ಕುಟುಂಬದಿಂದ ದೂರವಾಗಲು ನೀನೆ ಕಾರಣ: ಮಗಳ ಕತ್ತು ಸೀಳಿ, ಬೆಂಕಿ ಹಚ್ಚಿ ಕೊಲೆ ಮಾಡಿದ ತಂದೆ!

ತಂದೆಯೇ ತನ್ನ ಮಗಳ ಕತ್ತು ಸೀಳಿ, ಬೆಂಕಿ ಹಚ್ಚಿ ಕೊಂದಿರುವ ಘಟನೆ ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಕುಟುಂಬದಿಂದ ದೂರವಾಗಲು ನೀನೆ ಕಾರಣ: ಮಗಳ ಕತ್ತು ಸೀಳಿ, ಬೆಂಕಿ ಹಚ್ಚಿ ಕೊಲೆ ಮಾಡಿದ ತಂದೆ!

ಜೈಪುರ: ತಂದೆಯೇ ತನ್ನ ಮಗಳ ಕತ್ತು ಸೀಳಿ, ಬೆಂಕಿ ಹಚ್ಚಿ ಕೊಂದಿರುವ ಘಟನೆ ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿ ತಂದೆಯನ್ನು ಶಿವಲಾಲ್ ಮೇಘವಾಲ್ ಎಂದು ಗುರುತಿಸಲಾಗಿದೆ. ಕಳೆದ 12 ವರ್ಷಗಳಿಂದ ಮೇಘವಾಲ್ ಕುಟುಂಬದಿಂದ ಬೇರೆಯಾಗಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಕುಟುಂಬದಿಂದ ದೂರವಾಗಲು ಮಗಳೇ ಕಾರಣವೆಂದು ತಂದೆ ಭಾವಿಸಿದ್ದನು ಎಂದು ಕುಟುಂಬಸ್ಥರು ಪೊಲಿಸರಿಗೆ ತಿಳಿಸಿದ್ದಾರೆ.

ಮಗಳು ನಿರ್ಮ(32) ಮದುವೆ ಕಾರ್ಯಕ್ರಮವೊಂದಕ್ಕೆ ಗ್ರಾಮಕ್ಕೆ ಬಂದ ವೇಳೆ ಆಕೆಯ ಜೊತೆ ಮಾತನಾಡಬೇಕೆಂದು ತಿಳಿಸಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಬರುವಂತೆ ಆಕೆಯ ಕಿರಿಯ ಸಹೋದರಿಗೆ ತಿಳಿಸಿದ್ದಾನೆ. ಮತ್ತೆ ಆಕೆಯ ಜೊತೆ ಏಕಾಂತವಾಗಿ ಮಾತನಾಡಬೇಕು ಎಂದು ಹೇಳಿ ಕಿರಿಯ ಮಗಳನ್ನು ಅಲ್ಲೇ ನಿಲ್ಲುವಂತೆ ಹೇಳಿ ಕರೆದುಕೊಂಡು ಹೋಗಿದ್ದಾನೆ.

ಈ ವೇಳೆ ಮಗಳ ಕತ್ತು ಸೀಳಿದ್ದಾನೆ. ಬಳಿಕ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಆತ ವಾಪಸ್ ಬರುವಾಗ ಆತನ ಕೈಯ್ಯಲ್ಲಿದ್ದ ರಕ್ತದ ಕಲೆ ನೋಡಿ ಕಿರಿಯ ಮಗಳು ಓಡಿ ಹೋಗಿ ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಆರೋಪಿಯ ಬಂಧನಕ್ಕೆ ಪೊಲೀಸರು ಹುಡುಕಾಟದಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com