• Tag results for ಉಗ್ರ

ಬಾಲಕೋಟ್'ನಲ್ಲಿ ಮತ್ತೆ ಉಗ್ರರು ಸಕ್ರಿಯ, ಹೆಚ್ಚು ತೀಕ್ಷ್ಣ ದಾಳಿಯ ಕ್ರಮಕ್ಕೆ ಸಿದ್ಧ: ಪಾಕಿಸ್ತಾನಕ್ಕೆ ಸೇನೆ ಎಚ್ಚರಿಕೆ

ಜಮ್ಮು ಮತ್ತು ಕಾಶ್ಮೀರದ ಬಾಲಕೋಟ್'ನಲ್ಲಿ ಮತ್ತೆ ಭಯೋತ್ಪಾದಕರು ಸಕ್ರಿಯರಾಗಿದ್ದು, ಮತ್ತೊಂದು ವಾಯುದಾಳಿಯಲ್ಲ ಅದಕ್ಕೂ ಮೀರಿದ ಕ್ರಮಕೈಗೊಳ್ಳುತ್ತೇವೆಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಸೋಮವಾರ ಎಚ್ಚರಿಸಿದ್ದಾರೆ.

published on : 23rd September 2019

ಕಾಶ್ಮೀರದಲ್ಲಿ 273 ಉಗ್ರರು, 100 ವಿದೇಶಿಯರು ಸಕ್ರಿಯವಾಗಿದ್ದಾರೆ: ಭದ್ರತಾ ಪಡೆಗಳು

ಕಳೆದ ವಾರ ಭದ್ರತಾ ಪಡೆಗಳು ಸಿದ್ಧಪಡಿಸಿರುವ ಉಗ್ರರ ಪಟ್ಟಿ ಐಎಎನ್ಎಸ್ ಸುದ್ದಿ ಸಂಸ್ಥೆಗೆ ಲಭ್ಯವಾಗಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಒಟ್ಟು  273 ಉಗ್ರರು ಸಕ್ರಿಯವಾಗಿದ್ದಾರೆ.

published on : 20th September 2019

60ಕ್ಕೂ ಹೆಚ್ಚು ಉಗ್ರರನ್ನು ಭಾರತದ ಗಡಿ ನುಸುಳಿಸಲು ಗುಪ್ತಮಾರ್ಗ ಬಳಸುತ್ತಿದೆ ಪಾಕ್: ಅಧಿಕಾರಿಗಳು

ಪಾಕಿಸ್ತಾನ ಪದೇ ಪದೇ ತನ್ನ ನರಿ ಬುದ್ಧಿಯನ್ನು ಪ್ರದರ್ಶಿಸುತ್ತಿದ್ದು, ಗಡಿ ನಿಯಂತ್ರಣ ರೇಖೆ ಬಳಿ 60ಕ್ಕೂ ಹೆಚ್ಚು ಉಗ್ರರನ್ನು ಭಾರತದೊಳಗೆ ನುಸುಳಿಸಲು ಗುಪ್ತಮಾರ್ಗಗಳನ್ನು ಬಳಕೆ ಮಾಡುತ್ತಿದೆ ಎಂದು ಗುಪ್ತಚರ ಇಲಾಖೆ ಮಂಗಳವಾರ ಮಾಹಿತಿ ನೀಡಿದೆ.

published on : 18th September 2019

ದೇಶದಾದ್ಯಂತ ಪೆಟ್ರೋಲ್, ಡೀಸೆಲ್ ಬೆಲೆ ರೂ.5-6 ಹೆಚ್ಚಳ? 

ಸೌದಿ ಅರೇಬಿಯಾದಲ್ಲಿನ ವಿಶ್ವದ ಅತೀದೊಡ್ಡ ಕಚ್ಚಾ ತೈಲ ಸಂಸ್ಕರಣಾ ಘಟಕದ ಮೇಲೆ ಉಗ್ರರು ಡ್ರೋನ್ ದಾಳಿ ನಡೆಸಿರುವ ಹಿನ್ನಲೆಯಲ್ಲಿ ತೈಲೋತ್ಪಾದನೆ ಕುಂಠಿತಗೊಂಡಿದ್ದು, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಭಾರೀ ಏರಿಕೆ ಕಾಣುವ ಸಾಧ್ಯತೆಗಳಿವೆ. 

published on : 17th September 2019

ಈಶ್ವರಪ್ಪಗೆ ಧಮ್ ಇದ್ರೆ ಗೋಮಾಂಸ ರಫ್ತು ನಿಲ್ಲಿಸಲಿ: ವಿ.ಎಸ್. ಉಗ್ರಪ್ಪ

ಕಾಂಗ್ರೆಸ್ ನಾಯಕರ ಪುರುಷತ್ವದ ಬಗ್ಗೆ ಪ್ರಶ್ನೆ ಮಾಡುತ್ತಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ‍್ವರಪ್ಪ ಅವರಿಗೆ ಪುರುಷತ್ವ ಇದ್ದಿದ್ದೇ ಆದಲ್ಲಿ, ಧಮ್  ಇದ್ದರೆ ವಿದೇಶಕ್ಕೆ ಆಗುತ್ತಿರುವ ಗೋಮಾಂಸ ರಫ್ತು ನಿಲ್ಲಿಸಲಿ ಎಂದು ಮಾಜಿ ಸಂಸದ, ಹಿರಿಯ ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಸವಾಲು ಹಾಕಿದ್ದಾರೆ.  

