೇಯ ಉಪವಿಭಾಗದ  ಅಶೋಕನಗರ ಬಿಡಿಎ ಸಮುಚ್ಛಯ, ದೊಮ್ಮಲೂರು ಲ್‍ಐಸಿ ಕಾಲೋನಿ, ಜೆ.ಪಿ. ನಗರ 2ನೇ   ಹಂತ, ಕೋರಮಂಗಲ 8ನೇ ಹಂತ, ಉತ್ತರ ಉಪವಿಭಾಗದ ಜಾಲಹಳ್ಳಿ ಗ್ರಾಮ, ಮಹಾರಾಷ್ಟ್ರ  ಬ್ಯಾಂಕ್ ಹಿಂಭಾಗದ  ರಸ್ತೆ, ಯಲಹಂಕ 5ನೇ ಹಂತ, ಪಶ್ಚಿಮ ಉಪವಿಭಾಗದ ಬಿಎಚ್‍ಇಎಲ್ ಔಟ್, ಮೈಲಸಂದ್ರ, ಪೂರ್ವ  ಉಪ ವಿಭಾಗದ ಜಗದೀಶ ನಗರ, ವಿಭೂತಿಪುರ  ಕೆರೆ  ಬಳಿ, ಈಶಾನ್ಯ ಉಪ ವಿಭಾಗದ ಸಂಜಯ್ ನಗರ, 800 ಅಡಿ ರಸ್ತೆ ಹಾಗೂ ದಕ್ಷಿಣ  ಉಪ ವಿಭಾಗದ ಮಂಗಮ್ಮನ  ಪಾಳ್ಯ, ಓಣಿರಸ್ತೆ, ಹೊಂಗಸಂದ್ರ ಪ್ರದೇಶದಲ್ಲಿ ಕಾರ್ಯಾಚರಣೆ  ನಡೆಯಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com