ಮಂಡ್ಯ: ಮಗಳ ಎದುರೇ ದುಷ್ಕರ್ಮಿಯಿಂದ ತಾಯಿಯ ಬರ್ಬರ ಹತ್ಯೆ

ಮಗಳ ಮುಂದೆಯೇ ತಾಯಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಭೀಕರ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಎಲೆಕೆರೆ ಗ್ರಾಮದಲ್ಲಿ ನಡೆದಿದೆ. ನಿನ್ನೆ ಮಂಗಳವಾರ ರಾತ್ರಿ ಮನೆ ಸಮೀಪದ ದೇವಸ್ಥಾನಕ್ಕೆ ಹೋಗಿ ತಾಯಿ-ಮಗಳು ಮರಳುತ್ತಿದ್ದಾಗ ಹಿಂಬಾಲಿಸಿಕೊಂಡು ಬಂದ ದುರ್ಷರ್ಮಿ ತಾಯಿಯನ್ನು ಮಗಳ ಎದುರೇ ಹತ್ಯೆ ಮಾಡಿದ್ದಾನೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಂಡ್ಯ: ಮಗಳ ಮುಂದೆಯೇ ತಾಯಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಭೀಕರ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಎಲೆಕೆರೆ ಗ್ರಾಮದಲ್ಲಿ ನಡೆದಿದೆ. ನಿನ್ನೆ ಮಂಗಳವಾರ ರಾತ್ರಿ ಮನೆ ಸಮೀಪದ ದೇವಸ್ಥಾನಕ್ಕೆ ಹೋಗಿ ತಾಯಿ-ಮಗಳು ಮರಳುತ್ತಿದ್ದಾಗ ಹಿಂಬಾಲಿಸಿಕೊಂಡು ಬಂದ ದುರ್ಷರ್ಮಿ ತಾಯಿಯನ್ನು ಮಗಳ ಎದುರೇ ಹತ್ಯೆ ಮಾಡಿದ್ದಾನೆ. 

ಎಲೆಕೆರೆ ಗ್ರಾಮದ ಪಾರ್ವತಮ್ಮ(50ವ) ಕೊಲೆಯಾದ ದುರ್ದೈವಿ. ಪಾರ್ವತಮ್ಮ ಅವರು ಮಗಳು ಅರ್ಪಿತಾ ಜತೆ ಮನೆದೇವರ ಪೂಜೆ ಮುಗಿಸಿಕೊಂಡು ಮನೆಗೆ ವಾಪಾಸ್ ಬರುವಾಗ ವ್ಯಕ್ತಿಯೊಬ್ಬ ಅವರನ್ನು ಹಿಂಬಾಲಿಸಿಕೊಂಡು ಬಂದು ಕೊಲೆ ಮಾಡಿದ್ದಾನೆ. ದುಷ್ಕರ್ಮಿ ಸುಮಾರು ಅರ್ಧ ಕಿಲೋಮೀಟರ್ ದೂರದಿಂದಲೇ ಫಾಲೋ ಮಾಡಿಕೊಂಡು ಬಂದು ಕೊಲೆ ಮಾಡಿದ್ದಾಗಿ ಮಗಳು ಅರ್ಪಿತಾ ಹೇಳಿಕೆ ನೀಡಿದ್ದಾರೆ. ಆದರೆ, ಆತ ತಮ್ಮನ್ನು ಕೊಲೆ ಮಾಡಲು ಬರುತ್ತಿದ್ದಾನೆ ಎಂಬುದು ಅವರಿಬ್ಬರಿಗೂ ಗೊತ್ತಿರಲಿಲ್ಲ.

ಈ ಕೊಲೆ ಯಾಕೆ ಮಾಡಲಾಗಿದೆ. ಈ ಮಹಿಳೆಗೂ ಕೊಲೆಗಾರರನಿಗೂ ಏನು ದ್ವೇಷ, ಎಂಬ ಬಗ್ಗೆ ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ. 

ಮಗಳಿಂದಲೇ ತಾಯಿ ಹತ್ಯೆ: ಜಗಳ ತಾರಕಕ್ಕೇರಿ ಮಗಳು ತಾಯಿಯನ್ನು ತಳ್ಳಿದ ಪರಿಣಾಮ ತಾಯಿ ಕೆಳಗೆ ಬಿದ್ದು ಮಂಚಕ್ಕೆ ತಲೆ ಬಡಿದು ಸ್ಥಳದಲ್ಲಿಯೇ ಮೃತಪಟ್ಟು ಪ್ರಕರಣ ಯಾರಿಗೂ ಗೊತ್ತಾಗದಂತೆ ಸ್ಮಶಾನದಲ್ಲಿ ಹೂತಿಟ್ಟ ಪ್ರಕರಣ ತಡವಾಗಿ ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ. 

