೩೪೯ ಎಂ ಎಸ್ ಐ ಎಲ್ ಮದ್ಯದಂಗಡಿಗಳನ್ನು ಪ್ರಾರಂಭಿಸಲಿರುವ ರಾಜ್ಯ ಸರ್ಕಾರ

ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿ ಉತ್ತಮವಾಗಿದೆ ಆದುದರಿಂದ ರಾಜ್ಯದಲ್ಲಿ ಲಾಟರಿ ಮತ್ತೆ ಪ್ರಾರಂಭಿಸುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೊಪ್ಪಳ: ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿ ಉತ್ತಮವಾಗಿದೆ ಆದುದರಿಂದ ರಾಜ್ಯದಲ್ಲಿ ಲಾಟರಿ ಮತ್ತೆ ಪ್ರಾರಂಭಿಸುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಸಿದ್ದರಾಮಯ್ಯ ತಿಳಿಸಿದ್ದರೂ, ೨೦೧೫-೧೬ರ ಬಜೆಟ್ ನಲ್ಲಿ ಮೈಸೂರು ಇಂಂಟರ್ನ್ಯಾಶನಲ್ ಲಿಮಿಟೆಡ್ (ಎಂ ಎಸ್ ಐ ಎಲ್) ಮೂಲಕ ಹಲವಾರು ಮದ್ಯದಂಗಡಿಗಳನ್ನು ತೆರೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಎಂ ಎಸ್ ಐ ಎಲ್ ಮತ್ತು ಅಬಕಾರಿ ಅಲಾಖೆಯ ಸಹಯೋಗದೊಂದಿಗೆ ರಾಜ್ಯದಾದ್ಯಂತ ನಡೆಸಿದ ಸಮೀಕ್ಷೆಯಲ್ಲಿ ಸುಮಾರು ೩೪೯ ಪ್ರದೇಶಗಳನ್ನು ಮದ್ಯದಂಗಡಿ ತೆರೆಯಲು ಗುರುತಿಸಲಾಗಿದೆ ಎನ್ನಲಾಗಿದೆ.

ಈ ಎಂ ಎಸ್ ಐ ಎಲ್ ಅಂಗಡಿಗಳ ಮೂಲಕ ಜನರಿಗೆ ಕೈಗೆಟಕುವ ಬೆಲೆಯಲ್ಲಿ ಮದ್ಯವನ್ನು ಮಾರುವ ಯೋಜನೆಯನ್ನು ಸರ್ಕಾರ ಹೊಂದಿದೆ. ಎಂ ಎಸ್ ಐ ಎಲ್ ನ ನಿರ್ವಾಹಕ ನಿರ್ದೇಶಕ ಹರಿಕುಮಾರ್ ಸಮೀಕ್ಷೆಯ ವರದಿಯನ್ನು ಅಬಕಾರಿ ಇಲಾಖೆಗೆ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com