ಬೇಂದ್ರೆಗೆ ಹುಟ್ಟಿದಾಗಲೇ ಡಾಕ್ಟರೇಟ್ ಕೊಟ್ಟಿದ್ರಂತೆ!

ದತ್ತಾತ್ರೇಯ ರಾಮಚಂದ್ರ ಬೇಂದ್ರೆ
ದತ್ತಾತ್ರೇಯ ರಾಮಚಂದ್ರ ಬೇಂದ್ರೆ

ಇದು 1968ರಲ್ಲಿ ನಡೆದ ಪ್ರಸಂಗ. ಆ ವರ್ಷ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ, ಬೇಂದ್ರೆಯವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿತು.

ಅದಕ್ಕೂ ಮೊದಲು, ಅಂದರೆ 1966ರಲ್ಲಿ ಮೈಸೂರು ವಿಶ್ವವಿದ್ಯಾಲಯ ಕೂಡ ಬೇಂದ್ರೆಯವರಿಗೆ ಡಾಕ್ಟರೇಟ್ ನೀಡಿತ್ತು. ಇದನ್ನೇ ನೆಪ ಮಾಡಿಕೊಂಡ ಕೆಲವರು, ಬೇಂದ್ರೆಯವರಿಗೆ ಈಗಾಗಲೇ ಮೈಸೂರು ವಿವಿ ಗೌರವ ಡಾಕ್ಟರೇಟ್ ಕೊಟ್ಟಿರುವಾಗ, ಧಾರವಾಡ ವಿವಿ ಕೂಡ ಮತ್ತೊಮ್ಮೆ ಕೊಡಬೇಕಾದ ಅಗತ್ಯವಿತ್ತೇ ಎಂದು ಪ್ರಶ್ನಿಸಿದರು.

ಈ ಸಂಬಂಧವಾಗಿ ವಾದ-ವಿವಾದಗಳಾದವು. ಸಾಕಷ್ಟು ಚರ್ಚೆಯೂ ನಡೆಯಿತು. ಇದೇ ಕಾರಣದಿಂದ ಡಾಕ್ಟರೇಟ್ ಪದವಿ ಪ್ರದಾನ ಕಾರ್ಯಕ್ರಮವೂ ಸ್ವಲ್ಪ ತಡವಾಗಿಯೇ ನಡೆಯಿತು. ಕಡೆಗೊಂದು ದಿನ ಪ್ರಶಸ್ತಿ ಸ್ವೀಕರಿಸಿದ ಬೇಂದ್ರೆ, ನಂತರ ಪ್ರತಿಕ್ರಿಯಿಸಿದ್ದು ಹೀಗೆ:

ಉಳಿದೋರಿಗೆಲ್ಲ ವಯಸ್ಸಿಗ ಬಂದಮ್ಯಾಲ ಡಾಕ್ಟರೇಟ್ ಸಿಗ್ತದ. ಆದ್ರೆ ನಾ ಹುಟ್ತಾನೇ ಡಾಕ್ಟರೇಟ್ ತಗೊಂಡೀನಿ. ನನಗ ಡಾಕ್ಟರೇಟ್ ಪದವೀನ ನನ್ನ ತಾಯ್ತಂದೆಯರೇ ಕೊಟ್ಟು ಬಿಟ್ಟಾರ. ಅಂತೆಯೇ ನಾನು ಈ ದ.ರಾ.(ಡಿ.ಆರ್) ಬೇಂದ್ರೆ ಇದೀನಿ. ಅಪ್ಪ-ಅಮ್ಮ ನೀಡಿದ ಡಾಕ್ಟರೇಟಿನ ಮುಂದ, ಬೇರ್ಯಾವ ಡಾಕ್ಟರೇಟಿನ ಮುಂದ, ಬೇರ್ಯಾವ ಡಾಕ್ಟರೇಟ್ಗೂ ಅಂಥ ಬೆಲೆ ಕಟ್ಟಲಾಗಲ್ಲ ಬಿಡ್ರಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com