ತಾಯಿ ನಾಪತ್ತೆಯಾಗಿದ್ದಾರೆಂದು ಮಗಳು ನಾಟಕವಾಡಿ ದೂರು ನೀಡಿದಾಗ ಪೊಲೀಸರು ತನಿಖೆ ನಡೆಸಿ 13 ತಿಂಗಳ ನಂತರ ಪ್ರಕರಣ ಬೆಳಕಿಗೆ ಬಂದ ಘಟನೆ ಮಂಡ್ಯ ಜಿಲ್ಲೆಯ ಹೆಬ್ಬಾಕವಾಡಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿ ಶಾರದಮ್ಮ ಮಗಳಿಂದ ಹತ್ಯೆಯಾದ ದುರ್ದೈವಿಯಾಗಿದ್ದಾರೆ. ಮಗಳು ಅನುಷಾ ಮತ್ತು ಆಕೆಯ ಪತಿ ದೇವರಾಜ್ ಜೈಲು ಪಾಲಾಗಿದ್ದಾರೆ. 

ಏನಿದು ಘಟನೆ?: ಮಂಡ್ಯ ಜಿಲ್ಲೆಯ ಹೆಬ್ಬಾಕವಾಡಿ ಗ್ರಾಮದ ಶಾರದಮ್ಮ ಗಂಡನ ನಿಧನ ನಂತರ ಒಂಟಿಯಾಗಿ ವಾಸವಿದ್ದರು. ಮಗಳನ್ನು ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರದ ಹಾರೋಹಳ್ಳಿಯ ದೇವರಾಜ್ ಎಂಬಾತನಿಗೆ ಮದುವೆ ಮಾಡಿ ಕೊಟ್ಟಿದ್ದರು. ಕಣ್ಣಿನ ನೋವಿನ ಸಮಸ್ಯೆಯಿಂದ ಶಾರದಮ್ಮ ತಮಗೆ ಚಿಕಿತ್ಸೆ ಕೊಡಿಸುವಂತೆ ಕೇಳಿಕೊಂಡಿದ್ದರು. ಆದರೆ ಹಣವಿಲ್ಲವೆಂದು ಮಗಳು ಸುಮ್ಮನಾಗಿದ್ದಳು.

2022ರ ನವೆಂಬರ್ ನಲ್ಲಿ ತಾಯಿಗೆ ಚಿಕಿತ್ಸೆ ಕೊಡಿಸಿ ಸ್ವಗ್ರಾಮ ಹೆಬ್ಬಾಕವಾಡಿ ಗ್ರಾಮಕ್ಕೆ ಬಿಟ್ಟು ಹೋಗಿದ್ದರು. ಈ ವೇಳೆ ಯಾವುದೋ ವಿಷಯಕ್ಕೆ ಜಗಳವಾಗಿ ಅದು ವಿಕೋಪಕ್ಕೆ ತಿರುಗಿ ಪುತ್ರಿ ಶಾರದಮ್ಮನನ್ನು ತಳ್ಳಿದ್ದರಿಂದ ತಲೆ ಮಂಚಕ್ಕೆ ಬಡಿದು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟರು. ಭೀತಿಯಿಂದ ಮಗಳು ಗಂಡ ಅದೇ ರಾತ್ರಿ ಗ್ರಾಮದ ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ ಯಾರಿಗೂ ಗೊತ್ತಾಗದಂತೆ ಹೂತು ಬಂದಿದ್ದರು.

ಇದಾಗಿ ಸ್ವಲ್ಪ ದಿನ ನಂತರ ಶಾರದಮ್ಮ ಸೋದರಿ ದೇವಮ್ಮ ವಿಚಾರಿಸಿ ಕಾಣೆಯಾಗಿದ್ದರೆ ದೂರು ನೀಡಿ ಎಂದು ಒತ್ತಡ ಹಾಕಿದರು. ಬೇರೆ ದಾರಿಯಿಲ್ಲದೆ ಮಗಳು ಅನುಷಾ ಕಳೆದ ಜೂನ್ ತಿಂಗಳಲ್ಲಿ ಪೊಲೀಸರಿಗೆ ದೂರು ನೀಡಿದ್ದಾಳೆ. ಪೊಲೀಸರು ತನಿಖೆ ಆರಂಭಿಸಿದಾಗ ಅನುಷಾ ವರ್ತನೆ ಬಗ್ಗೆ ಪೊಲೀಸರಿಗೆ ಅನುಮಾನ ಬಂದು ಕೊಲೆ ಮಾಡಿರುವುದು ಬೆಳಕಿಗೆ ಬಂತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com