• Tag results for ಮಗಳು

ಸಣ್ಣ ಸಂಸ್ಥೆಗಳಿಂದ 5 ವರ್ಷಗಳಲ್ಲಿ 10.3 ಮಿಲಿಯನ್ ಉದ್ಯೋಗ ಸೃಷ್ಟಿ ಸಾಧ್ಯ: ವರದಿ 

ಭಾರತದ ಅನೌಪಚಾರಿಕ ಸಣ್ಣ ಸಂಸ್ಥೆಗಳು ಮುಂದಿನ 5 ವರ್ಷಗಳಲ್ಲಿ 10.3 ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸಲು ಸಾಧ್ಯವಿದೆ ಎಂದು ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ ಮತ್ತು ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ -ಇಂಡಸ್ಟ್ರಿ ಹಾಗೂ ಅಜಿಮ್ ಪ್ರೇಮ್ ಜಿ ವಿವಿ ಬಿಡುಗಡೆ ಮಾಡಿರುವ ನೀತಿ ಪತ್ರದಲ್ಲಿ ಹೇಳಿದೆ

published on : 24th January 2021

'ನೇತಾಜಿ ಧರ್ಮನಿಷ್ಠ ಹಿಂದೂ ಆಗಿದ್ದರು, ಆದರೆ ಎಲ್ಲಾ ಮತಗಳನ್ನೂ ಗೌರವಿಸುತ್ತಿದ್ದರು'

ದೇಶಾದ್ಯಂತ ನೇತಾಜಿ ಸುಭಾಷ್ ಚಂದ್ರ ಬೋಸರ 125 ನೇ ಜನ್ಮದಿನವನ್ನು ಆಚರಣೆ ಮಾಡಲಾಗುತ್ತಿದೆ. ಜ.23 ರಂದು ಜನ್ಮದಿನದ ಅಂಗವಾಗಿ ನೇತಾಜಿ ಅವರ ಪುತ್ರಿ ಅನಿತಾ ಬೋಸ್ ಮಾತನಾಡಿದ್ದು, ಸುಭಾಷ್ ಚಂದ್ರ ಬೋಸರು ಧರ್ಮನಿಷ್ಠ ಹಿಂದೂ ಆಗಿದ್ದರು ಎಂದು ಹೇಳಿದ್ದಾರೆ. 

published on : 24th January 2021

'ಗ್ರಾಮಸ್ಥರ ಸಮಸ್ಯೆಗೆ ಮನೆ ಬಾಗಿಲಲ್ಲೇ ಪರಿಹಾರ: ಜಿಲ್ಲಾಧಿಕಾರಿಗಳ ನಡೆ-ಹಳ್ಳಿ ಕಡೆ'

ಜಿಲ್ಲಾಡಳಿತವನ್ನು ಹಳ್ಳಿ ಜನರ ಮನೆ ಬಾಗಿಲಿಗೆ ಕೊಂಡೊಯ್ಯುವ 'ಜಿಲ್ಲಾಧಿಕಾರಿಗಳ ನಡೆ-ಹಳ್ಳಿ ಕಡೆ' ಕಾರ್ಯಕ್ರಮಕ್ಕೆ ಫೆಬ್ರವರಿ ತಿಂಗಳ ಮೂರನೇ ಶನಿವಾರ ಚಾಲನೆ ದೊರೆಯಲಿದೆ

published on : 22nd January 2021

ನಾರ್ವೆಯಲ್ಲಿ ಫೈಜರ್ ಲಸಿಕೆ ಪಡೆದ 23 ವೃದ್ಧರ ಸಾವು! ಅಡ್ಡ ಪರಿಣಾಮಗಳ ಬಗ್ಗೆ ನಿಗಾವಣೆ ಅಗತ್ಯ- ಭಾರತೀಯ ತಜ್ಞರು

