ಹೈಕೋರ್ಟ್‍ನಿಂದ ಮಾಲಿನ್ಯ ನಿಯಂತ್ರಣ ಮಂಡಳಿ ತರಾಟೆ

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಎಂಬುದು ಯಾವ ರೀತಿಯ ಸಂಸ್ಥೆ. ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ತಮ್ಮ ಜವಬ್ದಾರಿಯನ್ನೇ ಮರೆತಂತಿದೆ...
ಹೈಕೋರ್ಟ್‍ನಿಂದ ಮಾಲಿನ್ಯ ನಿಯಂತ್ರಣ ಮಂಡಳಿ ತರಾಟೆ

ಬೆಂಗಳೂರು: ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಎಂಬುದು ಯಾವ ರೀತಿಯ ಸಂಸ್ಥೆ. ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ತಮ್ಮ ಜವಬ್ದಾರಿಯನ್ನೇ ಮರೆತಂತಿದೆ.

ಅಧಿಕಾರಿಗಳು ಸುಖಾಸುಮ್ಮನೆ ಸಂಬಳ ಪಡೆಯುತ್ತಿದ್ದಾರೆ ಅಷ್ಟೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ವಿರುದ್ಧ ಹೈಕೋರ್ಟ್ ಕೆಂಡಮಂಡಲವಾಗಿದೆ. ನಗರದಲ್ಲಿ ಹೆಚ್ಚುತ್ತಿರುವ ಶಬಟಛಿ ಹಾಗೂ ವಾಯು ಮಾಲಿನ್ಯವನ್ನು ಗಂಭೀರವಾಗಿ ಪರಿಗಣಿಸಿದ್ದ ಹೈಕೋರ್ಟ್ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡಿತ್ತು. ಸೋಮವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾ.ಡಿ.ಎಚ್.ವಘೇಲಾ ಮತ್ತು ನ್ಯಾ.ರಾಮಮೋಹನ ರೆಡ್ಡಿ ಅವರಿದ್ದ ವಿಭಾಗೀಯ ಪೀಠ, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡಿತು. ಬಿಬಿಎಂಪಿಯಲ್ಲಿ ಕಸ ಗುಡಿಸುವವರಿಂದ ಹಿಡಿದು ಆಯುಕ್ತರವರೆಗೂ ಎಲ್ಲರೂ ಅಧಿಕಾರಿಗಳಂತೆ ವರ್ತಿಸುತ್ತಾರೆ.

ಇನ್ನು ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ಗಮನಿಸಿದರೆ ಅದು ಒಂದು ಸಂಸ್ಥೆಯೇಎಂದು ಆಶ್ಚರ್ಯವಾಗುತ್ತದೆ. ನಗರದಲ್ಲಿ ಹೆಚ್ಚುತ್ತಿರುವ ಶಬ್ಧ ಹಾಗೂ ವಾಯು ಮಾಲಿನ್ಯವನ್ನು ನಾಳೆಯಿಂದಲೇ ನಿಯಂತ್ರಣ ಮಾಡಬೇಕು. ಇದನ್ನು ಸುಲಭವಾಗಿ ಪರಿಗಣಿಸಬೇಡಿ ಎಂದು ಕೋರ್ಟ್ ಎಚ್ಚರಿಕೆ ನೀಡಿದೆ. ವಿಚಾರಣೆ ವೇಳೆ ಮಂಡಳಿಯ ಪರ ವಕೀಲರು ವಾದಿಸಿ, ನಿಯಮ ಉಲ್ಲಂಘಿಸಿ ಮಾಲಿನ್ಯ ಹೆಚ್ಚಳಕ್ಕೆ ಕಾರಣವಾಗಿರುವವರ ವಿರುದಟಛಿ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಪೀಠಕ್ಕೆ ತಿಳಿಸಿದರು.

