ಹಳಿ ತಪ್ಪಿದ ಬೆಂಗಳೂರು-ಎರ್ನಾಕುಲಂ ರೈಲು: ಮಗು ಸೇರಿ 12 ಸಾವು
ಬೆಂಗಳೂರು: ಬೆಂಗಳೂರು-ಎರ್ನಾಕುಲಂ ಎಕ್ಸ್ ಪ್ರೆಸ್ ರೈಲು ಆನೇಕಲ್ ಬಳಿ ಹಳಿತಪ್ಪಿದ್ದು, ದುರಂತದಲ್ಲಿ ಮಗು ಸೇರಿ 12 ಪ್ರಯಾಣಿಕರು ಮೃತಪಟ್ಟಿದ್ದಾರೆ ಮತ್ತು ೬೦ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.
ಬೆಳಗ್ಗೆ 6.25ಕ್ಕೆ ಹೊರಟಿದ್ದ ಬೆಂಗಳೂರು-ಎರ್ನಾಕುಲಂ ಎಕ್ಸ್ ಪ್ರೆಸ್ ರೈಲು ಬೆಂಗಳೂರು-ಹೊಸೂರು ಮಾರ್ಗ ಮಧ್ಯೆ ಆನೇಕಲ್ ಸಮೀಪದ ಬಿದರಗೆರೆ ಗ್ರಾಮದ ಬಳಿ ಹಳಿತಪ್ಪಿದೆ. ಸುಮಾರು 8 ಬೋಗಿಗಳು ಹಳಿ ತಪ್ಪಿದ್ದು, ನೂರಾರು ಪ್ರಯಾಣಿಕರು ಪ್ರಾಣಾಪಾಯಕ್ಕೆ ಸಿಲುಕಿದ್ದಾರೆ ಎಂದು ತಿಳಿದುಬಂದಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ ಇಂದು ಬೆಳಗ್ಗೆ 7.30 ಸುಮಾರಿನಲ್ಲಿ ರೈಲು ಹಳಿ ತಪ್ಪಿದೆ ಎಂದು ತಿಳಿದುಬಂದಿದೆ.
ಇನ್ನು ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ಪೊಲೀಸರು ದೌಡಾಯಿಸಿದ್ದು, ರೈಲ್ವೇ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.
ಆಂಬುಲೆನ್ಸ್‌ಗಳೊಂದಿಗೆ ತೆರಳುವಂತೆ ಡಿಎಒಗೆ ಸೂಚನೆ
ಇನ್ನು ರೈಲು ಹಳಿ ತಪ್ಪಿದ ವಿಚಾರ ತಿಳಿಯುತ್ತಿದ್ದಂತೆ ಆರೋಗ್ಯ ಸಚಿವ ಯುಟಿಖಾದರ್ ಅವರು, ಸ್ಥಳೀಯ ಬೆಂಗಳೂರು ಗ್ರಾಮಾಂತರ ಡಿಎಚ್‌ಒ ಅವರಿಗೆ ಘಟನಾ ಸ್ಥಳಕ್ಕೆ ತೆರಳುವಂತೆ ಸೂಚಿಸಿದ್ದಾರೆ. ಅಲ್ಲದೆ ಅಗ್ನಿಶಾಮಕ ದಳದ ವಾಹನ ಮತ್ತು ಆ್ಯಂಬುಲೆನ್ಸ್‌ಗಳೊಂದಿಗೆ ತೆರಳುವಂತೆ ಡಿಎಚ್‌ಒಗೆ ಸೂಚಿಸಿದ್ದಾರೆ.
ಘಟನೆ ಸಂಬಂಧಿಸಿದಂತೆ ರೈಲ್ವೇ ಇಲಾಖೆ ಮಾಹಿತಿ ಪಡೆಯಲು ಹೆಲ್ಪ್ ಲೈನ್ ನಂಬರ್ ನೀಡಿದೆ. ಹೆಲ್ಪ್ ಲೈನ್ ನಂಬರ್-9731666751, 080-22371166, 080-22943666
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