ಫೈಜರ್- ಬಯೋಟೆಕ್ ಕೋವಿಡ್-19 ಲಸಿಕೆ ಪಡೆದ 23 ವೃದ್ಧರು ಮೃತಪಟ್ಟಿರುವ ಘಟನೆ ನಾರ್ವೆಯಲ್ಲಿ ವರದಿಯಾಗಿದೆ. ದೇಶಾದ್ಯಂತ ಕೋವಿಡ್-19 ಲಸಿಕೆ ವಿತರಣೆ ದಿನದಂದು ನಡೆದ ಅಡ್ಡ ಪರಿಣಾಮಗಳ ಬಗ್ಗೆ ಹತ್ತಿರದಿಂದ ನಿಗಾ ವಹಿಸಬೇಕಾದ ಅಗತ್ಯವಿದೆ ಎಂದು ಭಾರತದ ತಜ್ಞರು ಹೇಳಿದ್ದಾರೆ.

published on : 16th January 2021

ಟ್ರಂಪ್ ಅಪಾಯಕಾರಿ, ಸಂಸತ್ ಕಟ್ಟಡ ಮೇಲಿನ ದಾಳಿ ಹೊಣೆ ಹೊರಿಸಿ ಪದಚ್ಯುತಿಗೊಳಿಸಿ: ಅಮೆರಿಕ ಮಾಧ್ಯಮಗಳು

ಅಮೆರಿಕ ಸಂಸತ್ ಕಟ್ಟಡ ಮೇಲಿನ ದಾಳಿಗೆ ಡೊನಾಲ್ಡ್ ಟ್ರಂಪ್ ಅವರ ಪ್ರಚೋದನಾಕಾರಿ ಹೇಳಿಕೆಗಳು ಕಾರಣವಾಗಿದ್ದು, ಕಚೇರಿಯಲ್ಲಿರಲು ನಾಲಾಯಕ್ ಆಗಿರುವ ಟ್ರಂಪ್ ಅವರನ್ನು ಕೂಡಲೇ ಪದಚ್ಯುತಿಗೊಳಿಸಬೇಕು ಎಂದು ಅಮೆರಿಕ ಮಾಧ್ಯಮಗಳು ಪ್ರತಿಪಾದಿಸಿವೆ.

published on : 7th January 2021

ಮಗಳ ಆರತಕ್ಷತೆಗೆ ಬನ್ನಿ... ಮುಖ್ಯಮಂತ್ರಿ ಯಡಿಯೂರಪ್ಪಗೆ ನಟ ರಮೇಶ್ ಅರವಿಂದ್ ಆಹ್ವಾನ

ಖ್ಯಾತ ನಟ ರಮೇಶ್ ಅರವಿಂದ್ ಹಾಗೂ ಅರ್ಚನಾ ದಂಪತಿಗಳ ಪುತ್ರಿ ನಿಹಾರಿಕ ಅವರ ಮದುವೆ ಅಕ್ಷಯ್ ಅವರೊಂದಿಗೆ ಕಳೆದ ಡಿಸೆಂಬರ್ 28 ರಂದು ಎರಡು ಕುಟುಂಬದ ಸದಸ್ಯರ ಸಮ್ಮುಖದಲ್ಲಿ ನೆರವೇರಿತ್ತು.

published on : 5th January 2021

ಹೊಸ ವರ್ಷಾಚರಣೆ ನಿಯಮ ಉಲ್ಲಂಘಿಸಿದ್ದಲ್ಲಿ ದಂಡ ಸೇರಿ ಕೇಸ್ ದಾಖಲು: ಕಮಲ್ ಪಂತ್ ಎಚ್ಚರಿಕೆ

ಚಾಲ್ತಿಯಲ್ಲಿರುವ ಕೋವಿಡ್ -19 ಪರಿಸ್ಥಿತಿ ಮತ್ತು ರೂಪಾಂತರಗೊಂಡಿರುವ ಹೊಸ ವೈರಸ್ ವ್ಯಾಪಕವಾಗಿ ಹರಡುತ್ತಿರುವುದನ್ನು ಗಮನಿಸಿ, ಮುಂಬರುವ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.

published on : 31st December 2020

ಕಾರವಾರ: ಇಷ್ಟಕ್ಕೆ ವಿರುದ್ಧವಾಗಿ ಮದುವೆಯಾಗಿದ್ದ ಮಗಳನ್ನು ಕಿಡ್ನಾಪ್ ಮಾಡಿದ ತಾಯಿ!

