ಸ್ವರ್ಗವ ಹುಡುಕಿ ಸಿರಿಯಾಗೆ ಪಯಣ!

ಇಸಿಸ್ ಉಗ್ರರ ಹಿಡಿತದಲ್ಲಿರುವ ಸಿರಿಯಾ ದೇಶದ ಯುದ್ಧ ಸಂತ್ರಸ್ತರ ಸೇವೆ ಮಾಡಿ, ಅಲ್ಲಿಯೇ ಮೃತರಾದರೆ...
ಸ್ವರ್ಗವ ಹುಡುಕಿ ಸಿರಿಯಾಗೆ ಪಯಣ!

ಬೆಂಗಳೂರು: ಇಸಿಸ್ ಉಗ್ರರ ಹಿಡಿತದಲ್ಲಿರುವ ಸಿರಿಯಾ ದೇಶದ ಯುದ್ಧ ಸಂತ್ರಸ್ತರ ಸೇವೆ ಮಾಡಿ, ಅಲ್ಲಿಯೇ ಮೃತರಾದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ ಹಿನ್ನೆಲೆಯಲ್ಲಿ ತಾವು ಸಿರಿಯಾಗೆ ತೆರಳುತ್ತಿದ್ದಾಗಿ ಟರ್ಕಿಯಿಂದ ಗಡಿಪಾರಾದ ಭಾರತೀಯರು ವಿಚಾರಣೆ ವೇಳೆ ಬಹಿರಂಗಪಡಿಸಿದ್ದಾರೆ.

ಧಾರ್ಮಿಕ ಪುಸ್ತಕಗಳಿಂದ ಪ್ರೇರಣೆಯಾಗಿದ್ದು, ಸ್ವಯಂಪ್ರೇರಿತರಾಗಿ ಸಿರಿಯಾಗೆ ತೆರಳಲು ಯತ್ನಿಸಿದೆವು. ಯಾವ ಮಾಧ್ಯಮಗಳಿಂದಲೂ ನಾವು ಪ್ರೇರಿತರಾಗಿಲ್ಲ. ಯಾವುದೇ ಉಗ್ರ ಸಂಘಟನೆ ಜತೆಯೂ ನಂಟಿಲ್ಲ ಎಂದು ವಿಚಾರಣೆ ವೇಳೆ ಅವರು ತಿಳಿಸಿದ್ದಾರೆಂದು ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

ಕುಟುಂಬಕ್ಕೂ ತಿಳಿದಿಲ್ಲ
ಪ್ರವಾಸದ ಹೆಸರಿನಲ್ಲಿ ಚೆನ್ನೈ ಮೂಲದ ಮಹ್ಮದ್ ಅಬ್ದುಲ್ ಅಹ್ಮದ್ (46) ತನ್ನ ಪತ್ನಿ ಹಾಗೂ ಐವರು ಮಕ್ಕಳೊಂದಿಗೆ ಟರ್ಕಿ ಪ್ರವಾಸಕ್ಕೆ ಹೋಗುತ್ತಿರುವುದಾಗಿ ಕುಟುಂಬ ಸದಸ್ಯರಿಗೆ ಹೇಳಿದ್ದ. ಅದೇ ರೀತಿ ತೆಲಂಗಾಣದ ಖಮ್ಮಂನ ಜಾವೀದ್ ಬಾಬಾ (24) ಹಾಗೂ ಹಾಸನದ ಇಬ್ರಾಹಿಂ ನೌಫಲ್ (24) ಕೂಡಾ ಪ್ರವಾಸಕ್ಕೆ ಹೋಗುತ್ತಿರುವುದಾಗಿ ಹೇಳಿದ್ದ. ಸಿರಿಯಾಗೆ ತೆರಳುವ ಬಗ್ಗೆ ಯಾರ ಗಮನಕ್ಕೂ ತಂದಿರಲಿಲ್ಲ. ಬೆಂಗಳೂರಿನಲ್ಲಿ ಪೊಲೀಸರು ವಶಕ್ಕೆ ತೆಗೆದುಕೊಂಡ ಬಳಿಕವೇ ಎಲ್ಲ ಮಾಹಿತಿ ತಿಳಿದಿದೆ ಎಂದು ಪೊಲೀಸರಿಗೆ ಕುಟುಂಬ ಸದಸ್ಯರು ತಿಳಿಸಿದ್ದಾರೆ.

