ಮತ್ತೊಂದು ಎಟಿಎಂ ದರೋಡೆ ಯತ್ನ
ಬೆಂಗಳೂರು: ಕೊಡಿಗೆಹಳ್ಳಿ ಸಮೀಪದ ಭದ್ರಪ್ಪ ಬಡಾವಣೆ ಮುಖ್ಯರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂಗೆ ನುಗ್ಗಿದ ದುಷ್ಕರ್ಮಿಗಳು ಸೆಕ್ಯುರಿಟಿ ಗಾರ್ಡ್ ಬೆದರಿಸಿ ದರೋಡೆ ಯತ್ನ ನಡೆಸಿದ್ದಾರೆ. ರಾತ್ರಿ 1 ಗಂಟೆ ಸುಮಾರಿಗೆ ಗ್ರಾಹಕರ ಸೋಗಿನಲ್ಲಿ ಮಂಕಿ ಕ್ಯಾಪ್ ಧರಿಸಿ ಎಟಿಎಂ ಘಟಕದ ಒಳಗೆ ನುಗ್ಗಿದ್ದಾರೆ. ಒಳಗೆ ಸೆಕ್ಯುರಿಟಿ ಗಾರ್ಡ್ ದೇವರಾಜ್ (35) ಎಂಬುವರು ಕರ್ತವ್ಯ ನಿರ್ವಹಿಸುತ್ತಿದ್ದರು. ಮೊದಲಿಗೆ ಅವರನ್ನು ಗ್ರಾಹಕರು ಎಂದು ಕೊಂಡಿದ್ದರು. ಆದರೆ, ದುಷ್ಕ ರ್ಮಿಗಳು ಮಾರಕಾಸ್ತ್ರದಿಂದ ಬೆದರಿಸಿ ಸುಮ್ಮನೆ ಇರಬೇಕು ಎಂದು ಪ್ರಾಣ ಬೆದರಿಕೆ ಹಾಕಿ ಸುಮಾರು 5 ನಿಮಿಷ ಎಟಿಎಂ ಯಂತ್ರದಲ್ಲಿ ಹಣ ಇಡುವ ಕೆಳ ಭಾಗವನ್ನು ಬಿಚ್ಚುವ ಯತ್ನ ನಡೆಸಿದ್ದಾರೆ.
ಅಷ್ಟರಲ್ಲೇ ರಸ್ತೆಯಲ್ಲಿ ಜನ ಬರುತ್ತಿರುವುದನ್ನು ಗಮನಿಸಿದ ದುಷ್ಕರ್ಮಿ ಗಳು ದರೋಡೆ ಯತ್ನ ಕೈಬಿಟ್ಟು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಭಯದಿಂದ ಸುಮ್ಮನೆ ಕುಳಿತಿದ್ದ ಗಾರ್ಡ್ ದೇವರಾಜ್, ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೊಡಿಗೆಹಳ್ಳಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ವೃದ್ದೆ ಕೊಲೆ: ಚಿನ್ನಾಭರಣ ಲೂಟಿ
ವರ್ತೂರು ಸಮೀಪದ ಬಳಗೆರೆ ರಸ್ತೆಯಲ್ಲಿ ಮನೆಗೆ ನುಗ್ಗಿದ ದುಷ್ಕರ್ಮಿ ಗಳು ಒಂಟಿ ವೃದೆಟಛಿಯ ಕತ್ತು ಬಿಗಿದು ಕೊಲೆ ಮಾಡಿ ಚಿನ್ನಾಭರಣ ಹಾಗೂ ನಗದು ದೋಚಿದ್ದಾರೆ. ಮಂಜುಳಾ(65) ಕೊಲೆಯಾದವರು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಪುತ್ರ ನಾಗರಾಜ್, ಶಿಕ್ಷಕಿಯಾಗಿರುವ ಸೊಸೆ ಹಾಗೂ ಮೊಮ್ಮಗಳೊಂದಿಗೆ ಮಂಜುಳಾ ವಾಸವಿದ್ದರು. ಮಂಗಳವಾರ ಬೆಳಗ್ಗೆ ಮಗ-ಸೊಸೆ ಕೆಲಸಕ್ಕೆ ಹೋಗಿದ್ದು, ಮೊಮ್ಮಗಳು ಕಾಲೇಜಿಗೆ ಹೋಗಿದ್ದಳು. ಮಂಜುಳಾ ಅವರು ಮಧ್ಯಾಹ್ನ ಬಟ್ಟೆ ತೊಳೆಯುತ್ತಿದ್ದ ವೇಳೆ
ಮನೆಯೊ ಳಗೆ ನುಗ್ಗಿದ ದುಷ್ಕರ್ಮಿಗಳು ಮಂಜುಳಾರ ಕೈ ಕಾಲು ಕಟ್ಟಿ ಹಾಕಿ ಸೀರೆಯಿಂದ ಕತ್ತು ಬಿಗಿದು ಕೊಲೆ ಮಾಡಿ ಚಿನ್ನಾಭರಣ ಹಾಗೂ ರು. 25 ಸಾವಿರ ನಗದಿನೊಂದಿಗೆ ಪರಾರಿಯಾ ಗಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