ತನ್ನ ಇಷ್ಟಕ್ಕೆ ವಿರುದ್ಧವಾಗಿ ಬೇರೊಬ್ಬನನ್ನು ಪ್ರೀತಿಸಿ ಮದುವೆಯಾಗಿದ್ದ ಮಗಳನ್ನು ತಾಯಿಯೇ ಕಿಡ್ನಾಪ್ ಮಾಡಿ ಪರಾರಿಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಶಿರಸಿಯಲ್ಲಿ ನಡೆದಿದೆ.

published on : 26th December 2020

ಕೌಟುಂಬಿಕ ಕಲಹ: ಹಾವೇರಿಯಲ್ಲಿ ಕೆರೆಗೆ ಹಾರಿ ತಾಯಿ, ಮಗಳು ಆತ್ಮಹತ್ಯೆ

ಕೌಟುಂಬಿಕ ಕಲಹದ ಹಿನ್ನೆಲೆ ಮನನೊಂದ ತಾಯಿ ತನ್ನ ಮಗಳ ಜತೆಸೇರಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾವೇರಿ ಜಿಲ್ಲೆ ಹಿರೇಕೆರೂರಿನಲ್ಲಿ ನಡೆದಿದೆ.

published on : 23rd December 2020

ಬಂಡವಾಳ ಹೂಡಿಕೆಯಲ್ಲಿ ರಾಜ್ಯವನ್ನು ನಂ.1 ಸ್ಥಾನಕ್ಕೆ ತರಲು ಉದ್ಯಮಗಳು ಸಹಾಯ ಮಾಡಲಿ: ಸಿಎಂ ಯಡಿಯೂರಪ್ಪ

ಕೈಗಾರಿಕೋದ್ಯಮಗಳು ಕರ್ನಾಟಕವನ್ನು ಹೂಡಿಕೆಯಲ್ಲಿ ನಂ.1 ರಾಜ್ಯವನ್ನಾಗಿ ಮಾಡಲು ಸಹಾಯ ಮಾಡಲಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೇಳಿದ್ದಾರೆ.

published on : 17th December 2020

ನೂತನ ಅಗ್ನಿ ಸುರಕ್ಷತಾ ನಿಯಮಗಳಿಗೆ ಖಾಸಗಿ ಶಾಲೆಗಳ ವಿರೋಧ 

 ರಾಜ್ಯದಲ್ಲಿನ ಖಾಸಗಿ ಶಾಲೆಗಳು, ಪದವಿ ಪೂರ್ವ ಕಾಲೇಜುಗಳು ನೂತನ ಅಗ್ನಿ ಸುರಕ್ಷತಾ ನಿಯಮಗಳ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿವೆ.

published on : 15th December 2020

ಹೆಚ್ಚಿನ ನಿವೃತ್ತಿ ಭತ್ಯೆ, ಟೇಕ್ ಹೋಮ್ ವೇತನಕ್ಕೆ ಕತ್ತರಿ! ಹೊಸ ವೇತನ ನಿಯಮಗಳ ಬಗ್ಗೆ ಇಲ್ಲಿದೆ ವಿವರ...