ಮಾಲಿನ್ಯ ನಿಯಂತ್ರಣ ಮಾಡುವ ಸಲುವಾಗಿ ಹೆಚ್ಚುವರಿ ಕಾರ್ಯದರ್ಶಿ ಅವರ ನೇತೃತ್ವದಲ್ಲಿ ಅಲ್ಪ ಹಾಗೂ ದೀರ್ಘಾವಧಿ ಯೋಜನೆ ರೂಪಿಸಲಾಗಿದೆ. ಅಲ್ಲದೇ ಮಾಲಿನ್ಯ ನಿಯಂತ್ರಣ ಮಾಡುವ ಸಂಬಂಧ ಅರಣ್ಯ ಹಾಗೂ ಪರಿಸರ ಇಲಾಖೆಯೂ ಸಹಕರಿಸುವಂತೆ ಸೂಚಿಸಿ ಅರಣ್ಯ ಇಲಾಖೆಗೂ ಜವಾಬ್ಧಾರಿ  ವಹಿಸಲಾಗಿದೆ ಎಂದು ಸರ್ಕಾರಿ ವಕೀಲರು ಪೀಠದ ಗಮನಕ್ಕೆ ತಂದರು.

ಇದನ್ನು ಆಲಿಸಿದ ಪೀಠ, ಮುಂದಿನ ವಿಚಾರಣೆ ವೇಳೆ ಅರಣ್ಯ ಹಾಗೂ ಪರಿಸರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕೋರ್ಟ್‍ಗೆ ಹಾಜರಾಗಿ ಮಾಲಿನ್ಯ ನಿಯಂತ್ರಣ ಮಾಡುವ ಸಲುವಾಗಿ ತೆಗೆದುಕೊಳ್ಳುವ ಕ್ರಮದ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿ ವಿಚಾರಣೆ ಮುಂದೂಡಿತು.

ಮಾದರಿ ರಸ್ತೆ ಬಗ್ಗೆ ಹೈ ಅಸಮಾಧಾನ
ಮಾದರಿ ರಸ್ತೆ ಮಾಡವುದಾಗಿ ಬಿಬಿಎಂಪಿ ಆಯ್ಕೆ ಮಾಡಿಕೊಂಡಿರುವ ಪ್ರದೇಶಗಳನ್ನು ಗಮನಿಸಿದರೆ ಆರೋಗ್ಯವಂತರಿಗೆ ಚಿಕಿತ್ಸೆ ನೀಡಿ ಅನಾರೋಗ್ಯದಿಂದ ಬಳಲುತ್ತಿರುವವರನ್ನು
ನಿರ್ಲಕ್ಷ್ಯ ವಹಿಸಿದಂತೆ ಕಾಣುತ್ತದೆ. ಕೆಲವೊಂದು ಪ್ರದೇಶದಲ್ಲಿ ಪಾದಚಾರಿ ಮಾರ್ಗ ಸರಿಪಡಿಸುವ ನೆಪದಲ್ಲಿ ರಸ್ತೆಯನ್ನು ಕಡಿದಾಗಿ ಮಾಡಿದೆ.

ಈಗಾಗಲೇ ಸುಸಜ್ಜಿತವಾಗಿರುವ ರಸ್ತೆಯನ್ನು ಮಾದರಿ ರಸ್ತೆಯನ್ನಾಗಿ ಮಾಡುವ ಬದಲು ಬೇರಾವುದಾದರೂ ರಸ್ತೆಯನ್ನು ಆಯ್ದುಕೊಂಡು ಮಾದರಿಯನ್ನಾಗಿ ಮಾಡುವಂತೆ ವಿಭಾಗೀಯ ಪೀಠ ಇದೇ ವೇಳೆ ಬಿಬಿಎಂಪಿಗೆ ಸಲಹೆ ನೀಡಿತು. ವಿಚಾರಣೆ ವೇಳೆ ವಕೀಲರು, ಸಾರ್ವಜನಿಕರು ರಸ್ತೆಯಲ್ಲೇ ವಾಹನ ನಿಲ್ದಾಣ ಮಾಡುವುದರಿಂದ ಸಮಸ್ಯೆ ಹೆಚ್ಚಾಗಿದೆ. ಪಾರ್ಕಿಂಗ್ ಸೌಲಭ್ಯ ಇದ್ದವರಿಗೆ ಮಾತ್ರ ವಾಹನ ಖರೀದಿಗೆ ಅವಕಾಶ ನೀಡಿ ಎಂದು ಇದೇ ವೇಳೆ ಪೀಠಕ್ಕೆ ಮನವಿ ಮಾಡಿದರು. ರಸ್ತೆಯಲ್ಲಿ ಸಂಚರಿಸಲು ವಾಹನ ಇರುವುದೇ ಹೊರತು ನಿಲ್ದಾಣಕ್ಕೆ ಅಲ್ಲ ಎಂದು ಇದೇ ವೇಳೆ ಪೀಠ ಅಭಿಪ್ರಾಯಪಟ್ಟಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com