
ಬೆಂಗಳೂರು: ದಾರಿಹೋಕರನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಬೆದರಿಸಿ ಚಿನ್ನಾಭರಣ ದರೋಡೆ ಮಾಡುತ್ತಿದ್ದ ಆರೋಪಿಯನ್ನು ಎಚ್‌ಎಸ್‌ಆರ್ ಬಡವಾಣೆ ಪೊಲೀಸರು ಬಂಧಿಸಿದ್ದಾರೆ. ಬೇಗೂರು ನಿವಾಸಿ ಶ್ರೀವತ್ಸನ್ ಅಲಿಯಾಸ್ ಶ್ರೀ(21) ಬಂಧಿತ.
ಬೆಳ್ಳಂದೂರು, ಎಚ್‌ಎಸ್‌ಆರ್ ಬಡಾವಣೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೈಕ್‌ನಲ್ಲಿ ಬಂದು ಒಂಟಿಯಾಗಿ ಓಡಾಡುವವರನ್ನು ಅಡ್ಡಗಟ್ಟಿ ಮೊಬೈಲ್, ಬ್ಯಾಗ್ ಮತ್ತು ಬೆಲೆ ಬಾಳುವ ವಸ್ತುಗಳನ್ನು ದೋಚುತ್ತಿದ್ದ.
ಈ ಸಂಬಂಧ 6 ಪ್ರಕರಣಗಳಿವೆ. ಬಂಧಿತನಿಂದ ರು.2 ಲಕ್ಷ ಮೌಲ್ಯದ ಐದು ಮೊಬೈಲ್, 2 ಬೈಕ್ ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
Advertisement