ವಶಕ್ಕೆ ಪಡೆದುಕೊಂಡ 9 ಮಂದಿ ಪೈಕಿ ಪ್ರತಿಯೊಂದೂ ಕುಟುಂಬದಿಂದ ಇಬ್ಬರು ಹಿರಿಯ ವ್ಯಕ್ತಿಗಳನ್ನು ನಗರಕ್ಕೆ ಕರೆಯಿಸಿಕೊಂಡು ಇವರ ಬಗ್ಗೆ ವಿಚಾರಣೆ ನಡೆಸಲಾ ಗಿದೆ. ಅಲ್ಲದೇ, ಮುಂದಿನ ದಿನಗಳಲ್ಲಿಯೂ ಇಂಥ ನಿರ್ಧಾರ ಕೈಗೊಳ್ಳದಂತೆ ಕೌನ್ಸಿಲಿಂಗ್ ಮಾಡಿ ಮನವರಿಕೆ ಮಾಡಲಾಗಿದೆ ಎಂದು ಆಯುಕ್ತ ರೆಡ್ಡಿ ಹೇಳಿದರು.

ಯೋಜಿತ ಪ್ರವಾಸ
ಅಮೆರಿಕದಿಂದ ವಾಪಸಾಗಿರುವ ಅಬ್ದುಲ್ ಅಹ್ಮದ್, ಸಾಫ್ಟ್  ವೇರ್ ಎಂಜಿನಿಯರ್‍ಗಳಾಗಿರುವ ಜಾವೀದ್ ಹಾಗೂ ನೌಫಲ್ ತಿಂಗಳಿಗೆ ರು. 2 ಲಕ್ಷ ಸಂಬಳ ಎಲ್ಲರೂ ಬೆಂಗಳೂರಿನಲ್ಲಿ  ವಾಸವಿದ್ದು ಸಾಮಾನ್ಯ ಪ್ರದೇಶದಲ್ಲಿ ಪರಸ್ಪರ ಭೇಟಿ ಮಾಡಿದಾಗ ಅವರ ಯೋಚನೆಗಳು ಒಂದಾಗಿ ಸಿರಿಯಾ ತೆರಳಲು ನಿರ್ಧರಿಸಿದ್ದರು. ಇಸಿಸ್‍ಗೆ ಬೇರೆಯವರನ್ನು ಸೇರ್ಪಡೆ ಗೊಳಿಸುವ ಹಾಗೂ ಮನೆ ಪರಿವರ್ತಿಸಿರುವ ಬಗ್ಗೆ ತಿಳಿದು ಬಂದಿಲ್ಲ. ಜಾವೀದ್ ಹಿನ್ನೆಲೆ ಬಗ್ಗೆ  ಮಾಹಿತಿ ಸಂಗ್ರಹಿಸಲು ನಗರ ಪೊಲೀಸರು ತೆಲಂಗಾಣ ಪೊಲೀಸರಿಗೆ ಕೋರಿದ್ದಾರೆ.

ಸೌದಿಗೆ ತೆರಳುತ್ತಿರುವುದಾಗಿ ಹೇಳಿದ್ದ ಜಾವೀದ್

ತೆಲಂಗಾಣ ರಾಜ್ಯದ ಖಮ್ಮಂ ಜಿಲ್ಲೆಯ ಪ್ರತಿಭಾನ್ವಿತ ಜಾವೀದ್ ಬಾಬಾ (24) ಬಿ.ಟೆಕ್ ಪದವೀಧರ. ನಗರದ ಸಾಫ್ಟ್ ವೇರ್ ಕಂಪನಿಯಲ್ಲಿ ಉದ್ಯೋಗ. ಕೈ ತುಂಬಾ ಸಂಬಳ.
ಜ.30ರಂದು ಬೆಂಗಳೂರಿನಿಂದ ಟರ್ಕಿಯ ಇಸ್ತಾಂಬುಲ್‍ಗೆ ತೆರಳುವ 4 ದಿನಗಳ ಮುನ್ನಾ, ಖಮ್ಮಂನಲ್ಲಿರುವ ತನ್ನ ಪಾಲಕರ ಭೇಟಿ ಮÁಡಲು ಜಾವೀದ್ ಹೋಗಿದ್ದ. 2 ದಿನ
ಮನೆಯಲ್ಲಿ ಭಾವನಾತ್ಮಕವಾಗಿದ್ದ ಜಾವೀದ್, ಕೆಲವು ದಿನಗಳ ಕಾಲ ಸೌದಿ ಅರೇಬಿಯಾದ ಜೆಡ್ಡಾಗೆ ಹೋಗುತ್ತಿರುವುದಾಗಿ ಪಾಲಕರಿಗೆ ಸುಳ್ಳು ಹೇಳಿದ್ದ.

