• Tag results for ಮೇಯರ್

ಬಿಬಿಎಂಪಿ ಮೇಯರ್, ಉಪ ಮೇಯರ್ ಅಧಿಕಾರ ಅವಧಿ ಹೆಚ್ಚಳ: ಎರಡೂವರೆ ವರ್ಷಕ್ಕೆ ಏರಿಕೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಮತ್ತು ಉಪ ಮೇಯರ್ ಅವರ ಆಡಳಿತ ಅವಧಿಯನ್ನು ಈಗಿರುವ ಒಂದು ವರ್ಷದ ಬದಲಿಗೆ 30 ತಿಂಗಳು ( ಎರಡೂವರೆ) ವರ್ಷಗಳಿಗೆ   ಹೆಚ್ಚಿಸಲಾಗಿದೆ. ನಗರದಲ್ಲಿನ ವಾರ್ಡ್ ಗಳ ಸಂಖ್ಯೆಯನ್ನು 198ರಿಂದ 225ಕ್ಕೆ ಏರಿಕೆ ಮಾಡಲು ನಿರ್ಧರಿಸಲಾಗಿದೆ.

published on : 8th September 2020

ಬೆಳಗಾವಿ: ಮೊದಲ ಕನ್ನಡ ಮೇಯರ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ  ಸಿದ್ಧನಗೌಡ ಪಾಟೀಲ್ ನಿಧನ

ಬೆಳಗಾವಿಯ ಮಹಾನಗರ ಪಾಲಿಕೆಯ ಮೊದಲ ಕನ್ನಡ ಮೇಯರ್ ಸಿದ್ಧನಗೌಡ ಪಾಟೀಲ್(87) ಅವರು ಅನಾರೋಗ್ಯದಿಂದ ಬುದವಾರ ನಿಧನ ಹೊಂದಿದರು.

published on : 26th August 2020

ತಿಂಗಳಾಂತ್ಯದಲ್ಲಿ ಕೆ.ಆರ್‌.ಮಾರುಕಟ್ಟೆ ತೆರೆಯುವ ಸಾಧ್ಯತೆ; ಮುನ್ನೆಚ್ಚರಿಕಾ ಕ್ರಮಗಳಿಗೆ ಮೇಯರ್‌ ಸೂಚನೆ

ಕೋವಿಡ್-19 ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಮುಚ್ಚಲಾಗಿದ್ದ ಕೆ.ಆರ್.ಮಾರುಕಟ್ಟೆಯನ್ನು ತಿಂಗಳ ಕೊನೆಯಲ್ಲಿ ತೆರೆಯಲು ಅನುಮತಿ ನೀಡುವ ಸಾಧ್ಯತೆ ಇರುವುದರಿಂದ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೂಡಲೆ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಮೇಯರ್‌ ಗೌತಮ್‌ ಕುಮಾರ್‌ ಸೂಚನೆ  ನೀಡಿದ್ದಾರೆ.

published on : 23rd August 2020

ಬೆಂಗಳೂರು ಗಲಭೆ ಪ್ರಕರಣ: ಮಾಜಿ ಮೇಯರ್ ಸಂಪತ್ ರಾಜ್ ಆಪ್ತಸಹಾಯಕ ಬಂಧನ

48 ಗಂಟೆಗಳ ಸುದೀರ್ಘ ವಿಚಾರಣೆ ಬಳಿಕ ಡಿಜೆ ಹಳ್ಳಿ- ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ಬಿಬಿಎಂಪಿ ಕಾಂಗ್ರೆಸ್ ಸದಸ್ಯ ಸಂಪತ್ ರಾಜ್ ಅವರ ಆಪ್ತ ಸಹಾಯಕನನ್ನು ಸಿಸಿಬಿ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. 

