ಕುಶಾಲನಗರ: ಸಮೀಪದ ಬೈಲುಕೊಪ್ಪೆ ಬಳಿ ಮಂಗಳವಾರ ಅರಣ್ಯಕ್ಕೆ ಬೆಂಕಿ ತಗಲಿ ಎರಡು ಕೋಟಿ ರುಪಾಯಿಗೂ ಅಧಿಕ ಮೌಲ್ಯದ ನೀಲಗಿರಿ ನಾಟಾ ಭಸ್ಮವಾಗಿದೆ.
ಮಧ್ಯಾಹ್ನ 1.30ಕ್ಕೆ ಬೆಂಕಿ ಹಿಡಿದಿದ್ದು, ನಂದಿಸಲು ಸಾಧ್ಯವಾಗುತ್ತಿಲ್ಲ. ಅಗ್ನಿ ಶಾಮಕ ದಳ ತಂಡಗಳು ಬೆಂಕಿ ನಂದಿಸಲು ಪ್ರಯತ್ನಿಸುತ್ತಿದೆ. ಅಗ್ನಿಶಾಮಕ ತಂಡ ಮಧ್ಯಾಹ್ನದಿಂದಲೇ ಬೆಂಕಿ ನಂದಿಸುವ ಪ್ರಯತ್ನ ನಡೆಸಿದೆ.
ಕೇವಲ ಒಂದು ಅಗ್ನಿಶಾಮಕ ತಂಡ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದೆ. ಸ್ಥಳೀಯರೂ ಬೆಂಕಿ ಆರಿಸುವ ಕಾರ್ಯದಲ್ಲಿ ಕೈಜೋಡಿಸಿದ್ದಾರೆ. ಅರಣ್ಯ ಪ್ರದೇಶದಲ್ಲಿ 20-30 ಎಕ್ರೆ ಜಾಗದಲ್ಲಿ ರು.2 ಕೋಟಿಗೂ ಅಧಿಕ ಮೌಲ್ಯದ ನೀಲಗಿರಿ ಮರಗಳನ್ನು ತುಂಡರಿಸಿ ಸಂಗ್ರಹಿಸಿಡಲಾಗಿತ್ತು. ಕಾಡಿನೊಳಗೆ ಇದ್ದುದರಿಂದ ಬೆಂಕಿಯಲ್ಲಿ ಉರಿಯುತ್ತಲೇ ಇದೆ. ಅರಣ್ಯಾಧಿಕಾರಿಗಳು ಸ್ಥಳದಲ್ಲಿ ಇಲ್ಲ. ಸಿಬ್ಬಂದಿ ಮಾತ್ರ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
Advertisement