• Tag results for ಉತ್ತರಪ್ರದೇಶ

ತಬ್ಲೀಘಿ ಜಮಾತ್ ಕೊರೋನಾ ವೈರಸ್ ಹರಡುತ್ತಿದೆಯೆಂದು ಆರೋಪಿಸಿದ್ದ ಯುವಕನಿಗೆ ಗುಂಡಿಟ್ಟು ಹತ್ಯೆ!

ಉತ್ತರಪ್ರದೇಶದಲ್ಲಿ ತಬ್ಲೀಘಿ ಜಮಾತ್ ನಲ್ಲಿ ಭಾಗವಹಿಸಿದ್ದವರನ್ನು ಪತ್ತೆ ಹಚ್ಚಲು ಯೋಗಿ ಆದಿತ್ಯನಾಥ್ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ತಬ್ಲೀಘಿ ಜಮಾತ್ ಕೊರೋನಾ ವೈರಸ್ ಅನ್ನು ಹರಡುತ್ತಿದೆ ಎಂದು ಆರೋಪಿಸಿದ್ದ ಯುವಕನನ್ನು ಆಗಂತುಕರು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.

published on : 5th April 2020

ನರೇಗಾ ಯೋಜನೆಯಡಿ 27.5 ಲಕ್ಷ ಕಾರ್ಮಿಕರ ಬ್ಯಾಂಕ್ ಖಾತೆಗೆ 611 ಕೋಟಿ ವರ್ಗಾಯಿಸಿದ ಸಿಎಂ ಯೋಗಿ ಆದಿತ್ಯನಾಥ್!

21 ದಿನಗಳ ಲಾಕ್ ಡೌನ್ ಹಿನ್ನೆಲೆಯಲ್ಲಿ ದಿನಗೂಲಿ ಕೆಲಸಗಾರರು ಕಂಗಲಾಗಿದ್ದರು. ಇದಕ್ಕೆ ಯೋಗಿ ಆದಿತ್ಯನಾಥ್ ಸರ್ಕಾರ ನರೇಗಾ ಯೋಜನೆಯಡಿ 27.5 ಲಕ್ಷ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ನೇರವಾಗಿ 611 ಕೋಟಿ ರುಪಾಯಿಯನ್ನು ವರ್ಗಾಹಿಸಿದೆ. 

published on : 30th March 2020

ಉತ್ತರಪ್ರದೇಶ: ಲಾಕ್'ಡೌನ್ ತಿರಸ್ಕರಿಸಿದ ಸ್ವಯಂ ಘೋಷಿತ ದೇವಮಹಿಳೆ, ಪೊಲೀಸರಿಗೇ ಬೆದರಿಕೆ

ಕೊರೋನಾ ವೈರಸ್ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಘೋಷಣೆ ಮಾಡಲಾಗಿರುವ ಲಾಕ್ ಡೌನ್ ತಿರಸ್ಕರಿಸಿರುವ ಉತ್ತರಪ್ರದೇಶದ ಸ್ವಯಂ ಘೋಷಿತ ದೇವ ಮಹಿಳೆಯೊಬ್ಬರು, ಪೊಲೀಸರಿಗೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ.

published on : 26th March 2020

ಕೊರೋನಾ ವೈರಸ್ ಹರಡಲು ಸಂಚು: ಚೀನಾ ಅಧ್ಯಕ್ಷ ಕ್ಸಿರನ್ನೇ ಕೋರ್ಟ್‌ಗೆಳೆದ ಉತ್ತರಪ್ರದೇಶ ವಕೀಲ!

ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಭಾರತದ ಚೀನಾ ರಾಯಭಾರಿ ಸನ್ ವೀಡಾಂಗ್ ವಿರುದ್ಧ ಮುಜಾಫರ್ಪುರ ನ್ಯಾಯಾಲಯದಲ್ಲಿ "ಕರೋನಾ ವೈರಸ್ ಹರಡುವ ಪಿತೂರಿ ನಡೆಸಲಾಗಿದೆ" ಎಂಬ ಆರೋಪದ ಮೇಲೆ ದೂರು ದಾಖಲಾಗಿದೆ.

published on : 16th March 2020

ದೆಹಲಿ ಹಿಂಸಾಚಾರ: ನಿಶ್ಶಸ್ತ್ರಧಾರಿ ಪೊಲೀಸ್‌ಗೆ 'ಗನ್ ಪಾಯಿಂಟ್'ನಲ್ಲಿ ಬೆದರಿಸಿದ್ದ ಆರೋಪಿ ಶಾರುಖ್ ಬಂಧನ!