ಏಪ್ರಿಲ್ 2021 ರಿಂದ ನಿವೃತ್ತಿಗಾಗಿನ ಆದಾಯ ಮತ್ತು ಗ್ರ್ಯಾಚುಟಿ ಪಾವತಿಯೊಂದಿಗೆ ನಿಮ್ಮ ಸಾಮಾಜಿಕ ಭದ್ರತೆಯನ್ನು ಇನ್ನಷ್ಟು ಬಲಪಡಿಸುವ ಸಾಧ್ಯತೆಯಿದೆ, ಆದರೆ ನಿಮ್ಮ ಮಾಸಿಕ ಟೇಕ್-ಹೋಮ್ ವೇತನ ಕಡಿಮೆಯಾಗಬಹುದು.

published on : 10th December 2020

ಇನ್ನು 3 ವರ್ಷಗಳಲ್ಲಿ ಎಲ್ಲಾ ಹಳ್ಳಿಗಳಿಗೆ ಹೈ ಸ್ಪೀಡ್ ಇಂಟರ್ನೆಟ್ ಸೇವೆ: ಪ್ರಧಾನಿ ನರೇಂದ್ರ ಮೋದಿ 

ಮುಂದಿನ ಮೂರು ವರ್ಷಗಳಲ್ಲಿ ಭಾರತದ ಎಲ್ಲಾ ಹಳ್ಳಿಗಳಿಗೆ ಅಧಿಕ ವೇಗದ ಫೈಬರ್ ಡಾಟಾ ಇಂಟರ್ನೆಟ್ ಸಂಪರ್ಕ ಸೇವೆಯನ್ನು ಒದಗಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. 

published on : 8th December 2020

ಖ್ಯಾತ ಸಮಾಜ ಸೇವಕ ಬಾಬಾ ಅಮ್ಟೆ ಮೊಮ್ಮಗಳು ಡಾ.ಶೀತಲ್ ಅಮ್ಟೆ ಆತ್ಮಹತ್ಯೆಗೆ ಶರಣು!

ಅಂತಾರಾಷ್ಟ್ರೀಯ ಖ್ಯಾತಿಯ ಸಮಾಜ ಸೇವಕ ಬಾಬಾ ಅಮ್ಟೆ ಅವರ ಮೊಮ್ಮಗಳು ಮತ್ತು ಆನಂದ್ ವನ್ ನಲ್ಲಿರುವ ಮಹಾರೋಗಿ ಸೇವಾ ಸಮಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಡಾ.ಶೀತಲ್ ವಿಕಾಸ್ ಅಮ್ಟೆ ಕಾರಜಿಗಿ ಸೋಮವಾರ (ನವೆಂಬರ್ 30) ಚಂದ್ರಾಪುರದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. 

published on : 30th November 2020

ಚೆನ್ನೈ: ಕೋವಿಶೀಲ್ಡ್ ಲಸಿಕೆ ಪ್ರಯೋಗಗಳಿಂದ ಅಡ್ಡಪರಿಣಾಮ: 5 ಕೋಟಿ ರೂ.ಪರಿಹಾರ ಬಯಸಿದ ಸ್ವಯಂ ಸೇವಕ  

ಪುಣೆ ಮೂಲದ ಸೆರಮ್ ಇನ್ಸಿಟ್ಯೂಟ್ ಆಫ್ ಇಂಡಿಯಾ ತಯಾರಿಸಿರುವ 'ಕೋವಿಶೀಲ್ಡ್'  ಕೋವಿಡ್-19 ಲಸಿಕೆ ಪ್ರಯೋಗದಲ್ಲಿ ಪಾಲ್ಗೊಂಡಿದ್ದ 40 ವರ್ಷದ ವ್ಯಕ್ತಿಯೊಬ್ಬ, ಡೋಸ್ ತೆಗೆದುಕೊಂಡ ನಂತರ  ಗಂಭೀರವಾದ ನರವೈಜ್ಞಾನಿಕ ಅಡ್ಡಪರಿಣಾಮದಿಂದ ಬಳಲುತ್ತಿರುವುದಾಗಿ ಆರೋಪಿಸಿದ್ದು, 5 ಕೋಟಿ ರೂ. ಪರಿಹಾರವನ್ನು ಬಯಸಿದ್ದಾರೆ.

published on : 29th November 2020
1 2 >