
ದಾವಣಗೆರೆ: ಅರ್ಕಾ-ವತಿ ಅಷ್ಟೇ ಏಕೆ, ತಾವು ಮುಖ್ಯಮಂತ್ರಿ ಆಗಿದ್ದ ಕಾಲದಿಂದ ಈವರೆಗಿನ ಎಲ್ಲ ಡಿನೋಟಿಫಿಕೇಶನ್ ತನಖೆ ಮಾಡಲಿ ಎಂದು ರಾಜ್ಯ ಸರ್ಕಾರಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸಲಹೆ ನೀಡಿದ್ದಾರೆ.
ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಅರ್ಕಾ-ವತಿ ಡಿನೋಟಿಫಿಕೇಷನ್ ಪ್ರಕರಣ ಬಿಜೆಪಿಯ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದ ಕಾಲದ್ದು. ಸದ್ಯ ಅರ್ಕಾವತಿ ವಿಚಾರದಲ್ಲಿ ಬಿಜೆಪಿ ಯಲ್ಲೇ ಎರಡು ಬಣಗಳಾಗಿವೆ. ಒಂದು ಬಣ ತನಿಖೆ ನಡೆಯಬೇಕೆಂದು ಒತ್ತಡ ಹೇರಿದರೆ, ಮತ್ತೊಂದು ಬಣ ಬೇಡ-ವೆಂದು ಪಟ್ಟು ಹಿಡಿ-ದಿದೆ ಎಂದು ಟೀಕಿಸಿದರು.
ರಾಜ್ಯ ಸರ್ಕಾರಕ್ಕೆ ನಿಜವಾ ದ ಕಳಕಳಿ ಇದ್ದರೆ, ದೇವೇಗೌಡ ಸಿಎಂ ಆಗಿದ್ದ ಕಾಲದಿಂದ ಈಗಿನ ಸಿದ್ದರಾಮಯ್ಯ ಕಾಲದವರೆಗಿನ ಎಲ್ಲ ಪ್ರಕರಣಗಳ ತನಿಖೆಗೂ ಮುಂದಾಗಲಿ ಎಂದು ಆಗ್ರಹಿಸಿದರು. ಯಾವುದೇ ಪಕ್ಷ, ಮತದಾರರನ್ನು ಹೈಜಾಕ್ ಮಾಡಲು ಸಾಧ್ಯವೇ? ಜೆಡಿಎಸ್‍ನ 34 ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಸೇರುವ ತವಕಲಲ್ಲಿದ್ದಾರೆ ಎಂಬ ವಿಚಾರ ನನ್ನ ಗಮನಕ್ಕೂ ಬಂದಿದೆ. ಪಕ್ಷದಲ್ಲೇ ಇದ್ದು, ಎಲ್ಲವನ್ನೂ ಸರಿಪಡಿಸಿಕೊಂಡು ಹೋಗಲು ತಿಳಿಸಿದ್ದೇನೆ. ಆಗದಿದ್ದರೆ ನಿಮ್ಮ ಭವಿಷ್ಯವನ್ನು ಅಲ್ಲಿಯೇ ಹುಡುಕಿ ಕೊಳ್ಳುವುದಾದರೆ ಹೋಗಿ ಎಂಬ ಸಲಹೆ ನೀಡಿದ್ದೇನೆ.
ಎಚ್.ಡಿ. ದೇವೇಗೌಡ
Advertisement