ಜಿಲ್ಲಾ ಸುದ್ದಿ
ಅತ್ಯಾಚಾರ ಯತ್ನ: ಆರೋಪಿ ಬಂಧನ
ಆಟವಾಡುತ್ತಿದ್ದ 10 ವರ್ಷದ ಬಾಲಕಿಗೆ ಬಿಸ್ಕತ್ ಕೊಡುವುದಾಗಿ ಹೇಳಿ ಟೀ ಅಂಗಡಿಯೊಳಗೆ ಕರೆದೊಯ್ದು...
ಬೆಂಗಳೂರು: ಆಟವಾಡುತ್ತಿದ್ದ 10 ವರ್ಷದ ಬಾಲಕಿಗೆ ಬಿಸ್ಕತ್ ಕೊಡುವುದಾಗಿ ಹೇಳಿ ಟೀ ಅಂಗಡಿಯೊಳಗೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ ದುಷ್ಕರ್ಮಿಯನ್ನು ಸಾರ್ವಜನಿಕರು ಹಿಡಿದು ಥಳಿಸಿರುವ ಘಟನೆ ಗಂಗಾನಗರದಲ್ಲಿ ನಡೆದಿದೆ.
ಟೀ ಅಂಗಡಿ ಕೆಲಸಗಾರ ಗಂಗಾಧರ್ ಬಂದಿತ ಆರೋಪಿ. ಟೀ ಅಂಗಡಿ ಸಮೀಪದಲ್ಲೇ ಮನೆ ಇದ್ದು ಶನಿವಾರ ಬೆಳಗ್ಗೆ ಬಾಲಕಿ ಮನೆಯ ಬಳಿ ಆಟವಾಡುತ್ತಿದ್ದಳು. ಈ ವೇಳೆ ಹೋಟೆಲ್‍ನಲ್ಲಿ ಗ್ರಾಹಕರು ಕಮ್ಮಿ ಇದ್ದಾಗ ಆರೋಪಿ ಬಿಸ್ಕತ್ ಕೊಡಿಸುವುದಾಗಿ ಹೋಟೆಲ್ ಒಳಗೆ ಬಾಲಕಿಯನ್ನು ಕರೆದುಕೊಂಡು ಹೋಗಿ ವಿವಸ್ತ್ರಗೊಳಿಸಲು ಯತ್ನಿಸಿದ್ದಾನೆ. ಈ ವೇಳೆ ಗ್ರಾಹಕರು ಗಮನಿಸಿ ಕೂಗಾಡಿದಾಗ ಸಾರ್ವಜನಿಕರು ಸೇರಿ ಆರೋಪಿ ಗಂಗಾಧರನನ್ನು ಹಿಡಿದು ಹಿಗ್ಗಾ ಮುಗ್ಗಾ ಥಳಿಸಿ ಆರ್‍ಟಿ ನಗರಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ಬಂದಿಸಿ ಬಾಲಕಿ ಪಾಲಕರು ನೀಡಿದ ದೂರಿನ ಮೇಲೆ ಪೊಕ್ಸೊ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ.