published on : 20th August 2020

115 ಸಂಚಾರಿ ರಾಪಿಡ್ ಆ್ಯಂಟಿಜನ್ ಟೆಸ್ಟ್ ವಾಹನಕ್ಕೆ ಚಾಲನೆ ನೀಡಿದ ಬಿಬಿಎಂಪಿ ಮೇಯರ್

ಬಿಬಿಎಂಪಿ ವ್ಯಾಪ್ತಿಯ ಕಂಟೇನ್ಮೆಂಟ್ ಪ್ರದೇಶ, ಕೊಳಗೇರಿ ಪ್ರದೇಶ ಹಾಗೂ ಪೌರಕಾರ್ಮಿಕರ ಕಾಲೋನಿಗಳಲ್ಲಿ ರಾಪಿಡ್ ಆ್ಯಂಟಿಜೆನ್ ಕಿಟ್ ಮೂಲಕ ಕೋವಿಡ್ ಪರೀಕ್ಷಾ ಕಾರ್ಯಕ್ಕೆ ಮೇಯರ್ ಎಂ.ಗೌತಮ್ ಕುಮಾರ್ ಶುಕ್ರವಾರ ಚಾಲನೆ ನೀಡಿದರು.   

published on : 18th July 2020

ತೆರಿಗೆ ಪಾವತಿಯಲ್ಲಿ ವಂಚಿಸಲು ಬಿಲ್ಡರ್ ಗಳಿಗೆ ಬಿಬಿಎಂಪಿ ಅಧಿಕಾರಿಗಳಿಂದ ನೆರವು: ಮೇಯರ್ ತನಿಖೆಗೆ ಆದೇಶ

ತೆರಿಗೆ ಪಾವತಿಗೆ ವಿನಾಯ್ತಿ ನೀಡಿ ಕೆಲವು ಬಿಲ್ಡರ್ ಗಳ ಪರವಾಗಿ ನಿಲ್ಲಲು ಯಲಹಂಕ ಬಿಬಿಎಂಪಿ, ಪೂರ್ವ ಮತ್ತು ಇತರ ವಲಯಗಳ ಅಧಿಕಾರಿಗಳು ಇಲ್ಲದಿರುವ ಕರ್ನಾಟಕ ನಗರ ಪಾಲಿಕೆ ಕಾಯ್ದೆಯನ್ನು ಉಲ್ಲೇಖಿಸುತ್ತಿದ್ದಾರೆ ಎಂದು ಪಾಲಿಕೆ ಸಭೆಯಲ್ಲಿ ಬಿಜೆಪಿ ಸದಸ್ಯ ಪದ್ಮನಾಭ ರೆಡ್ಡಿ ಆರೋಪಿಸಿದ್ದಾರೆ.

published on : 1st July 2020

ಬನ್ನೇರುಘಟ್ಟ ರಸ್ತೆಯಲ್ಲಿ ದೊಡ್ಡ ಮಟ್ಟದಲ್ಲಿಯೇ ಪಾಲಿಕೆ ಆಸ್ತಿ ಒತ್ತುವರಿ: ಶಾಕ್ ಆದ ಮೇಯರ್ ಗೌತಮ್

ಹೊಂಬೇಗೌಡನಗರ ವಾರ್ಡ್'ನ ಬನ್ನೇರುಘಟ್ಟ ರಸ್ತೆ, ಮೈಕೋ ಫ್ಯಾಕ್ಟರಿ ಹಿಂಭಾಗ, ಲಕ್ಕಸಂದ್ರ ಗ್ರಾಮದ ಸರ್ವೆ ಸಂ.14 ಪ್ರದೇಶಗಳಲ್ಲಿ ಅನಧಿಕೃತವಾಗಿ ಒತ್ತುವರಿಯಾಗಿರುವ ಜಾಗವನ್ನು ವಶಕ್ಕೆ ಪಡೆದು ನಾಮಫಲಕ ಅಳವಡಿಸುವಂತೆ ಅಧಿಕಾರಿಗಳಿಗೆ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಅವರು ನಿರ್ದೇಶಿಸಿದ್ದಾರೆ. 

