ಕುಕ್ಕೆ ಸುಬ್ರಹ್ಮಣ್ಯದಲ್ಲಿ ಜನಸಾಗರ

ಸಾಲು ಸಾಲು ರಜೆಗಳ ಪರಿಣಾಮ ಕುಕ್ಕೆ ಸುಬ್ರಹ್ಮಣ್ಯಕ್ಕೆ ಗುರುವಾರ ಮತ್ತು ಶುಕ್ರವಾರ ಭಾರಿ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಗುರುವಾರ ಸಂಜೆ ವೇಳೆಯಲ್ಲೇ ಭಕ್ತಸಾಗರ ಕುಕ್ಕೇ ದೇವರ ದರ್ಶನ ಪಡೆಯತೊಡಗಿತು. ಇದು ಶುಕ್ರವಾರವೂ ಮುಂದುವರಿಯಿತು...
ಕುಕ್ಕೆ ಸುಬ್ರಹ್ಮಣ್ಯ (ಸಂಗ್ರಹ ಚಿತ್ರ)
ಕುಕ್ಕೆ ಸುಬ್ರಹ್ಮಣ್ಯ (ಸಂಗ್ರಹ ಚಿತ್ರ)

ಸುಬ್ರಹ್ಮಣ್ಯ: ಸಾಲು ಸಾಲು ರಜೆಗಳ ಪರಿಣಾಮ ಕುಕ್ಕೆ ಸುಬ್ರಹ್ಮಣ್ಯಕ್ಕೆ ಗುರುವಾರ ಮತ್ತು ಶುಕ್ರವಾರ ಭಾರಿ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಗುರುವಾರ ಸಂಜೆ ವೇಳೆಯಲ್ಲೇ ಭಕ್ತಸಾಗರ ಕುಕ್ಕೇ ದೇವರ ದರ್ಶನ ಪಡೆಯತೊಡಗಿತು. ಇದು ಶುಕ್ರವಾರವೂ ಮುಂದುವರಿಯಿತು. ಹೀಗಾಗಿ ವಾಹನ ದಟ್ಟಣೆಯೂ ಹೆಚ್ಚಿತ್ತು.

ಪ್ರಮುಖ ಸೇವೆಗಳಾದ ಆಶ್ಲೇಷ ಬಲಿ, ಶೇಷಸೇವೆ, ನಾಗಪ್ರತಿಷ್ಠೆ, ಮಹಾಪೂಜೆ ಮತ್ತು ಪಂಚಾಮೃತ ಮಹಾಭಿಷೇಕಗಳನ್ನು ಅಧಿಕ ಸಂಖ್ಯೆಯಲ್ಲಿ ಭಕ್ತರು ನೆರವೇರಿಸಿದರು. ಆದಿ ಸುಬ್ರಹ್ಮಣ್ಯ ಮತ್ತು ಕುಮಾರಧಾರ ಸ್ನಾನಘಟ್ಟದಲ್ಲಿ ಭಾರಿ ಜನಸಂದಣಿ ಇತ್ತು. ಅಲ್ಲದೆ, ದೇವಳದ, ಖಾಸಗಿ ವಸತಿ ಗೃಹಗಳು ಭರ್ತಿಯಾಗಿ ವಾಸ್ತವ್ಯಕ್ಕೆ ತೊಂದರೆಯಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com