• Tag results for fire

ದೊಡ್ಡಬಳ್ಳಾಪುರ: ಕಾರ್ಖಾನೆಯಲ್ಲಿ ಕೆಮಿಕಲ್ ಸ್ಫೋಟ; ಹೊತ್ತಿ ಉರಿದ ಕಾರ್ಖಾನೆ

ಕೆಮಿಕಲ್ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ ಇಡೀ ಕಾರ್ಖಾನೆ ಬೆಂಕಿಗಾಹುತಿಯಾದ ಘಟನೆ ಸೋಮವಾರ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.

published on : 26th September 2022

ಆಂಧ್ರ ಪ್ರದೇಶ: ಖಾಸಗಿ ಕ್ಲಿನಿಕ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ವೈದ್ಯರು ಸೇರಿದಂತೆ ಇಬ್ಬರು ಮಕ್ಕಳು ಸಾವು

ರೇಣಿಗುಂಟದ ವಸುಂಧರಾನಗರದಲ್ಲಿರುವ ವೈದ್ಯರ ಖಾಸಗಿ ಕ್ಲಿನಿಕ್‌ನಲ್ಲಿ ಭಾನುವಾರ ಬೆಳ್ಳಂಬೆಳಗ್ಗೆ ಬೆಂಕಿ ಅವಘಡ ಸಂಭವಿಸಿದ್ದು, ವೈದ್ಯರು ಹಾಗೂ ಅವರ ಇಬ್ಬರು ಅಪ್ರಾಪ್ತ ಮಕ್ಕಳು ಮೃತಪಟ್ಟಿದ್ದಾರೆ.

published on : 25th September 2022

ಮೂನ್‌ಲೈಟಿಂಗ್ ಮಾಡುತ್ತಿದ್ದ 300 ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ: ವಿಪ್ರೋ ಅಧ್ಯಕ್ಷ ರಿಷಾದ್ ಪ್ರೇಮ್‌ಜಿ

ಏಕಕಾಲದಲ್ಲಿ ತನ್ನ ಪ್ರತಿಸ್ಪರ್ಧಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ 300 ಉದ್ಯೋಗಿಗಳನ್ನು ನಾವು ಪತ್ತೆ ಮಾಡಿದ್ದು, ಈ ಉದ್ಯೋಗಿಗಳ ಸೇವೆಯನ್ನು ವಜಾಗೊಳಿಸಲಾಗಿದೆ ಎಂದು ವಿಪ್ರೋ ಅಧ್ಯಕ್ಷ ರಿಷಾದ್ ಪ್ರೇಮ್‌ಜಿ ಬುಧವಾರ ಹೇಳಿದ್ದಾರೆ.

published on : 22nd September 2022

ಭಾರಿ ಅಗ್ನಿ ಅವಘಡ: ಹುಟ್ಟುಹಬ್ಬಕ್ಕೆಂದು ಬೆಂಗಳೂರಿನಿಂದ ಆಂಧ್ರ ಪ್ರದೇಶಕ್ಕೆ ತೆರಳಿದ್ದ ಟೆಕ್ಕಿ ಸೇರಿ ಮೂವರು ಸಾವು

ಆಂಧ್ರಪ್ರದೇಶದ ಚಿತ್ತೂರಿನಲ್ಲಿರುವ ಪೇಪರ್ ಪ್ಲೇಟ್ ಕಾರ್ಖಾನೆಯ ತಯಾರಿಕಾ ಘಟಕದಲ್ಲಿ ಬುಧವಾರ ನಸುಕಿನಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಕಾರ್ಖಾನೆಯ ಉತ್ಪಾದನಾ ಘಟಕದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ.

published on : 21st September 2022

ಚೀನಾದಲ್ಲಿ ಹೊತ್ತಿ ಉರಿದ ಬೃಹತ್ ಕಟ್ಟಡ: ಭರದಿಂದ ಸಾಗಿದೆ ರಕ್ಷಣಾ ಕಾರ್ಯಾಚರಣೆ, ಭಯಾನಕ ವಿಡಿಯೋ!