ಗಡಿಪಾರು ಆಗುವವರೆಗೂ ಆತನ ಉದ್ದೇಶದ ಬಗ್ಗೆ ಸಣ್ಣ ಸುಳಿವೂ ಇರಲಿಲ್ಲ ಎಂದು ಪಾಲಕರು ತಿಳಿಸಿದ್ದಾರೆ. ಕೆಲವು ವರ್ಷ ಹೈದರಾಬಾದ್‍ನಲ್ಲಿದ್ದ ಜಾವೀದ್, 2011ರಲ್ಲಿ ಬೆಂಗಳೂರಿಗೆ ಬಂದು ನೆಲೆಸಿದ್ದ. ಈತನ ಸಹೋದರ ನಗರದ ಕಂಪನಿಂುÉೂಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜಾವೀದ್ ಗೆ ಸಿರಿಯಾ ಹಾಗೂ ಇಸಿಸ್ ಕಡೆ ಒಲವಿರುವ ಬಗ್ಗೆ ಸಹೋದರನಿಗೂ ಸುಳಿವಿರಲಿಲ್ಲವಂತೆ.

ಟರ್ಕಿ ಪ್ರವಾಸೋದ್ಯಮ ವೀಸಾ ದುರುಯೋಗ
ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಟರ್ಕಿ ಪ್ರವಾಸಿಗರಿಗೆ ವೀಸಾ ನೀಡುವಲ್ಲಿ ಹೆಚ್ಚಿನ ಉದಾರತೆ ಹೊಂದಿದೆ. ಇಸಿಸ್ ಮನೋಭಾವದವರು ಪ್ರವಾಸಿಗರಂತೆ
ಇಸ್ತಾಂಬುಲ್‍ಗೆ ತೆರಳುವ ಕೆಲವು ದಿನ ಅಲ್ಲಿ ಇಲ್ಲಿ ಸುತ್ತಾಡಿ ಗಡಿ ದಾಟಿ ಸಿರಿಯÁ ನುಸುಳಿ ಬಿಡುತ್ತಾರೆ. ಸಿರಿಯಾದಲ್ಲಿರುವ ಇಸಿಸ್ ನಿರ್ವಾಹಕರು ಟರ್ಕಿ ಮೂಲಕ ಸಿರಿಯಾಗೆ
ಬರಲು ಸಲಹೆ ನೀಡುತ್ತಾರೆ ಎನ್ನಲಾಗಿದೆ. ಹೀಗಾಗಿ, ಇಸಿಸ್ ಒಲವಿರುವವರು ಪ್ರವಾಸಿ ವೀಸಾ ಹೆಸರಿನಲ್ಲಿ ಟರ್ಕಿಗೆ ತೆರಳುತ್ತಾರೆ ಎಂದು ಮೂಲಗಳು ತಿಳಿಸಿವೆ.

ಈ ಹಿಂದೆ ಕತಾರ್ ಮೂಲದ ಹೈದರಾಬಾದ್‍ನ 19 ವರ್ಷದ ಯುವತಿ ಹಾಗೂ ಅಮೆರಿಕದಿಂದ ವಾಪಸಾಗಿದ್ದ ಸಲ್ಮಾನ್ ಮೋಯಿನುದ್ದೀನ್ ಎಂಬವರು ಸಿರಿಯಾ ಹೋಗಲು ಯತ್ನಿಸಿ ತೆಲಂಗಾಣ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com