ದೆಹಲಿ ಹಿಂಸಾಚಾರದ ವೇಳೆ ನಿಶಸ್ತ್ರದಾರಿಯಾಗಿದ್ದ ಪೊಲೀಸ್‌ಗೆ 'ಗನ್ ಪಾಯಿಂಟ್'ನಲ್ಲಿ ಬೆದರಿಸಿ ಆತಂಕ ಸೃಷ್ಟಿಸಿ ತಲೆಮರೆಸಿಕೊಂಡಿದ್ದ ಆರೋಪಿ ಶಾರುಖ್ ನನ್ನು ಪೊಲೀಸರು ಉತ್ತರಪ್ರದೇಶದ ಬರೇಲಿಯಲ್ಲಿ ಬಂಧಿಸಿದ್ದಾರೆ. 

published on : 3rd March 2020

ಕುಟುಂಬ ಕಲಹ: ಒಂದೇ ಕುಟುಂಬದ ನಾಲ್ವರು ನೇಣಿಗೆ ಶರಣು

ಉತ್ತರ ಪ್ರದೇಶದ ಸಾಹಿಬಾಬಾದ್ ಜಿಲ್ಲೆಯ ಪೊಲೀಸ್ ಠಾಣೆ ವ್ಯಾಪ್ತಿಯ ಅರ್ಥಲಾ ಗ್ರಾಮದಲ್ಲಿ ಒಂದೇ ಕುಟುಂಬದ ನಾಲ್ವರು ಸದಸ್ಯರು ಶುಕ್ರವಾರ ಬೆಳಿಗ್ಗೆ ಶವವಾಗಿ ಪತ್ತೆಯಾಗಿದ್ದಾರೆ.

published on : 28th February 2020

ಓರ್ವ ವಿದ್ಯಾರ್ಥಿನಿ ಲವ್‍ಗಾಗಿ ಇಬ್ಬರು ಶಿಕ್ಷಕರ ಜಗಳ, ಸಾವಿನಲ್ಲಿ ಕೊನೆಯಾಯ್ತು ಶಿಕ್ಷಕರಿಬ್ಬರ ಪ್ರೇಮ ಪುರಾಣ!

ಪ್ರೀತಿ ಮಾಯೆ ಹುಷಾರು ಎಂಬ ಹಾಡಿದೆ. ಪ್ರೀತಿಯ ಮಾಯೆಗೆ ಬಿದ್ದವರು ಸುಲಭವಾಗಿ ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅಂತಹದರಲ್ಲಿ ಒಂದೇ ವಿದ್ಯಾರ್ಥಿನಿಗೋಸ್ಕರ್ ಇಬ್ಬರು ಶಿಕ್ಷಕರು ಜಗಳ ಮಾಡಿಕೊಂಡು ಕೊನೆಗೆ ಇಬ್ಬರು ಶಿಕ್ಷಕರ ಸಾವಿನಲ್ಲಿ ಪ್ರಕರಣ ಅಂತ್ಯ ಕಂಡಿದೆ.

published on : 19th February 2020

ಪತ್ರಕರ್ತರ ಸೋಗಲ್ಲಿ ಸಿಎಂ ಯೋಗಿ ಮೇಲೆ ಉಗ್ರರಿಂದ ದಾಳಿ ಸಾಧ್ಯತೆ: ಗುಪ್ತಚರ ಇಲಾಖೆ ಎಚ್ಚರಿಕೆ

ಹಿಂದುತ್ವದ ಪ್ರಬಲ ಪ್ರತಿಪಾದಕರಾಗಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಮೇಲೆ ಪತ್ರಕರ್ತರ ಸೋಗಿನಲ್ಲಿ ಉಗ್ರರು ದಾಳಿ ನಡೆಸುವ ಸಾಧ್ಯತೆಗಳಿವೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. 

published on : 14th February 2020

ಉತ್ತರಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ: ಬಸ್'ಗೆ ಟ್ರಕ್ ಡಿಕ್ಕಿ, 13 ಮಂದಿ ದುರ್ಮರಣ

ಆಗ್ರಾ-ಲಖನೌ ಎಕ್ಸ್'ಪ್ರೆಸ್ ವೇನಲ್ಲಿ ಖಾಸಗಿ ಬಸ್ ಹಾಗೂ ಟ್ರಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಅಪಘಾತ ಸಂಭವಿಸಿ 13 ಮಂದಿ ದುರ್ಮರಣವನ್ನಪ್ಪಿ, 31ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. 

published on : 13th February 2020

ನೇಪಾಳದಿಂದ ಉತ್ತರಪ್ರದೇಶ ಪ್ರವೇಶಿಸಿದ 2 ಇಸಿಸ್ ಉಗ್ರರು: ಹೈ ಅಲರ್ಟ್ ಘೋಷಣೆ

ನೇಪಾಳ ಗಡಿ ಮೂಲಕ ಭಾರತ ಪ್ರವೇಶಿಸಿರುವ ಇಬ್ಬರು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಇಬ್ಬರು ಭಯೋತ್ಪಾದಕರು ಇದೀಗ ಉತ್ತರಪ್ರದೇಶದಲ್ಲಿ ಅಡಗಿ ಕುಳಿತಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ. 