ಮಧ್ಯ ಚೀನಾದ ನಗರವಾದ ಚಾಂಗ್‌ಶಾದಲ್ಲಿನ ಗಗನಚುಂಬಿ ಕಟ್ಟಡದಲ್ಲಿ ಬೃಹತ್ ಬೆಂಕಿ ಕಾಣಿಸಿಕೊಂಡಿದೆ ಎಂದು ರಾಜ್ಯ ಮಾಧ್ಯಮ ವರದಿ ಮಾಡಿದೆ. ಸಾವುನೋವುಗಳ ಸಂಖ್ಯೆ ಪ್ರಸ್ತುತ ತಿಳಿದಿಲ್ಲ ಎಂದು ಹೇಳಿದೆ.

published on : 16th September 2022

ಮಸ್ಕಟ್: ಟೇಕ್ ಆಫ್ ಆಗುವ ಮೊದಲೇ ಹೊತ್ತಿ ಉರಿದ ಏರ್ ಇಂಡಿಯಾ ವಿಮಾನ, ಪ್ರಯಾಣಿಕರು ಪಾರು

ಮಸ್ಕಟ್ ವಿಮಾನ ನಿಲ್ದಾಣದಲ್ಲಿ ಏರ್‌ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ(Flight) ಟೇಕ್ ಆಫ್ ಆಗುವ ಕೆಲವೇ ನಿಮಿಷಗಳ ಮುನ್ನ ಇಂಜಿನ್‍ವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ವಿಮಾನ ಹೊತ್ತಿ ಉರಿದಿದೆ. ವಿಮಾನದಲ್ಲಿದ್ದ 141 ಪ್ರಯಾಣಿಕರನ್ನು...

published on : 14th September 2022

ಸಿಕಂದರಾಬಾದ್ ಅಗ್ನಿ ದುರಂತ: ಹೊಟೆಲ್, ಇ-ಸ್ಕೂಟರ್ ಷೋರೂಂ ಮಾಲೀಕರ ವಿರುದ್ಧ ಎಫ್ಐಆರ್!

ತೆಲಂಗಾಣದ ಸಿಕಂದರಾಬಾದ್ ನಲ್ಲಿ 8 ಜನರ ಸಾವಿಗೆ ಕಾರಣವಾದ ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ ಪೊಲೀಸರು ಹೊಟೆಲ್ ಮತ್ತು ಇ-ಸ್ಕೂಟರ್ ಷೋರೂಂ ಮಾಲೀಕರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

published on : 13th September 2022

ಸಿಕಂದರಾಬಾದ್ ಹೊಟೆಲ್ ಅಗ್ನಿ ಅವಘಡ: ಪ್ರಧಾನಿ ಮೋದಿ ಸಂತಾಪ, ಸಂತ್ರಸ್ಥರಿಗೆ 2 ಲಕ್ಷ ರೂ. ಪರಿಹಾರ ಘೋಷಣೆ

ತೆಲಂಗಾಣದ ಸಿಕಂದರಾಬಾದ್ ನಲ್ಲಿ ಸಂಭವಿಸಿರುವ ಭೀಕರ ಹೊಟೆಲ್ ಅಗ್ನಿಅವಘಡಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಸಂತ್ರಸ್ಥರಿಗೆ ಆರ್ಥಿಕ ಪರಿಹಾರ ಘೋಷಣೆ ಮಾಡಿದ್ದಾರೆ.

published on : 13th September 2022

ತೆಲಂಗಾಣದಲ್ಲಿ ಭೀಕರ ಅಗ್ನಿ ದುರಂತ; 8 ಮಂದಿ ಸಾವು, ಹಲವರು ಗಂಭೀರ

ತೆಲಂಗಾಣದಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, ಐಷಾರಾಮಿ ಹೋಟೆಲ್ ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಕನಿಷ್ಠ  ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

published on : 13th September 2022

ನಾಲ್ಕು ಜನರನ್ನು ಬಲಿ ಪಡೆದ ಲಖನೌ ಅಗ್ನಿ ದುರಂತ: 15 ಅಧಿಕಾರಿಗಳನ್ನು ಅಮಾನತುಗೊಳಿಸಿದ ಯೋಗಿ ಆದಿತ್ಯನಾಥ್

ನಿರ್ಲಕ್ಷ್ಯ ಮತ್ತು ಅಕ್ರಮಗಳಿಗಾಗಿ ನಾಲ್ವರು ನಿವೃತ್ತ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.

published on : 11th September 2022

ವಾಯುಮಾಲಿನ್ಯ: ದೀಪಾವಳಿ ಹಿನ್ನಲೆಯಲ್ಲಿ ಪಟಾಕಿ ಮಾರಾಟಕ್ಕೆ ನಿಷೇಧ ಹೇರಿದ ದೆಹಲಿ ಸರ್ಕಾರ

ರಾಷ್ಟ್ರರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಮುಂದುವರೆದಿರುವ ಹಿನ್ನಲೆಯಲ್ಲಿ ಮತ್ತು ದೀಪಾವಳಿ ಹಬ್ಬ ಸನಿಹಿತವಾಗುತ್ತಿರುವ ಹಿನ್ನಲೆಯಲ್ಲಿ  ಪಟಾಕಿ ಮಾರಾಟಕ್ಕೆ ದೆಹಲಿ ಸರ್ಕಾರ ನಿಷೇಧ ಹೇರಿದೆ.

