ಮಹಿಳೆಯರ ಆರೋಗ್ಯಕ್ಕಾಗಿ ಜಾಗೃತಿಗೆ ಪಿಂಕಥಾನ್

ಜ.31 , 2016 ರಂದು ಮಹಿಳೆಯರಿಗಾಗಿ ಬೆಂಗಳೂರಿನಲ್ಲಿ 4 ನೇ ಆವೃತ್ತಿಯ ಎಸ್ ಬಿ ಐ ಪಿಂಕಥಾನ್ ಮಹಿಳಾ ಓಟ ಆಯೋಜಿಸಲಾಗಿದೆ ಎಂದು ಮಾಡೆಲ್ ಪಿಂಕಥಾನ್ ಸಂಸ್ಥಾಪಕ ಸೋಮನ್ ತಿಳಿಸಿದರು.
ಪಿಂಕಥಾನ್ ಸಂಸ್ಥಾಪಕ ಮಿಲಿಂದ್ ಸೋಮನ್
ಪಿಂಕಥಾನ್ ಸಂಸ್ಥಾಪಕ ಮಿಲಿಂದ್ ಸೋಮನ್

ಬೆಂಗಳೂರು: ಯುನೈಟೆಡ್ ಸಿಸ್ಟರ್ಸ್ ಫೌಂಡೇಷನ್ ಮತ್ತು ಮ್ಯಾಕ್ಸಿಮಸ್ ಇವೆಂಟ್ಸ್ ಹಾಗೂ ಮೀಡಿಯಾ ಸೆಲ್ಯೂಷನ್ ಸಂಯುಕ್ತಾಶ್ರಯದಲ್ಲಿ ಜ.31 , 2016 ರಂದು ಮಹಿಳೆಯರಿಗಾಗಿ ಬೆಂಗಳೂರಿನಲ್ಲಿ 4 ನೇ ಆವೃತ್ತಿಯ ಎಸ್ ಬಿ ಐ ಪಿಂಕಥಾನ್ ಮಹಿಳಾ ಓಟ ಆಯೋಜಿಸಲಾಗಿದೆ ಎಂದು ಮಾಡೆಲ್ ಪಿಂಕಥಾನ್ ಸಂಸ್ಥಾಪಕ ಮಿಲಿಂದ್ ಸೋಮನ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `ಕಳೆದ ಬಾರಿಯ ಪಿಂಕಥಾನ್‍ಗೆ ಉತ್ತಮ ಪ್ರತಿಕ್ರಿಯೆ ದೊರೆತ ಹಿನ್ನೆಲೆಯಲ್ಲಿ ಈ ಬಾರಿಯೂ ಆಯೋಜನೆ ಮಾಡುತ್ತಿದ್ದೇವೆ.
ಪಿಂಕಥಾನ್ ಮ್ಯಾರಥಾನ್‍ಗಿಂತಲೂ ಶ್ರೇಷ್ಠ.
ಇದು ಭಾರತದಾದ್ಯಂತ ಮಹಿಳೆಯರ ಅಭಿವೃದ್ಧಿ ಹಾಗೂ ಉತ್ತಮ ಆರೋಗ್ಯ ನಿರ್ವಹಣೆ ಕುರಿತು ಅಭಿಯಾನವಾಗಿದೆ. ಓಟದಲ್ಲಿ ಮಹಿಳೆಯರ ಸ್ತನ ಕ್ಯಾನ್ಸರ್ ಮತ್ತು
ಎಲುಬು ನೋವಿನ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದರು. ಮಹಿಳೆಯರು ಫಿಟ್ ನೆಸ್‍ನ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕಾದ ಅಗತ್ಯವಿದೆ. ಹೀಗಾಗಿ ಮಹಿಳೆಯರು
ಮನೆಯಿಂದ ಹೊರ ಬಂದು ಓಟದಲ್ಲಿ ಪಾಲ್ಗೊಳ್ಳ ಬೇಕು. ಓಟದಲ್ಲಿ ಸುಮಾರು 10 ಸಾವಿರ ಮಹಿಳೆಯರು ಭಾಗವಹಿಸುವ ನಿರೀಕ್ಷೆ ಇದೆ.
ಸೀರೆ, ಸಲ್ವಾರ್ ಅಥವಾ ಯಾವುದೇ ತೊಡುಗೆಗಳಲ್ಲಿಯೂ ಓಡಬಹುದು ಎಂದರು. ವುಮೆನ್ ಹಾರ್ಲಿಕ್ಸ್ ಸಹಭಾಗಿತ್ವದಲ್ಲಿ ಎಸ್ ಬಿಐ ಪಿಂಕಥಾನ್‍ನಲ್ಲಿ ದೃಷ್ಠಿ ಸಮಸ್ಯೆ ಇರುವ
ಅನೇಕ ಮಹಿಳೆಯರು ಭಾಗವಹಿಸಲಿದ್ದಾರೆ. ಪಿಂಕಥಾನ್‍ಗೆ ಇವರನ್ನು ಸಿದ್ದಗೊಳಿಸುವ ನಿಟ್ಟಿನಲ್ಲಿ ಹೆಚ್ಚಿನ ತರಬೇತಿ ಹಾಗೂ ಓಟದ ಜಾಗಗಳ ಅರಿಯಲು ವಿಶೇಷ ತರಬೇತಿ ನೀಡಲಾಗುವುದು. ವಿಕಲ ಚೇತನರೂ ಕೂಡ ಪಿಂಕಥಾನ್‍ನಲ್ಲಿ ಪಾಲ್ಗೊಳ್ಳಬಹುದು ಎಂದರು.
ಮ್ಯಾಕ್ಸಿಮಸ್ ಇವೆಂಟ್ಸ್‍ನ ವ್ಯವಸ್ಥಾಪಕ ನಿರ್ದೇಶಕಿ ರೀಮಸಂಘಾವಿ ಮಾತನಾಡಿದರು.
ಕಳೆದ ಬಾರಿಯ ಪಿಂಕಥಾನ್‍ಲ್ಲಿ ಭಾಗವಹಿಸಿ ಜಯಗಳಿಸಿದ ನಾಗರತ್ನ ಬಿ.ಭಟ್, ಎಲ್ ಹೆಚ್‍ಓ ಸಿಜಿಎಂ ರಜಿನಿ ಮಿಶ್ರಾ, ಒಲಂಪಿಕ್ ಈಜುಗಾರ್ತಿ ನಿಶಾ ಮಿಲ್ಲಿಟ್ ಇತರರು ಇದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com