published on : 16th September 2019

ಜಮ್ಮು ಕಾಶ್ಮೀರಕ್ಕೆ ಮತ್ತೆ ಉಗ್ರರ ದಾಳಿ ಭೀತಿ: ಹೈಅಲರ್ಟ್ ಘೋಷಣೆ ಸಾಧ್ಯತೆ

ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಸ್ಥಾಪಿಸಲು ಕೇಂದ್ರ ಸರ್ಕಾರ ಯತ್ನಿಸುತ್ತಿರುವ ಮಧ್ಯೆಯೇ ಕಣಿವೆ ರಾಜ್ಯಕ್ಕೆ ಮತ್ತೆ ಉಗ್ರರ ದಾಳಿ ಭೀತಿ ಉಂಟಾಗಿದೆ. 

published on : 16th September 2019

ಪಾಕ್ ಉಗ್ರರು ಅಮೆರಿಕಾದ ಆರ್ಥಿಕ ನೆರವು ಬಳಕೆ ಮಾಡಿಕೊಳ್ಳುತ್ತಿದ್ದಾರೆ: ಸತ್ಯ ಒಪ್ಪಿಕೊಂಡ ಇಮ್ರಾನ್ ಖಾನ್

ಪಾಕಿಸ್ತಾನದ ಉಗ್ರರು ಅಮೆರಿಕಾದ ಕೇಂದ್ರೀಯ ಗುಪ್ತಚರ ವಿಭಾಗ ಆರ್ಥಿಕ ನೆರವನ್ನು ಬಳಕೆ ಮಾಡಿಕೊಳ್ಳುತ್ತಿದೆ ಎಂದು ಭಯೋತ್ಪಾದಕರನ್ನು ಹುಟ್ಟುಹಾಕುತ್ತಿರುವ ಪಾಕಿಸ್ತಾನ ಕೊನೆಗೂ ತನ್ನ ಸತ್ಯವನ್ನು ಒಪ್ಪಿಕೊಂಡಿದೆ. 

published on : 13th September 2019

ಪಾಕ್ ತಾಲಿಬಾನ್ ಮುಖ್ಯಸ್ಥ, ಇತರೆ 11 ಉಗ್ರರನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಿದ ಅಮೆರಿಕ

ನಿಷೇಧಿತ ತೆಹ್ರೀಕ್ ಇ ತಾಲಿಬಾನ್ ಪಾಕಿಸ್ತಾನ ಸಂಘಟನೆಯ ಮುಖ್ಯಸ್ಥ ನೂರ್ ವಾಲಿ ಮೆಹ್ಸುದ್ ಸೇರಿದಂತೆ 12 ಉಗ್ರರನ್ನು ಅಮೆರಿಕ ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಿದೆ ಮತ್ತು ಹಲವು ಉಗ್ರರಿಗೆ ಹಾಗೂ ಅವರ ಬೆಂಬಲಿಗರಿಗೆ ಹಲವು ನಿರ್ಬಂಧಗಳನ್ನು ವಿಧಿಸಿದೆ.

published on : 11th September 2019

ಅಫ್ಘಾನಿಸ್ತಾನದಲ್ಲಿ ವೈಮಾನಿಕ ದಾಳಿ: 30 ಉಗ್ರರ ಹತ್ಯೆ

ಅಫ್ಘಾನಿಸ್ತಾನದ ಉತ್ತರ ತಖಾರ್ ಪ್ರಾಂತ್ಯದಲ್ಲಿ ಮಂಗಳವಾರ ರಾತ್ರಿ ನಡೆದ ವೈಮಾನಿಕ ದಾಳಿಯಲ್ಲಿ ಸುಮಾರು 30 ತಾಲಿಬಾನ್ ಉಗ್ರರು ಮೃತಪಟ್ಟಿದ್ದಾರೆ ಎಂದು ಎಂದು ಸ್ಥಳೀಯ ಮೂಲಗಳು ತಿಳಿಸಿವೆ. 

published on : 11th September 2019

ಸೊಪೋರ್ ಎನ್'ಕೌಂಟರ್: ಎಲ್ಇಟಿ ಉಗ್ರ ಆಸೀಫ್ ಹತ, ಇಬ್ಬರು ಪೊಲೀಸರಿಗೆ ಗಾಯ

ಜಮ್ಮು ಮತ್ತು ಕಾಶ್ಮೀರದ ಸೊಪೋರ್'ನಲ್ಲಿ ಭಾರತೀಯ ಸೇನೆ ಎನ್ ಕೌಂಟರ್ ನಡೆಸಿದ್ದು, ಪಾಕಿಸ್ತಾನ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಪ್ರಮುಖ ಭಯೋತ್ಪಾದಕನನ್ನು ಹೊಡೆದುರುಳಿಸಿದ್ದಾರೆ. 

published on : 11th September 2019

ಉಗ್ರ ನಿಗ್ರಹ ಕಾರ್ಯಾಚರಣೆ ವೇಳೆ ದುರಂತ, ನದಿಗೆ ಬಿದ್ದು ಸೈನಿಕನ ಸಾವು!