published on : 7th September 2022

ದೆಹಲಿ: ಚಾಂದಿನಿ ಚೌಕ್ ಮೆಟ್ರೋ ನಿಲ್ದಾಣದ ಬಳಿ ಅಗ್ನಿ ಅವಘಡ, ಕಟ್ಟಡದ ಒಂದು ಭಾಗ ಕುಸಿತ

ಮಧ್ಯ ದೆಹಲಿಯ ಅತ್ಯಂತ ಜನನಿಬಿಡ ಮತ್ತು ದಟ್ಟಣೆಯ ಮಾರುಕಟ್ಟೆ ಚಾಂದಿನಿ ಚೌಕ್‌ನ ಮೂರು ಅಂತಸ್ತಿನ ವಾಣಿಜ್ಯ ಕಟ್ಟಡದ ಮೇಲಿನ ಮಹಡಿಯಲ್ಲಿ ಸೋಮವಾರ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ನಂತರ ಕಟ್ಟಡದ ಒಂದು ಭಾಗ ಕುಸಿದಿದೆ.

published on : 6th September 2022

ಲಖನೌ ಹೋಟೆಲ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಇಬ್ಬರು ಸಾವು, ಮುಂದುವರಿದ ರಕ್ಷಣಾ ಕಾರ್ಯಾಚರಣೆ

ಲಖನೌ ನಗರದ ಹಜರತ್‌ಗಂಜ್ ಪ್ರದೇಶದ ಮದನ್ ಮೋಹನ್ ಮಾಳವಿಯಾ ಮಾರ್ಗ್‌ನಲ್ಲಿರುವ ಲೆವಾನಾ ಸೂಟ್ಸ್‌ನಲ್ಲಿರುವ ಹೋಟೆಲ್‌ನಲ್ಲಿ ಸೋಮವಾರ ಬೆಂಕಿ ಕಾಣಿಸಿಕೊಂಡು ಇಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

published on : 5th September 2022

ಪಶ್ಚಿಮ ಬಂಗಾಳ: ಮನಬಂದಂತೆ ಗುಂಡು ಹಾರಿಸಿ ಸಹೋದ್ಯೋಗಿಯನ್ನು ಕೊಂದ ಸಿಐಎಸ್ಎಫ್ ಕಾನ್ಸ್ ಟೇಬಲ್!

 ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಕಾನ್ಸ್ ಟೇಬಲ್ ಓರ್ವ  ಶನಿವಾರ ಸಂಜೆ ತನ್ನ ಎಕೆ-47 ರೈಫಲ್ ನಿಂದ ಮನ ಬಂದಂತೆ ಗುಂಡಿನ ದಾಳಿ ನಡೆಸಿ ಸಹೋದ್ಯೋಗಿಯೊಬ್ಬರನ್ನು ಹತ್ಯೆ ಮಾಡಿದ್ದಾರೆ. ಮತ್ತೊಬ್ಬರು ಗಾಯಗೊಂಡಿದ್ದಾರೆ.

published on : 6th August 2022

ಡಿಆರ್ ಡಿಒ ಲೇಸರ್ ನಿರ್ದೇಶಿತ ಎಟಿಜಿಎಂ ಪರೀಕ್ಷಾರ್ಥ ಪ್ರಯೋಗ ಯಶಸ್ವಿ

ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ ಲೇಸರ್-ನಿರ್ದೇಶಿತ ಆಂಟಿ-ಟ್ಯಾಂಕ್ ಗೈಡೆಡ್ ಕ್ಷಿಪಣಿಗಳನ್ನ (ATGM) ಕೆಕೆ ರೇಂಜ್‌ನಲ್ಲಿ DRDO ಮತ್ತು MBT ಅರ್ಜುನ್‌ನಿಂದ ಯಶಸ್ವಿಯಾಗಿ ಪರೀಕ್ಷಾರ್ಥ ಉಡಾವಣೆ ಮಾಡಿದೆ. 

published on : 4th August 2022
1 2 3 4 5 6 > 

ರಾಶಿ ಭವಿಷ್ಯ