ಮೈಸೂರಿನ ಸಮಗ್ರ ಅಭಿವೃದ್ಧಿಗಾಗಿ ಪಾಲಿಕೆ ಮೇಯರ್ ಸ್ಥಾನ ನಮಗೆ ಬೇಕೆ ಬೇಕು: ಪ್ರತಾಪ್ ಸಿಂಹ

ಈ ಬಾರಿ ಬಿಜೆಪಿಗೆ ಮೈಸೂರು ಮಹಾನಗರ ಪಾಲಿಕೆ ಮೇಯರ್‌ ಸ್ಥಾನ ಬೇಕೇ ಬೇಕು. ಮೈಸೂರಿನ ಸಮಗ್ರ ಅಭಿವೃದ್ಧಿಗಾಗಿ ಮೇಯರ್ ಸ್ಥಾನ ನಮಗೆ ಕೊಡಿ ಎಂದು ಸಂಸದ ಪ್ರತಾಪಸಿಂಹ ಹೇಳಿದ್ದಾರೆ.
ಪ್ರತಾಪ್ ಸಿಂಹ
ಪ್ರತಾಪ್ ಸಿಂಹ

ಮೈಸೂರು: ಈ ಬಾರಿ ಬಿಜೆಪಿಗೆ ಮೈಸೂರು ಮಹಾನಗರ ಪಾಲಿಕೆ ಮೇಯರ್‌ ಸ್ಥಾನ ಬೇಕೇ ಬೇಕು. ಮೈಸೂರಿನ ಸಮಗ್ರ ಅಭಿವೃದ್ಧಿಗಾಗಿ ಮೇಯರ್ ಸ್ಥಾನ ನಮಗೆ ಕೊಡಿ ಎಂದು ಸಂಸದ ಪ್ರತಾಪಸಿಂಹ ಹೇಳಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಪಾಲಿಕೆಯಲ್ಲಿ ಎಲ್ಲರಿಗಿಂತ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದೇವೆ. 22 ಸ್ಥಾನ ‌ಇರುವ ನಮಗೆ ಯಾರು ಬೇಕಾದರೂ ಸಹಕಾರ ನೀಡಬಹುದು. ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ. ಮೈಸೂರು ಪಾಲಿಕೆಯಲ್ಲೂ ಬಿಜೆಪಿ ಪಕ್ಷವೇ ಅಧಿಕಾರದಲ್ಲಿ ಇದ್ದರೆ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಹಿಂದೆ ಜೆಡಿಎಸ್‌ ಜೊತೆ ಹೊಂದಾಣಿಕೆ ಆಗಿದ್ದಾಗ ನಾಲ್ಕು ಬಾರಿ ಉಪಮೇಯರ್ ಮಾತ್ರ ಆಗಿದ್ದೇವೆ. ಈ ಬಾರಿ ಯಾರ ಜೊತೆ ಹೊಂದಾಣಿಕೆ ಆದರೂ ಮೇಯರ್ ಸ್ಥಾನ ನಮಗೇ ಬೇಕು. ನಿಮಗೆಲ್ಲ ಸಾಕಷ್ಟು ಅವಕಾಶ ಕೊಟ್ಟಾಗಿದೆ. ನಮಗೂ ಒಮ್ಮೆ ಪಾಲಿಕೆಯಲ್ಲಿ ಮೇಯರ್ ಸ್ಥಾನ ನೀಡಿ ಅವಕಾಶ ಕೊಡಿ ಎಂದು ಹೇಳಿದ್ದಾರೆ.

ಮೈಸೂರು ಸಿಟಿ ಕಾರ್ಪೊರೇಶನ್‌ನಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ದೂರವಿರಿಸಲು ಬಿಜೆಪಿ ಮತ್ತು ಜೆಡಿಎಸ್ ಮುಂದಾಗಿದೆ,  ಕೇಸರಿ ಪಕ್ಷವು ಅಂತಹ ಮೈತ್ರಿಗೆ ಬಾಗಿಲು ತೆರೆದಿದೆ, ಅದು ಮೇಯರ್ ಹುದ್ದೆಯನ್ನು ಪಡೆದರೆ ಮೈತ್ರಿ ಎಂದು ತಿಳಿಸಿದೆ. ಪ್ರಸ್ತುತ ಇರುವ ಜೆಡಿಎಸ್ ಮೇಯರ್ ತಸ್ನೀಮ್ ಅವರ ಅಧಿಕಾರವಧಿ ಜನವರಿ 15ಕ್ಕೆ ಮುಗಿಯಲಿದೆ.

ಕಾಂಗ್ರೆಸ್ ಪಕ್ಷದ ಮೇಯರ್ ಇದ್ದಾಗ ಸಂಪೂರ್ಣ ಸಹಕಾರ ಕೊಟ್ಟಿದ್ದೆವು. ಆದರೆ, ಹಿಂದುಳಿದ ವರ್ಗಕ್ಕೆ ಸೇರಿದ ಅದರಲ್ಲೂ ಅಲ್ಪಸಂಖ್ಯಾತ ಮುಸ್ಲಿಂ ಮಹಿಳೆ ಮಹಾಪೌರರಾಗಿದ್ದರೂ ಕಾಂಗ್ರೆಸ್ ಅಸಹಕಾರ ತೋರಿತು. ಕೌನ್ಸಿಲ್ ಸಭೆಯಲ್ಲಿ ಅಸಹಕಾರ ತೋರುವ ಜತೆಗೆ ಪ್ರತಿಯೊಂದು ವಿಚಾರಕ್ಕೂ ಮೂಗು ತೋರಿಸಿದ್ದಾರೆ. ಇಂತಹವರಿಗೆ ಮೈತ್ರಿ ಮುಂದುವರೆಸಿದರೆ ಸುಗಮವಾಗಿ ಆಡಳಿತ ನಡೆಸುವುದು ಕಷ್ಟವೆಂದು ಕೆಲವರು ಅಸಮಾಧಾನ ಹೊರ ಹಾಕಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com