published on : 12th June 2020

ಗುತ್ತಿಗೆ ಅವಧಿ ಮುಗಿದಿರುವ ಎಲ್ಲಾ ಆಸ್ತಿ ವಶಕ್ಕೆ ತೆಗೆದುಕೊಳ್ಳಲು ಬಿಬಿಎಂಪಿ ನಿರ್ಧಾರ

ಭೋಗ್ಯಕ್ಕೆ (ಲೀಸ್) ನೀಡಿರುವ ಪಾಲಿಕೆಯ ಎಲ್ಲಾ ಕಟ್ಟಡಗಳ ದಾಖಲಾತಿಗಳನ್ನು ಪುನರ್ ಪರಿಶೀಲಿಸಲು ಬಿಬಿಎಂಪಿ ನಿರ್ಧರಿಸಿದೆ.ನಗರದಲ್ಲಿ ಗುತ್ತಿಗೆ ಅವಧಿ ಮುಗಿದಿರುವ ಹಾಗೂ ಇನ್ನೂ ಚಾಲ್ತಿಯಲ್ಲಿರುವ ಒಟ್ಟು 324 ಆಸ್ತಿಗಳಿಗೆ ಸದ್ಯದ ಮಾರುಕಟ್ಟೆ ದರ ನಿಗದಿ ಮಾಡಲು ನಿರ್ಧರಿಸಲಾಗಿದೆ ಎಂದು ಮೇಯರ್‌ ಎಂ.ಗೌತಮ್‌ಕುಮಾರ್‌ ತಿಳಿಸಿದ್ದಾರೆ

published on : 11th June 2020

ದೆಹಲಿಯಿಂದ ಬಂದ ಸೊಸೆ: ಶಿಮ್ಲಾ ಮೇಯರ್ ಗೆ ಹೋಮ್ ಕ್ವಾರಂಟೈನ್

ದೆಹಲಿಯಿಂದ ಸೊಸೆ ವಾಪಸಾದ ಹಿನ್ನೆಲೆಯಲ್ಲಿ ಶಿಮ್ಲಾ ಮೇಯರ್ ಸತ್ಯ ಕೌಂಡಾಲ್ ಹೋಮ್ ಕ್ವಾರಂಟೈನ್ ಗೆ ಒಳಗಾಗಿದ್ದಾರೆ. ದೆಹಲಿಯಿಂದ ಬಂದ ಸೊಸೆಯ ಜೊತೆ ಮನೆಯ ಸದಸ್ಯರೆಲ್ಲರೂ ಹೋಮ್ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.

published on : 8th May 2020

ಮುಂಬೈಗಾಗಿ ಯಾವ ಸೇವೆಗೂ ಸಿದ್ಧ: ಕೊರೋನಾ ವೈರಸ್ ವಿರುದ್ಧ ಹೋರಾಡಲು ಸ್ವತ: ನರ್ಸ್ ಆದ ಮುಂಬೈ ಮೇಯರ್‌!

ಮಹಾರಾಷ್ಟ್ರದಲ್ಲಿ ಮಾರಕ ಕೊರೋನಾ ವೈರಸ್ ಆರ್ಭಟ ಜೋರಾಗಿರುವಂತೆಯೇ ಕೊರೋನಾ ವಾರಿಯರ್ಸ್ ರಲ್ಲಿ ಧೈರ್ಯ ಮತ್ತು ಆತ್ಮಸ್ಥೈರ್ಯ ತುಂಬಲು ಸ್ವತಃ ಮುಂಬೈ ಮಹಾನಗರಿಯ ಮೇಯರ್ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

published on : 27th April 2020

ತಾಜ್ ನಗರ ಆಗ್ರಾ ಸುರಕ್ಷತೆಗಾಗಿ ಮೇಯರ್ ಪತ್ರ: ಸಿಎಂ ಯೋಗಿ ಸರ್ಕಾರದಿಂದ ತಕ್ಷಣವೇ ಸುಧಾರಣೆಗೆ ಕ್ರಮ!  

ಮೇಯರ್ ಪತ್ರ ಬರೆದ ಬೆನ್ನಲ್ಲೇ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲಾಗಿದ್ದು, ಗಣನೀಯ ಪ್ರಮಾಣದ ಸುಧಾರಣೆಗಳು ಕಂಡುಬಂದಿದ್ದು, ಕೋವಿಡ್-19 ಪ್ರಕರಣಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಬೇಕಾದ ಸ್ಥಿತಿ ಇದೆ.  

