ಬೆಳಗ್ಗೆ ವಿವಾಹ, ರಾತ್ರಿ ಆತ್ಮಹತ್ಯೆ!

ಮನೆಯವರನ್ನು ಒಪ್ಪಿಸಿ ಮದುವೆಯಾಗಿ ಸುಂದರವಾಗಿ ಸಂಸಾರ ಮಾಡಬೇಕೆಂದುಕೊಂಡಿದ್ದ ಜೋಡಿಹಕ್ಕಿಗಳು ಜೀವನದ ಜಂಜಡವೇ ಸಾಕೆಂದು ಸಾವಿನ ಮೊರೆಹೋದ ಕರಳು ಹಿಂಡುವ ಕಥೆ ಇದು...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)
Updated on

ತುರುವೇಕೆರೆ: ಮನೆಯವರನ್ನು ಒಪ್ಪಿಸಿ ಮದುವೆಯಾಗಿ ಸುಂದರವಾಗಿ ಸಂಸಾರ ಮಾಡಬೇಕೆಂದುಕೊಂಡಿದ್ದ ಜೋಡಿಹಕ್ಕಿಗಳು ಜೀವನದ ಜಂಜಡವೇ ಸಾಕೆಂದು ಸಾವಿನ ಮೊರೆಹೋದ ಕರಳು ಹಿಂಡುವ ಕಥೆ ಇದು.

ಇದು ನಡೆದಿದ್ದು ತುರುವೇಕೆರೆ ತಾಲೂಕಿನ ಆನೆಮಳೆ ಗ್ರಾಮದಲ್ಲಿ. ಪುರುಷೋತ್ತಮ (26) ಮತ್ತು ಮಂಜುಳಾ (20) ಶುಕ್ರವಾರ ರಾತ್ರಿ ನೇಣಿಗೆ ಶರಣಾದ ಜೋಡಿಗಳು. ಆದರೆ, ಘಟನೆ ಬೆಳಕಿಗೆ ಬಂದದ್ದು ಮಾತ್ರ ಶನಿವಾರ ಬೆಳಗ್ಗೆ. ಪುರುಷೋತ್ತಮ ಹಾಗೂ ಮಂಜುಳಾ ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಆದರೆ ಇವರಿಬ್ಬರ ಮದುವೆಗೆ ಮನೆಯವರು ಒಪ್ಪಿರಲಿಲ್ಲ.

ಮನೆಯವರನ್ನು ಒಪ್ಪಿಸಿ ಮದುವೆಯಾಗಿ ಸುಂದರವಾಗಿ ಸಂಸಾರ ಮಾಡಬೇಕೆಂದುಕೊಂಡಿದ್ದ ಜೋಡಿಹಕ್ಕಿಗಳು ಜೀವನದ ಜಂಜಡವೇ ಸಾಕೆಂದು ಸಾವಿನ ಮೊರೆಹೋದ ಕರಳು ಹಿಂಡುವ ಕಥೆ ಇದು. ಇದು ನಡೆದಿದ್ದು ತುರುವೇಕೆರೆ ತಾಲೂಕಿನ ಆನೆಮಳೆ ಗ್ರಾಮದಲ್ಲಿ. ಪುರುಷೋತ್ತಮ (26) ಮತ್ತು ಮಂಜುಳಾ (20) ಶುಕ್ರವಾರ ರಾತ್ರಿ ನೇಣಿಗೆ ಶರಣಾದ ಜೋಡಿಗಳು. ಆದರೆ, ಘಟನೆ ಬೆಳಕಿಗೆ ಬಂದದ್ದು ಮಾತ್ರ ಶನಿವಾರ ಬೆಳಗ್ಗೆ. ಪುರುಷೋತ್ತಮ ಹಾಗೂ ಮಂಜುಳಾ ಇಬ್ಬರೂ ಒಕ್ಕಲಿಗ ಸಮುದಾಯಕ್ಕೆ ಸೇರಿದವರು.