published on : 5th January 2020

ಪೌರತ್ವ ಪ್ರತಿಭಟನೆ: ಉತ್ತರ ಪ್ರದೇಶದಲ್ಲಿ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನ, ಸಾವಿನ ಸಂಖ್ಯೆ 15ಕ್ಕೇರಿಕೆ

ಪೌರತ್ವ ಕಾಯ್ದೆ ವಿರೋಧಿಸಿ ಉತ್ತರಪ್ರದೇಶದಲ್ಲಿ ನಡೆಯುತ್ತಿದ್ದ ಪ್ರತಿಭಟನೆ ತೀವ್ರಗೊಂಡಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಪ್ರತಿಭಟನೆ ವೇಳೆ 8 ವರ್ಷದ ಬಾಲಕ ಸೇರಿದಂತೆ ಒಟ್ಟು 15 ಮಂದಿ ಬಲಿಯಾಗಿರುವುದಾಗಿ ವರದಿಗಳು ತಿಳಿಸಿವೆ. 

published on : 21st December 2019

ಉತ್ತರಪ್ರದೇಶದಲ್ಲಿ ಹೊತ್ತಿ ಉರಿದ ಪೌರತ್ವದ ರೋಷಾಗ್ನಿ: ಹಿಂಸಾಚಾರಕ್ಕೆ 9 ಮಂದಿ ಬಲಿ

ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧ ನಡೆಯುತ್ತಿರುವ ಹಿಂಸಾತ್ಮಕ ಹೋರಾಟಗಳು ಮುಗಿಯುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಶುಕ್ರವಾರ ಕೂಡ ಅನೇಕ ರಾಜ್ಯಗಳಲ್ಲಿ ಹಿಂಸಾಚಾರ ಮುಂದುವರೆದಿದ್ದು, ಉತ್ತರಪ್ರದೇಶದಲ್ಲಿಯೇ ಅತೀ ಹೆಚ್ಚು ಹಿಂಸಾಚಾರ ಸಂಭವಿಸಿದೆ. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ನಡೆಸಿರುವ ಗೋಲಿಬಾರ್'ಗೆ 9 ಮಂದಿ ಸಾವನ್ನಪ್ಪಿದ್ದಾರೆ.

published on : 21st December 2019

ಪೌರತ್ವ ಕಿಚ್ಚು: ಉತ್ತರಪ್ರದೇಶದಲ್ಲಿ ಗೋಲಿಬಾರ್‌ಗೆ 6 ಬಲಿ, ಇಂಟರ್‌ನೆಟ್ ಸ್ಥಗಿತ!

ಪೌರತ್ವದ ಕಿಚ್ಚು ಉತ್ತರಪ್ರದೇಶಕ್ಕೂ ವ್ಯಾಪಿಸಿದ್ದು ಪೊಲೀಸರ ಗುಂಡೇಟಿಗೆ ಆರು ಮಂದಿ ಬಲಿಯಾಗಿದ್ದಾರೆ.

published on : 20th December 2019

ಪ್ರತಿಭಟನೆ ವೇಳೆ ನಷ್ಟವುಂಟು ಮಾಡುವವರ ಆಸ್ತಿ ಜಪ್ತಿ: ಯೋಗಿ ಆದಿತ್ಯಾನಾಥ್ ಎಚ್ಚರಿಕೆ

ಪ್ರತಿಭಟನೆ ಹಾಗೂ ಹಿಂಸಾಚಾರದ ವೇಳೆ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ನಷ್ಟು ಉಂಟು ಮಾಡುವವರ ಆಸ್ತಿಗಳನ್ನು ಜಪ್ತಿ ಮಾಡಲಾಗುತ್ತದೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್ ಅವರು ಪ್ರತಿಭಟನಾಕಾರರಿಗೆ ಎಚ್ಚರಿಕೆ ನೀಡಿದ್ದಾರೆ. 

published on : 20th December 2019

ಮುಗ್ಗರಿಸಿ ಬಿದ್ದ ಪ್ರಧಾನಿ ಮೋದಿ: ಅಟಲ್ ಘಾಟ್ ಮೆಟ್ಟಿಲುಗಳ ದುರಸ್ತಿಗೆ ಮುಂದಾದ ಅಧಿಕಾರಿಗಳು

ಉತ್ತರಪ್ರದೇಶದ ಅಟಲ್ ಘಾಟ್'ನ ಮೆಟ್ಟಿಲು ಹತ್ತುವಾಗ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮುಗ್ಗರಿಸಿ ಬಿದ್ದ ಹಿನ್ನೆಲೆಯಲ್ಲಿ ಮೆಟ್ಚಿಲುಗಳ ದುರಸ್ತಿ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ.

published on : 18th December 2019
1 2 3 >