published on : 26th April 2020

ಲಂಡನ್ ಮಾಜಿ ಮೇಯರ್ ಕನ್ನಡಿಗ ನೀರಜ್ ಪಾಟೀಲ್ ಕೊರೋನಾ ಸೋಂಕು

ಇಂಗ್ಲೆಂಡ್‌ನ‌ ಲ್ಯಾಂಬೆತ್‌ ನಗರದ ಮಾಜಿ ಮೇಯರ್‌ ಕನ್ನಡಿಗ ನೀರಜ್‌ ಪಾಟೀಲ್‌ ಅವರಿಗೆ ಕೋವಿಡ್ 19 ಸೋಂಕು ತಗಲಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ನೀರಜ್‌ ಪಾಟೀಲ್‌ ಹೇಳಿ ಕೊಂಡಿದ್ದು, ಈ ವೈರಸ್‌ನಿಂದ ಗುಣಮುಖರಾಗಲು ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದು, ಹೋಂ ಕ್ವಾರಂಟೈನ್‌ ಆಗಿರುವುದಾಗಿ ತಿಳಿಸಿದ್ದಾರೆ.

published on : 10th April 2020

ಬೇಕು ಬೇಕು ಅಂತಾ ಕೊರೋನಾ ಸೋಂಕು ಹತ್ತಿಸಿಕೊಂಡ, ಈಗ ಮೇಯರ್ ಫಜೀತಿ ಹರಹರ...!

ಕೊರೊನಾ ವೈರಸ್ ಶಬ್ದ ಕೇಳಿದರೆ ಜಗತ್ತಿನ ಎಲ್ಲ ದೇಶಗಳು ಭಯದಿಂದ ನಡುಗುತ್ತಿವೆ. ಇಂತಹ ಸಂದರ್ಭದಲ್ಲಿ ಜರ್ಮನಿಯ ಬರ್ಲಿನ್ ಜಿಲ್ಲಾ ಮೇಯರ್ ಸ್ಟೀಫನ್ ವಾನ್ ಡಾಸೆಲ್ ಮಾತ್ರ ಉದ್ದೇಶ ಪೂರ್ವಕವಾಗಿ ತನ್ನ ದೇಹಕ್ಕೆ ಕರೋನಾ ವೈರಸ್ ಸೋಂಕು ತಗುಲಿಸಿಕೊಂಡಿದ್ದಾರೆ.

published on : 3rd April 2020

ಲಾಕ್ ಡೌನ್ ಮತ್ತೆ ದೇಶಾದ್ಯಂತ ವಿಸ್ತರಿಸುವ ಅಗತ್ಯ ಇಲ್ಲ: ಜೀವಶಾಸ್ತ್ರಜ್ಞ ಸತ್ಯಜಿತ್ ಮೇಯರ್

ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 14ರ ನಂತರ ಮತ್ತೆ ದೇಶಾದ್ಯಂತ ಲಾಕ್ ಡೌನ್ ಅನ್ನು ವಿಸ್ತರಿಸುತ್ತಾರೆಯೇ? ಎಂಬ ಪ್ರಶ್ನೆ ಈಗ ಪ್ರತಿಯೊಬ್ಬರನ್ನು ಕಾಡುತ್ತಿದ್ದೆ.

published on : 2nd April 2020

ಕರಗ ಉತ್ಸವಕ್ಕೆ ಕೊರೋನಾ ಅಡ್ಡಿಯಾಗದು, ಸಂಪ್ರದಾಯದಂತೆ ಆಚರಣೆ; ಮೇಯರ್ ಗೌತಮ್ ಕುಮಾರ್

ರಾಜ್ಯದಲ್ಲಿ ಕಾಣಿಸಿಕೊಂಡಿರುವ ಕೊರೋನಾ ವೈರಾಣು ಸೋಂಕು ಭೀತಿಯ ನಡುವೆಯೂ ಈ ವರ್ಷದ ಐತಿಹಾಸಿಕ ಕರಗ ಉತ್ಸವ ವಿಜೃಂಭಣೆಯಿಂದ ನಡೆಯಲಿದೆ ಎಂದು ಮೇಯರ್ ಗೌತಮ್ ಕುಮಾರ್ ಜೈನ್ ಹೇಳಿದ್ದಾರೆ.

published on : 12th March 2020
1 2 3 4 >