ಮತ ಚಲಾವಣೆಗೆ ದಿನವಷ್ಟೇ ಬಾಕಿ

ವಿಧಾನ ಪರಿಷತ್ ಚುನಾವಣೆ ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು ಮತದಾನಕ್ಕೆ ಒಂದು ದಿನ ಮಾತ್ರ ಬಾಕಿ ಇದೆ. ಈಗ ಅಭ್ಯರ್ಥಿಗಳ ಒಳ ಪ್ರಚಾರ ಶುರುವಾಗಿದೆ. ಇಷ್ಟೂ ದಿನ ಪಕ್ಷದ ನಾಯಕರು ಹಾಗೂ ಸ್ಥಳೀಯ ಶಾಸಕರು ಅಲ್ಲಲ್ಲಿ ವೇದಿಕೆ ರೂಪಿಸಿ ನಡೆಸುತ್ತಿದ್ದ...
(ಸಂಗ್ರಹ ಚಿತ್ರ)
(ಸಂಗ್ರಹ ಚಿತ್ರ)
Updated on

ಬೆಂಗಳೂರು: ವಿಧಾನ ಪರಿಷತ್ ಚುನಾವಣೆ ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು ಮತದಾನಕ್ಕೆ ಒಂದು ದಿನ ಮಾತ್ರ ಬಾಕಿ ಇದೆ. ಈಗ ಅಭ್ಯರ್ಥಿಗಳ ಒಳ ಪ್ರಚಾರ ಶುರುವಾಗಿದೆ. ಇಷ್ಟೂ ದಿನ ಪಕ್ಷದ ನಾಯಕರು ಹಾಗೂ ಸ್ಥಳೀಯ ಶಾಸಕರು ಅಲ್ಲಲ್ಲಿ ವೇದಿಕೆ ರೂಪಿಸಿ ನಡೆಸುತ್ತಿದ್ದ ಪ್ರಚಾರಕ್ಕೆ ತೆರೆ ಬಿದ್ದಿದೆ.

ಹಾಗೆಯೇ ಪಕ್ಷಗಳ ನಾಯಕರಾದ ಸಿದ್ದರಾಮ ಯ್ಯ, ಡಾ.ಜಿ.ಪರಮೇಶ್ವರ್, ಎಚ್.ಡಿ. ಕುಮಾರಸ್ವಾಮಿ ಮತ್ತು ಬಿ.ಎಸ್. ಯಡಿ ಯೂರಪ್ಪ, ಈಶ್ವರಪ್ಪ, ಪ್ರಹ್ಲಾದ್ ಜೋಶಿ ಅವರು ಪ್ರವಾಸ ಮತ್ತು ಪ್ರಚಾರಗಳನ್ನೂ ಮುಗಿಸಿದ್ದಾರೆ. ಇವರು ಮತ ಕ್ಷೇತ್ರಗಳಿಂದಲೂ ಹೊರ ಹೋಗಿದ್ದಾರೆ. ಹೀಗಾಗಿ ಸದ್ಯ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಮಾತ್ರ ಉಳಿದಿದ್ದು, ಅವರೇ ತೆರೆ ಮರೆ ಪ್ರಚಾರ ಆರಂಭಿಸಿದ್ದಾರೆ. ಮತದಾನಕ್ಕೆ ಇನ್ನೂ ಕೆಲವೇ ಗಂಟೆಗಳು ಉಳಿದಿರುವುದರಿಂದ ಅಭ್ಯರ್ಥಿ ಗಳು ಮತದಾರರನ್ನು ಸೆಳೆಯಲು ಕೊನೆ ಕ್ಷಣದ ಕಾಂಚಾಣ ಕಸರತ್ತು ಶುರು ಮಾಡಿದ್ದಾರೆ ಎಂದು ಪಕ್ಷದ ಕಾರ್ಯಕರ್ತರೇ ಹೇಳಿದ್ದಾರೆ.

ರಾಜ್ಯದ ಒಟ್ಟು 20 ಕ್ಷೇತ್ರಗಳ 25 ಸ್ಥಾನಗಳಿಗೆ ನಡೆಯುವ ಚುನಾವಣೆ ಕಣದಲ್ಲಿ ಎಲ್ಲಾ ಪಕ್ಷಗಳು ಮತ್ತು ಸ್ವತಂತ್ರರೂ ಸೇರಿದಂತೆ 125 ಮಂದಿ ಅಭ್ಯರ್ಥಿಗಳಿದ್ದಾರೆ. ಡಿ.27ರ ಬೆಳಗ್ಗೆ 8ರಿಂದ ಸಂಜೆ 4ಗಂಟೆವರೆಗೂ ಮತದಾನ ನಡೆಯಲಿದ್ದು, ಇದಕ್ಕಾಗಿ ಆಯೋಗ ಎಲ್ಲಾ ರೀತಿಯ ಸಿದಟಛಿತೆಯನ್ನೂ ನಡೆಸಿದೆ. ಪ್ರತಿ 8 ಮತದಾರರಿಂದ 35 ಮತದಾರರಿಗೆ ಒಂದರಂತೆ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇದೇ ರೀತಿ ಒಟ್ಟು 6314 ಮತಗಟ್ಟೆಗಳನ್ನು ಆರಂಭಿಸಲಾಗಿದೆ. ಅವುಗಳಿಗೆ ತಲಾ 4ಮಂದಿಯಂತೆ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ. ಒಟ್ಟು 1,07,123  ತದಾರರು ಮತದಾನ ಮಾಡಲಿದ್ದು, ಇವರನ್ನು ಮನವೊಲಿಸಲು ಅಭ್ಯರ್ಥಿಗಳು ಫೋನ್ ಮೊರೆ ಹೋಗುತ್ತಿದ್ದಾರೆ.

ಕಳೆದ 12 ದಿನಗಳಿಂದ ಪಕ್ಷದ ವೇದಿಕೆಗಳಿಗೆ ಕರೆದು ನಾಯಕರ ಮೂಲಕ ಮತಯಾಚಿಸುತ್ತಿದ್ದ ಅಭ್ಯರ್ಥಿಗಳು ಅಂತಿಮವಾಗಿ ತಾವೇ ರಂಗಕ್ಕಿಳಿದು ತೆರೆಮರೆ ಪ್ರಚಾರ ಮಾಡುತ್ತಿದ್ದಾರೆ. ಮೂರು ಪಕ್ಷಗಳ ಅಭ್ಯರ್ಥಿಗಳು ಸ್ಥಳೀಯ ನಾಯಕರ ಮೂಲಕ ಮತದಾರರ ಕೈ ಬೆಚ್ಚಗೆ ಮಾಡಿದ್ದಾರೆ. ಈಗ ಕೈ ತಪ್ಪುವ ಮತಗಳನ್ನು ಸೆಳೆಯಲು ಪೈಪೊೀಟಿಗೆ ಬಿದ್ದು ಕೈ ಬಿಸಿ ಮಾಡುತ್ತಿದ್ದಾರೆ. ಆದರೆ ಅಭ್ಯರ್ಥಿ ಗಳಿಗೆ ಚುನಾವಣಾ ವೆಚ್ಚ ಅನ್ವಯವಾಗದ ಕಾರಣ ಚುನಾವಣಾ ಆಯೋಗ ಏನೂ ಮಾಡಲಾಗದ ಸ್ಥಿತಿಯಲ್ಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com