ನಾಗಮಂಗಲದಲ್ಲಿ ಕೆಎಸ್‍ಆರ್‍ಟಿಸಿಯಲ್ಲಿ ಬಸ್ ಚಾಲಕನಾಗಿದ್ದ ಪುರುಷೋತ್ತಮ ಆನೇಮಳೆ ಗ್ರಾಮದ ಮಂಜುಳಾಳನ್ನು ಐದು ವರ್ಷದಿಂದ ಪ್ರೀತಿಸುತ್ತಿದ್ದ. ಆದರೆ, ಮಂಜುಳಾರ ಪೋಷಕರಿಂದ ಈ ಪ್ರೀತಿಗೆ ಆರಂಭದಲ್ಲಿ ವಿರೋಧವಿತ್ತು. ನಂತರ ಒಪ್ಪಿಗೆ ಸೂಚಿಸಿದ್ದರಿಂದ ಮದುವೆ ಮಾತುಕತೆ ನಡೆದಿತ್ತು. ಆದರೆ, ಅದೇನಾಯಿತೋ ಕೆಲವೇ ದಿನಗಳಲ್ಲಿ ಕ್ಷುಲ್ಲಕ ವಿಚಾರಕ್ಕೆ ಎರಡೂ ಕುಟುಂಬದ ನಡುವೆ ಮನಸ್ತಾಪ ಬಂದು ಮದುವೆ ಮುರಿದು ಬಿತ್ತು. ಅಲ್ಲದೆ, ಮಂಜುಳಾ ಹಾಗೂ ಆಕೆಯ ಕುಟುಂಬದವರು ಪುರುಷೋತ್ತಮನ ವಿರುದ್ಧ ಪೊಲೀಸರಿಗೆ ದೂರನ್ನೂ ನೀಡಿದ್ದರು. ಆದರೆ, ಇಬ್ಬರ ನಡುವಿನ ಪ್ರೀತಿ ಮೇಲೆ ಇದು ಯಾವುದೇ ಪರಿಣಾಮ ಬೀರಿರಲಿಲ್ಲ. ಪುರುಷೋತ್ತಮ ಅವರ ತಂದೆ ಮೊದಲೇ ತೀರಿಕೊಂಡಿದ್ದರು. ಈ ಮಧ್ಯೆ ತಾಯಿ 15 ದಿನಗಳ ಹಿಂದೆ ತಮ್ಮ ಮಗಳ ಮನೆಗೆ ತೆರಳಿದ್ದರು.

ಬೆಂಗಳೂರಲ್ಲಿ ಡಿಪ್ಲೋಮಾ ಓದುತ್ತಿದ್ದ ಮಂಜುಳಾ ನಾಲ್ಕು ದಿನಗಳ ಹಿಂದಷ್ಟೆ ಆನೆಮಳೆಗೆ ಬಂದಿದ್ದಳು. ಈ ಸಂದರ್ಭದಲ್ಲಿ ಮಂಜುಳಾ ಮನೆಯಲ್ಲಿ ಪ್ರೇಮ ಪ್ರಕರಣದ ಸಂಬಂಧ ಮತ್ತೆ ಜಗಳವಾಗಿದೆ. ಇದರಿಂದ ರೋಸಿ ಹೋದ ಪುರುಷೋತ್ತಮ ಮತ್ತು ಮಂಜುಳಾ ಎರಡು ದಿನಗಳ ಹಿಂದೆ ದ್ವಿಚಕ್ರವಾಹನದಲ್ಲಿ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ಶುಕ್ರವಾರ ಬೆಳಗ್ಗೆ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದಾರೆ. ನಂತರ ಇಬ್ಬರೂ ಆನೆಮಳೆಗೆ ಹಿಂತಿರುಗಿದ್ದು, ವಿಷಯವನ್ನು ಎಲ್ಲರಿಗೂ ತಿಳಿಸಿದ್ದಾರೆ.

