14 ವರ್ಷದ ಮಗಳ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿದ ಮಾದಕವ್ಯಸನಿ ತಂದೆಯ ಬಂಧನ

ಪೂರ್ವ ದೆಹಲಿಯಲ್ಲಿ ತನ್ನ 14 ವರ್ಷದ ಮಗಳ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ ಆರೋಪದ ಮೇಲೆ 40 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಪೂರ್ವ ದೆಹಲಿಯಲ್ಲಿ ತನ್ನ 14 ವರ್ಷದ ಮಗಳ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ ಆರೋಪದ ಮೇಲೆ 40 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ಆರೋಪಿಯನ್ನು ಬಿಹಾರ ಮೂಲದ ಮಕ್ಸೂದ್ ಎಂದು ಗುರುತಿಸಲಾಗಿದೆ.

ಮಾದಕ ವ್ಯಸನಿಯಾಗಿರುವ ಮಕ್ಸೂದ್ ತನ್ನ ಕುಟುಂಬದೊಂದಿಗೆ ಪೂರ್ವ ದೆಹಲಿಯಲ್ಲಿ ಬಾಡಿಗೆ ವಸತಿಗೃಹದಲ್ಲಿ ನೆಲೆಸಿದ್ದಾನೆ.
ಪೊಲೀಸರ ಪ್ರಕಾರ, ಶುಕ್ರವಾರ ರಾತ್ರಿ 10.01 ಗಂಟೆಗೆ ಮಯೂರ್ ವಿಹಾರ್ ಪೊಲೀಸ್ ಠಾಣೆಗೆ ಅಪ್ರಾಪ್ತ ಬಾಲಕಿಯ ಅತ್ಯಾಚಾರದ ಕುರಿತು ಪಿಸಿಆರ್ ಕರೆ ಬಂದಿದೆ.

ಕೌನ್ಸೆಲಿಂಗ್ ಸಮಯದಲ್ಲಿ, ತನ್ನ ತಾಯಿಯ ಅನುಪಸ್ಥಿತಿಯಲ್ಲಿ ತನ್ನ ತಂದೆ ಪದೇ ಪದೆ ಅತ್ಯಾಚಾರವೆಸಗಿದ್ದಾನೆ ಎಂದು ಬಾಲಕಿ ಆರೋಪಿಸಿದ್ದಾಳೆ.

'ಶುಕ್ರವಾರ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಆರೋಪಿಯು ತಾಯಿ ಇಲ್ಲದಿದ್ದಾಗ ಮತ್ತೆ ತನ್ನ ಮಗಳ ಮೇಲೆ ಅತ್ಯಾಚಾರ ಎಸಗಿದ್ದಾನೆ. ತಾಯಿ ಮನೆಗೆ ಬಂದಾಗ ಬಾಲಕಿ ವಿಷಯವನ್ನು ತಿಳಿಸಿದ್ದಾಳೆ' ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಂತರ, ಆಕೆಯ ತಾಯಿಯ ಸಮ್ಮುಖದಲ್ಲಿ ಬಾಲಕಿಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದು, ಐಪಿಸಿ ಸೆಕ್ಷನ್ 376(2)(ಎನ್) ಮತ್ತು 506 ಮತ್ತು ಪೊಕ್ಸೊ ಕಾಯ್ದೆಯ ಸೆಕ್ಷನ್ 6ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪೂರ್ವ ದೆಹಲಿಯ ಎಲ್‌ಬಿಎಸ್ ಆಸ್ಪತ್ರೆಯಲ್ಲಿ ಸಂತ್ರಸ್ತೆಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಮಕ್ಸೂದ್ ನನ್ನು ಬಂಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com