ಹುಣಸೂರಲ್ಲಿ ಕೋಮು ಘರ್ಷಣೆ

ಅನಧಿಕೃತ ಜಾಗಗಳಲ್ಲಿ ಬ್ಯಾನರ್ಸ್, ಬಂಟಿಂಗ್ಸ್‍ಗಳನ್ನು ಕಟ್ಟಿದ್ದ ವಿಚಾರಕ್ಕೆ ಸಂಬಂಧಿಸಿ ಒಂದು ಕೋಮಿನ ಜನರು ವಿರೋಧ ವ್ಯಕ್ತಪಡಿಸಿದ ಹಾಗೂ ಕೂಲಿ ಕಾರ್ಮಿಕನ ಮೇಲೆ ಗುಂಪೊಂದು ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಹುಣಸೂರು ಪಟ್ಟಣದಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದು...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಹುಣಸೂರು: ಅನಧಿಕೃತ ಜಾಗಗಳಲ್ಲಿ ಬ್ಯಾನರ್ಸ್,  ಬಂಟಿಂಗ್ಸ್‍ಗಳನ್ನು ಕಟ್ಟಿದ್ದ ವಿಚಾರಕ್ಕೆ ಸಂಬಂಧಿಸಿ ಒಂದು ಕೋಮಿನ ಜನರು ವಿರೋಧ ವ್ಯಕ್ತಪಡಿಸಿದ ಹಾಗೂ ಕೂಲಿ ಕಾರ್ಮಿಕನ ಮೇಲೆ ಗುಂಪೊಂದು ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಹುಣಸೂರು ಪಟ್ಟಣದಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದು, ಡಿ. 26ರ ಬೆಳಗ್ಗೆ 8 ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಹಲ್ಲೆಯ ವಿಷಯ ತಿಳಿದು ಶುಕ್ರವಾರ ಬೆಳಗ್ಗೆಯಿಂದಲೇ ಪಟ್ಟಣದ ಸರಸ್ವತಿಪುರಂ, ಲಕ್ಷ್ಮೀನಿವಾಸ ವೃತ್ತ, ಕರೀಗೌಡರ ಬೀದಿ, ಬನ್ನಿಬೀದಿ ಮುಂತಾದೆಡೆ ಉದ್ರಿಕ್ತರು ಗುಂಪುಗೂಡಿ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆ ಪರಿಸ್ಥಿತಿಯನ್ನು ಹತೋಟಿಯಲ್ಲಿಡಲು ಮುನ್ನೆಚ್ಚರಿಕ್ಕೆ ಕ್ರಮವಾಗಿ ಜಿಲ್ಲಾಧಿಕಾರಿ ಸಿ. ಶಿಖಾ ಅವರು ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಡಿ. 25ರ ಈದ್ ಮಿಲಾದ್ ನಡೆಸಲು ಜಿಲ್ಲಾಡಳಿತ ಅನುಮತಿ ನೀಡಿದ್ದ ಹಿನ್ನೆಲೆ ಅನುಮತಿ ನೀಡಿರದ ಕೆಲವಡೆ ಬ್ಯಾನರ್ಸ್, ಬಂಟಿಂಗ್ಸ್ ಗಳನ್ನು ಕಟ್ಟಿದ್ದ ವಿಚಾರಕ್ಕೆ ಸಂಬಂಧಿಸಿ ಒಂದು ಕೋಮಿನ ಜನರು ವಿರೋಧ ವ್ಯಕ್ತಪಡಿಸಿದ್ದು ಗಲಭೆಗೆ ಕಾರಣ.

ತಕ್ಷಣ ಪೊಲೀಸರು ಪ್ರಮುಖ ವೃತ್ತಗಳಲ್ಲಿ ಬಿಗಿ ಬಂದೋಬಸ್ತ್ ಮಾಡಿದರು ಅನಧಿಕೃತ ಜಾಗಗಳಲ್ಲಿ ಕಟ್ಟಿದ್ದ ಬಂಟಿಂಗ್ಸ್‍ಗಳನ್ನು ಕಿತ್ತು ಹಾಕಲು ಗುಂಪೊಂದು ಯತ್ನಿಸಿತು. ಇದಕ್ಕೆ ಇನ್ನೊಂದು ಕೋಮಿನವರು ಆಕ್ರೋಶ ವ್ಯಕ್ತಡಿಸಿದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಆಗ ಪೊಲೀಸರು ಲಘುಲಾಠಿ ಪ್ರಹಾರ ನಡೆಸಿ, ಗುಂಪು ಚದುರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com