ಮಗಳು ಕೊಂದು ತಂದೆಯೂ ಆತ್ಮಹತ್ಯೆ

ಮನೆ ತೊರೆದ ಪತ್ನಿ ಪ್ರಿಯತಮನೊಂದಿಗೆ ಓಡಿಹೋಗಿದ್ದಾಳೆ ಎಂಬ ಕಾರಣಕ್ಕೆ ನೊಂದ ವ್ಯಕ್ತಿಯೊಬ್ಬರು ತನ್ನ ಮಗಳನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ...
ಮಗಳು ಕೊಂದು ತಂದೆಯೂ ಆತ್ಮಹತ್ಯೆ

ಬೆಂಗಳೂರು: ಮನೆ ತೊರೆದ ಪತ್ನಿ ಪ್ರಿಯತಮನೊಂದಿಗೆ ಓಡಿಹೋಗಿದ್ದಾಳೆ ಎಂಬ ಕಾರಣಕ್ಕೆ ನೊಂದ ವ್ಯಕ್ತಿಯೊಬ್ಬರು ತನ್ನ ಮಗಳನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ರಾಜಾನುಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ರಾಜನುಕುಂಟೆ ಹೊನ್ನೇನಹಳ್ಳಿ ನಿವಾಸಿ ಪ್ರಸನ್ನಕುಮಾರ್(33), ಮಗಳು ಕೀರ್ತಿ(7)ಯನ್ನು ಕುತ್ತಿಗೆ ಬಿಗಿದು ಕೊಲೆ ಮಾಡಿ ನಂತರ ತಾನೂ ನೇಣಿಗೆ ಶರಣಾದ್ದಾರೆ. ಪ್ರಸನ್ನಕುಮಾರ್ ಸುಮಾರು ಎಂಟು ವರ್ಷದ ಹಿಂದೆ ಉಷಾ ಎಂಬಾಕೆಯನ್ನು ಪ್ರೀತಿಸಿ ವಿವಾಹವಾಗಿದ್ದರು. ಈ ನಡುವೆ ಆಕೆಗೆ ಕಳೆದ ಆರು ತಿಂಗಳ ಹಿಂದೆ ಗುಲ್ಬರ್ಗಾ ಮೂಲದ ಮಲ್ಲಿಕಾರ್ಜುನ್ ಎಂಬುವರ ಪರಿಚಯವಾಗಿತ್ತು. ಪರಿಚಯ ಸ್ನೇಹಕ್ಕೆ ತಿರುಗಿ, ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು.

ಇದನ್ನು ತಿಳಿದ ಕುಟುಂಬ ಸದಸ್ಯರು ಆತನ ಸಹವಾಸ ಬಿಡುವಂತೆ ಆಕೆಗೆ ಬುದ್ಧಿಮಾತು ಹೇಳಿದ್ದರು. ಮಲ್ಲಿಕಾರ್ಜುನ್‍ಗೂ ತಿಳವಳಿಕೆ ಹೇಳಿದ್ದರು. ಇದರಿಂದ ಕೋಪಗೊಂಡ ಆಕೆ ವಿಚ್ಛೇದನ ಪಡೆಯುವುದಾಗಿ ಹೇಳಿ ತವರಿಗೆ ಹೋಗಿದ್ದರು. ಆಕೆಯನ್ನು ವಾಪಾಸ್ ಕರೆತರಲು ಮನವೊಲಿಸಿದ್ದೂ ಪ್ರಯೋಜನವಾಗಿರಲಿಲ್ಲ. ಇದರಿಂದ ಪ್ರಸನ್ನಕುಮಾರ್ ಸಾಕಷ್ಟು ನೊಂದಿದ್ದರು. ಕೌಟುಂಬಿಕ ಕಲಹ ಹೀಗೆಯೇ ಮುಂದುವರಿದಿದ್ದರಿಂದ ಬೇಸರಗೊಂಡು ಆತ್ಮಹತ್ಯೆಗೆ ನಿರ್ಧರಿಸಿದ ಪ್ರಸನ್ನಕುಮಾರ್, ತಾನು ಮೃತಪಟ್ಟರೆ ಮಗಳು ಅನಾಥಳಾಗುತ್ತಾಳೆ.

ಆಕೆಯನ್ನು ನೋಡಿಕೊಳ್ಳುವವರು ಯಾರೂ ಇರುವುದಿಲ್ಲ ಎಂಬ ಕಾರಣಕ್ಕೆ ಮೊದಲು ಮಗಳ ಕುತ್ತಿಗೆ ಬಿಗಿದು ಸಾಯಿಸಿ ನಂತರ ತಾನೂ ನೇಣಿಗೆ ಶರಣಾಗಿದ್ದಾರೆ. ತಿರುಪತಿಗೆ ಹೋಗಿದ್ದ ಅವರ ತಂದೆ ಸೋಮವಾರ ಬೆಳಗ್ಗೆ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೂ ಮುನ್ನ ಡೆತ್‍ನೋಟ್ ಬರೆದಿಟ್ಟಿದ್ದು, ಪೊಲೀಸರು ಅದನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸರು ಪ್ರಸನ್ನ ಕುಮಾರ್ ಗ್ರಾಫಿಕ್ ಡಿಸೈನರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಮೂರು ತಿಂಗಳ ಹಿಂದೆ ಅವರ ಪತ್ನಿ ಮನೆ ತ್ಯಜಿಸಿದ್ದರೆನ್ನಲಾಗಿದೆ. ಈ ಸಂಬಂಧ ಯಲಹಂಕ ನ್ಯೂ ಟೌನ್‍ನಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಆಕೆಯನ್ನು ಪತ್ತೆ ಮಾಡಿದ ಪೊಲೀಸರು ಮನೆಗೆ ಕರೆತಂದು ಬಿಟ್ಟರೂ ಆಕೆ ಮತ್ತೆ ತನ್ನ ಪ್ರಿಯತಮನ ಜತೆ ಓಡಿಹೋಗಿದ್ದಾರೆ.

ಇದರಿಂದ ನೊಂದ ಪ್ರಸನ್ನಕುಮಾರ್, ತಂದೆ ತಿರುಪತಿಗೆ ಹಾಗೂ ತಾಯಿ ದೊಡ್ಡಬಳ್ಳಾಪುರಕ್ಕೆ ಹೋಗಿದ್ದ ವೇಳೆ ಈ ಕೃತ್ಯ ಎಸಗಿದ್ದಾರೆ.  ಎಸಗಿದ್ದಾರೆ. ಉಷಾಳನ್ನು ಸಂಪರ್ಕಿಸಿದ್ದು ಆಕೆ ಬಂದ ನಂತರ ಅವರ ಹೇಳಿಕೆಯನ್ನೂ ಪಡೆಯಲಾಗುವುದು. ಕೊನೆಯವರೆಗೂ ಪತ್ನಿ ಜತೆ ಇರಬೇಕೆಂದು ಭಾವಿಸಿದ್ದೆ. ಆದರೆ, ಅದು ಸಾಧ್ಯವಾಗಲಿಲ್ಲ. ನನ್ನ ಹಾಗೂ ಮಗಳ ಸಾವಿನಿಂದ ಉಷಾಗೆ ತೊಂದರೆ ನೀಡಬೇಡಿ ಎಂದು ಡೆತ್‍ನೋಟ್‍ನಲ್ಲಿ ಮನವಿ ಮಾಡಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com