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ನಿಗ್ರಹ ಕಾರ್ಯಾಚರಣೆ ವೇಳೆ ದುರಂತ ಸಂಭವಿಸಿದ್ದು, ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದ ಯೋಧನೋರ್ವ ಕಾಲು ಜಾರಿ ನದಿಗೆ ಬಿದ್ದು ಸಾವನ್ನಪ್ಪಿದ್ದಾರೆ.

published on : 8th September 2019

ಭಾರತೀಯ ಸೇನೆ ಇಬ್ಬರು ಬಂಧಿತ ರೈತರನ್ನು ಉಗ್ರರು ಎಂದು ತಪ್ಪಾಗಿ ಬಿಂಬಿಸುತ್ತಿದೆ: ಪಾಕ್ ಸೇನೆ

ಭಾರತೀಯ ಸೇನೆ ಬಂಧಿತ ಇಬ್ಬರು ಪಾಕಿಸ್ತಾನದ ರೈತರನ್ನು ಉಗ್ರರು ಎಂದು ತಪ್ಪಾಗಿ ಬಿಂಬಿಸುತ್ತಿದೆ ಎಂದು ಪಾಕಿಸ್ತಾನ ಸೇನೆ ಶನಿವಾರ ಹೇಳಿದೆ.

published on : 7th September 2019

ಜಮ್ಮು-ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ: ಗುಂಡಿನ ದಾಳಿಗೆ ಹೆಣ್ಣು ಮಗು ಸೇರಿ 4 ಮಂದಿ ಗಾಯ

ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಅಟ್ಟಹಾಸ ಮೆರೆಯುತ್ತಿದ್ದು, ಮನಬಂದಂತೆ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಹೆಣ್ಣು ಮಗು ಸೇರಿ ಒಟ್ಟು 4 ಜನರಿಗೆ ಗಂಭೀರವಾಗಿ ಗಾಯವಾಗಿರುವ ಘಟನೆ ಶನಿವಾರ ಸೊಪೋರ್ ಜಿಲ್ಲೆಯಲ್ಲಿ ಶನಿವಾರ ನಡೆದಿದೆ. 

published on : 7th September 2019

ಘೋಷಿತ ಉಗ್ರರ ಪಟ್ಟಿಗೆ ಮಸೂದ್, ಹಫೀಜ್ ಸೇರ್ಪಡೆ: ಭಾರತದ ದಿಟ್ಟ ಕ್ರಮಕ್ಕೆ ಅಮೆರಿಕಾ ಪ್ರಶಂಸೆ

ಘೋಷಿತ ಉಗ್ರರ ಪಟ್ಟಿಗೆ ಪಾಕಿಸ್ತಾನದ ಭಯಂಕರ ಉಗ್ರರಾದ ಅಜರ್ ಮೆಹಮೂದ್, ಹಫೀಜ್ ಮೊಹಮ್ಮದ್ ಸಯೀದ್, ಝಾಕಿರ್ ಉರ್ ರೆಹ್ಮಾನ್ ಲಖ್ವಿ, ದಾವೂದ್ ಇಬ್ರಾಹಿಂನನ್ನು ಸೇರ್ಪಡೆಗೊಳಿಸಿರುವ ಭಾರತದ ದಿಟ್ಟ ಕ್ರಮಕ್ಕೆ ಅಮೆರಿಕಾ ಗುರುವಾರ ಪ್ರಶಂಸೆ ವ್ಯಕ್ತಪಡಿಸಿದೆ. 

published on : 5th September 2019

ಪಾಕ್ ಸೇನೆ, ಸರ್ಕಾರದ ಸಹಾಯದಿಂದ ಕಾಶ್ಮೀರಕ್ಕೆ ಬಂದಿದ್ದೇವೆ: ಬಂಧಿತ ಉಗ್ರರ ತಪ್ಪೊಪ್ಪಿಗೆ

ಕಾಶ್ಮೀರದಲ್ಲಿ ಭಯೋತ್ಪಾದನೆ ಕೃತ್ಯಗಳನ್ನು ಎಸಗಲು ಮತ್ತು ಶಾಂತಿ, ಸುವ್ಯವಸ್ಥೆಯನ್ನು ಕದಡಲು ಪಾಕಿಸ್ತಾನ ವಿಶೇಷವಾಗಿ ಆಗಸ್ಟ್ 5ರ ನಂತರ ಕಣಿವೆಗೆ ಉಗ್ರರನ್ನು ನುಗ್ಗಿಸುತ್ತಿದೆ ಎಂದು ಭಾರತೀಯ ಸೇನೆ ಬುಧವಾರ ಹೇಳಿದೆ.

published on : 4th September 2019
1 2 3 4 5 6 >