ರಾತ್ರಿ 10 ಗಂಟೆಯವರೆಗೂ ಮನೆಯ ಅಕ್ಕಪಕ್ಕದವರೊಂದಿಗೆ ಮಾತುಕತೆ ನಡೆಸಿ ಮಲಗಲು ಹೋಗಿದ್ದಾರೆ. ಶನಿವಾರ ಬೆಳಗ್ಗೆ 11 ಗಂಟೆಯಾದರೂ ಬಾಗಿಲು ತೆರದಿರಲಿಲ್ಲ. ಅನುಮಾನಗೊಂಡ ಗ್ರಾಮಸ್ಥರು ಮನೆಯ ಹೆಂಚು ತೆಗೆದು ನೋಡಿದಾಗ ಇಬ್ಬರೂ ಒಂದೇ ತೊಲೆಗೆ, ಒಂದೇ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ತುರುವೇಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಒಂದೇ ಗುಂಡಿಯಲ್ಲಿ ಮಣ್ಣುಮಾಡಿ!
ಜೀವಂತ ಇರುವಾಗಲಂತೂ ನೆಮ್ಮದಿಯಾಗಿ ಬದುಕಲು ಸಾಧ್ಯವಾಗಿಲ್ಲ. ಈಗ ನಾವಿಬ್ಬರು ನಿಮ್ಮಲ್ಲೆರನ್ನು ಬಿಟ್ಟು ಹೋಗುತ್ತಿದ್ದೇವೆ, ಕ್ಷಮಿಸಿ. ಆದ್ರೆ, ನಮ್ಮಿಬ್ಬರನ್ನೂ ಒಂದೇ
ಸಮಾ„ಯಲ್ಲಿ ಮಣ್ಣು ಮಾಡಿ ಪ್ಲೀಸ್. ಇದೇ ನಮ್ಮ ಕೊನೆಯ ಆಸೆ. ದಯವಿಟ್ಟು ನಮ್ಮನ್ನು ಮಣ್ಣು ಮಾಡುವಾಗಲಾದರೂ ಬೇರೆ ಬೇರೆ ಮಾಡಬೇಡಿ. ಇದುವರೆಗೂ ನಿಮಗೆಲ್ಲ ನೋವು ಕೊಟ್ಟಿದ್ದೇವೆ. ಅದಕ್ಕೆ ಕ್ಷಮೆ ಇರಲಿ ಎಂದು ನವಜೋಡಿಗಳು ಬರೆದಿಟ್ಟ ಡೆತ್‍ನೋಟ್‍ನಲ್ಲಿ ತಿಳಿಸಿದ್ದಾರೆ.

ಪುರುಷೋತ್ತಮನ ತಾಯಿಗೆ ಮಂಜುಳಾ ಬರೆದಿಟ್ಟ ಪತ್ರದಲ್ಲಿ, `ನನಗೆ ನೀವು ಅತ್ತೆಯಲ್ಲ, ತಾಯಿ. ಈಗ ನಾವಿಬ್ಬರೂ ನಿಮ್ಮನ್ನು ಬಿಟ್ಟು ಹೋಗುತ್ತಿದ್ದೇವೆ. ನಮ್ಮನ್ನು ಕ್ಷಮಿಸಿಬಿಡಿ ಅಮ್ಮಾ...' ಎಂದಿದ್ದಾಳೆ. ಈಕೆ ಬರೆದಿರುವ ಪತ್ರಕ್ಕೆ ಪುರುಷೋತ್ತಮನೂ ಸಹಿ ಹಾಕಿದ್ದಾನೆ. ನಮ್ಮ ಶವಗಳನ್ನು ಯಾರಿಗೂ ಕೊಡದೇ ನೀವೇ ಸಮಾಧಿ ಮಾಡಿ. ಆ ರೀತಿ ಮಾಡಿದರಷ್ಟೇ ನಮ್ಮ ಆತ್ಮಕ್ಕೆ ಶಾಂತಿ ದೊರೆಯಲಿದೆ ಎಂದು ಮನವಿ ಮಾಡಿದ್ದಾರೆ ಜೋಡಿಗಳು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com