ಉತ್ತರ ಪ್ರದೇಶ: ಮುಸ್ಲಿಂ ಶಾಸಕಿ ಭೇಟಿ ಬಳಿಕ ದೇವಾಲಯದಲ್ಲಿ ಗಂಗಾಜಲ ಚಿಮುಕಿಸಿ ಶುದ್ಧೀಕರಣ!

ಉತ್ತರ ಪ್ರದೇಶದ ಸಿದ್ಧಾರ್ಥನಗರ ಜಿಲ್ಲೆಯ ದೇವಸ್ಥಾನವೊಂದಕ್ಕೆ ಮುಸ್ಲಿಂ ಶಾಸಕರೊಬ್ಬರು ಭೇಟಿ ನೀಡಿದ ಬಳಿಕ, ಹಿಂದೂ ಸಂಘಟನೆಗಳ ಸದಸ್ಯರು ಮತ್ತು ಸ್ಥಳೀಯ ನಗರ ಅಧಿಕಾರಿಗಳು ಗಂಗಾಜಲವನ್ನು ಚಿಮುಕಿಸಿ ದೇವಾಲಯವನ್ನು ಶುದ್ಧೀಕರಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ಶಾಸಕಿ ಸೈಯದಾ ಖಾತೂನ್
ಶಾಸಕಿ ಸೈಯದಾ ಖಾತೂನ್

ಲಖನೌ: ಉತ್ತರ ಪ್ರದೇಶದ ಸಿದ್ಧಾರ್ಥನಗರ ಜಿಲ್ಲೆಯ ದೇವಸ್ಥಾನವೊಂದಕ್ಕೆ ಮುಸ್ಲಿಂ ಶಾಸಕರೊಬ್ಬರು ಭೇಟಿ ನೀಡಿದ ಬಳಿಕ, ಹಿಂದೂ ಸಂಘಟನೆಗಳ ಸದಸ್ಯರು ಮತ್ತು ಸ್ಥಳೀಯ ನಗರ ಅಧಿಕಾರಿಗಳು ಗಂಗಾಜಲವನ್ನು ಚಿಮುಕಿಸಿ ದೇವಾಲಯವನ್ನು ಶುದ್ಧೀಕರಿಸಿದ ಪ್ರಕರಣ ಬೆಳಕಿಗೆ ಬಂದಿದೆ.

ಜಿಲ್ಲೆಯ ದುಮರಿಯಾಗಂಜ್‌ನ ಸಮಾಜವಾದಿ ಪಕ್ಷದ (ಎಸ್‌ಪಿ) ಶಾಸಕಿ ಸೈಯದಾ ಖಾತೂನ್ ಅವರು ಕಳೆದ ಭಾನುವಾರ ನಡೆದ (ರಾಮ ಕಥಾ) ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಸಿದ್ಧಾರ್ಥನಗರ ಜಿಲ್ಲೆಯ ಬಲ್ವಾ ಗ್ರಾಮದಲ್ಲಿರುವ ಸಮಯ ಮಾತಾ ದೇವಸ್ಥಾನಕ್ಕೆ ಭೇಟಿ ನೀಡಿದ್ದರು ಎಂದು ಹೇಳಿದ್ದಾರೆ.

ರಾಮ್ ಕಥಾ ಕಾರ್ಯಕ್ರಮದ ನಂತರ, ಸ್ಥಳೀಯ ಪಂಚಾಯತ್ ಅಧ್ಯಕ್ಷರು ಮತ್ತು ಇತರ ಕೆಲವು ಹಿಂದೂ ಸಂಘಟನೆಗಳ ಸದಸ್ಯರು ಸೋಮವಾರ ದೇವಾಲಯಕ್ಕೆ ಭೇಟಿ ನೀಡಿ, ಗಂಗಾಜಲವನ್ನು ಸಿಂಪಡಿಸಿ, ಹನುಮಾನ್ ಚಾಲೀಸಾವನ್ನು ಪಠಿಸಿದರು. ಅಲ್ಲದೆ ಖಾತೂನ್ ವಿರುದ್ಧ ಘೋಷಣೆಗಳನ್ನು ಕೂಗಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಬಧಾನಿ ಚಾಫಾ ನಗರ ಪಂಚಾಯತ್ ಅಧ್ಯಕ್ಷ ಧರ್ಮರಾಜ್ ವರ್ಮಾ ಮಾತನಾಡಿ, 'ಸಮಯ ಮಾತಾ ದೇವಾಲಯವು ಭಕ್ತರ ನಂಬಿಕೆಯ ಕೇಂದ್ರವಾಗಿದೆ. ಸೈಯದಾ ಖಾತೂನ್ ಮಾಂಸಾಹಾರಿಯಾಗಿದ್ದು, ಅವರ ಭೇಟಿಯು ಸ್ಥಳದ ಪಾವಿತ್ರ್ಯದ ಮೇಲೆ ಪರಿಣಾಮ ಬೀರಿದೆ ಆರೋಪಿಸಲಾಗಿದೆ.

ಸಂತೋಷ್ ಪಾಸ್ವಾನ್, ಮಿಥ್ಲೇಶ್ ಪಾಂಡೆ, ವಿಜಯ್ ಮಾದೇಶಿಯಾ ಮತ್ತು ಪ್ರಮೋದ್ ಗೌತಮ್ ಸೇರಿದಂತೆ ವಿವಿಧ ಹಿಂದೂ ಸಂಘಟನೆಗಳ ಸದಸ್ಯರು ಅವರೊಂದಿಗೆ ಇದ್ದರು. ದೇವಸ್ಥಾನವನ್ನು ಶುದ್ಧೀಕರಿಸಲು ಗಂಗಾಜಲವನ್ನು ಚಿಮುಕಿಸಿದ್ದೇನೆ ಎಂದು ಧರ್ಮರಾಜ್ ವರ್ಮಾ ಹೇಳಿದ್ದಾರೆ.

ಈ ವಿಷಯವನ್ನು ಗಮನಿಸಿದ ದುಮರಿಯಾಗಂಜ್ ವೃತ್ತದ ಅಧಿಕಾರಿ ಸುಜಿತ್ ಕುಮಾರ್ ರೈ, ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಪೊಲೀಸ್ ತಂಡವು ಪ್ರದೇಶದಲ್ಲಿ ಗಸ್ತು ತಿರುಗುತ್ತಿದೆ. ಘಟನೆಯ ಬಗ್ಗೆ ನಮಗೆ ಯಾವುದೇ ದೂರು ಬಂದಿಲ್ಲ. ಈ ಬಗ್ಗೆ ದೂರು ನೀಡಿದರೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದರು.

ಸ್ಥಳೀಯ ಗ್ರಾಮಸ್ಥರು ರಾಮ್ ಕಥಾಗೆ ಸಂಘಟನಾ ಸಮಿತಿಯ ಕಾರ್ಯದರ್ಶಿ ಶ್ರೀಕಾಂತ್ ಶುಕ್ಲಾ ಮತ್ತು ದೇವಸ್ಥಾನದ ಪ್ರಧಾನ ಅರ್ಚಕ ಪೂಜಾರಿ ಪ್ರಸಾದ್ ನೇತೃತ್ವದಲ್ಲಿ ಸಂಘಟನಾ ಸಮಿತಿಯನ್ನು ರಚಿಸಿದ್ದಾರೆ. ಅವರು ಎಸ್ಪಿ ನಾಯಕಿಯನ್ನು ಆಹ್ವಾನಿಸಿದ್ದರು ಎಂದು ರೈ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com