ಅಧ್ಯಕ್ಷರ ಅಧಿಕಾರ ಅವಧಿ 5 ವರ್ಷ?

ಮೇಯರ್ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರ ಅಧಿಕಾರವಧಿಯನ್ನು 5 ವರ್ಷಕ್ಕೆ ಹೆಚ್ಚಿಸಲು ಕೇಂದ್ರ ಸರ್ಕಾರದ ಮಟ್ಟದಲ್ಲೂ ಚರ್ಚೆ...
ಎಂ.ವೆಂಕಯ್ಯನಾಯ್ಡು
ಎಂ.ವೆಂಕಯ್ಯನಾಯ್ಡು

ಬೆಂಗಳೂರು: ಮೇಯರ್ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರ ಅಧಿಕಾರವಧಿಯನ್ನು 5 ವರ್ಷಕ್ಕೆ ಹೆಚ್ಚಿಸಲು ಕೇಂದ್ರ ಸರ್ಕಾರದ ಮಟ್ಟದಲ್ಲೂ ಚರ್ಚೆ ನಡೆಯುತ್ತಿದೆ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ಎಂ.ವೆಂಕಯ್ಯನಾಯ್ಡು ತಿಳಿಸಿದರು.

ಸ್ವಚ್ಛತಾ ಮಿಷನ್ ಕಾರ್ಯಾಗಾರದಲ್ಲಿ ಶುಕ್ರವಾರ ಮಾತನಾಡಿ, ಉತ್ತಮ ಆಡಳಿತಕ್ಕೆ ಒಂದು ವರ್ಷ ಸಾಲುವುದಿಲ್ಲ. ಮಹಾನಗರಪಾಲಿಕೆಗಳಲ್ಲಿ ಮೇಯರ್ ಚುನಾಯಿತರಾದ ನಂತರದ 6 ತಿಂಗಳು ಕೇವಲ ಸನ್ಮಾನ ಸಮಾರಂಭಗಳಲ್ಲೇ ಕಳೆದುಹೋಗುತ್ತದೆ. ಸನ್ಮಾನ ಮುಗಿದ ಕೆಲವೇ ತಿಂಗಳಲ್ಲಿ ಅಧಿಕಾರ ಬಿಟ್ಟುಕೊಡಬೇಕಾಗುತ್ತದೆ.

ಈ ಕುರಿತು ರಾಜ್ಯಸರ್ಕಾರಗಳು ತೀರ್ಮಾನ ಕೈಗೊಳ್ಳಬೇಕು. ಕರ್ನಾಟಕ ಸೇರಿದಂತೆ ಹಲ ರಾಜ್ಯಗಳು ಅಧಿಕಾರಾವಧಿ ವಿಸ್ತರಣೆ ತೀರ್ಮಾನ ಕೈಗೊಳ್ಳುತ್ತಿರುವುದು  ಸಂತಸಕರ ಎಂದರು.

ಸ್ಥಳೀಯ ಸಂಸ್ಥೆಗಳಲ್ಲಿ ಶೇ.50 ಮಹಿಳಾ ಮೀಸಲು ತರುವ ಚಿಂತನೆ ನಡೆಯುತ್ತಿದೆ. ಮಹಾನಗರಪಾಲಿಕೆಗಳ ಮಾದರಿಯಲ್ಲಿ ನಗರಸಭೆ, ಪುರಸಭೆಗಳಲ್ಲೂ ಐಎಎಸ್ ಅಧಿಕಾರಿಗಳನ್ನು ನೇಮಿಸಬೇಕು. ವಿಸ್ತೃತ ಯೋಜನೆ ಹಾಗೂ ಸಮರ್ಪಕ ಅನುಷ್ಠಾನಕ್ಕಾಗಿ ಅಧಿಕಾರಿಗಳನ್ನು ನೇಮಿಸುವ ಬಗ್ಗೆ ಚರ್ಚಿಸಲಾಗುವುದು ಎಂದು ನಾಯ್ಡು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com