ಹಂದಿಜ್ವರ ತಡೆಗೆ ಸ್ವಚ್ಛತೆಯೇ ಮದ್ದು

ರಾಜ್ಯದಲ್ಲಿ ಹರಡುತ್ತಿರುವ ಮಾರಣಾಂತಿಕ ಎಚ್1ಎನ್1 ರೋಗ ನಿಯಂತ್ರಣಕ್ಕೆ ಸ್ವಚ್ಛತೆಯೇ ಮೊದಲ ಮದ್ದು ಎಂದು ಶಾಸಕ ಅರವಿಂದ ಲಿಂಬಾವಳಿ ಅಭಿಪ್ರಾಯಪಟ್ಟರು...
ಶಾಸಕ ಅರವಿಂದ ಲಿಂಬಾವಳಿ
ಶಾಸಕ ಅರವಿಂದ ಲಿಂಬಾವಳಿ
Updated on

ಕೆ.ಆರ್.ಪುರ: ರಾಜ್ಯದಲ್ಲಿ ಹರಡುತ್ತಿರುವ ಮಾರಣಾಂತಿಕ ಎಚ್1ಎನ್1 ರೋಗ ನಿಯಂತ್ರಣಕ್ಕೆ ಸ್ವಚ್ಛತೆಯೇ ಮೊದಲ ಮದ್ದು ಎಂದು ಶಾಸಕ ಅರವಿಂದ ಲಿಂಬಾವಳಿ ಅಭಿಪ್ರಾಯಪಟ್ಟರು.

ಹೂಡಿಯ ಬಸವಣ್ಣನಗರದಲ್ಲಿ ಆಯೋಜಿಸಿದ್ದ ಸ್ವಚ್ಛತಾ ಆಂದೋಲನದಲ್ಲಿ ಮಾತನಾಡಿದ ಅವರು, ಡೆಂಘೀ, ಮಲೇರಿಯಾ ರೋಗಗಳ ನಂತರ ಎಚ್1ಎನ್1 ರಾಜ್ಯವನ್ನು ವ್ಯಾಪಿಸುತ್ತಿದ್ದು, ನಿಯಂತ್ರಣಕ್ಕೆ ಸಾರ್ವಜನಿಕರೇ ಕ್ರಮ ಕೈಗೊಳ್ಳಬೇಕಿದೆ. ಕಾಯಿಲೆ ಹರಡದಂತೆ ತಡೆಯಲು ಪ್ರತಿಯೊಬ್ಬರೂ ತಾವು ವಾಸಿಸುವ ಮನೆ ಹಾಗೂ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಬಿಡುವಿಲ್ಲದ ವೇಳೆಯಲ್ಲೂ ಸ್ವಚ್ಛತೆಗಾಗಿ ಸಮಯ ಮೀಸಲಿಡಬೇಕು. ಪ್ರಧಾನಿ ನರೇಂದ್ರ ಮೋದಿ ಆರಂಭಿಸಿರುವ ಸ್ವಚ್ಛತಾ ಅಭಿಯಾನಕ್ಕೆ ಮೊದಲು ಭಾರೀ ಬೆಂಬಲ ವ್ಯಕ್ತವಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ  ಅಭಿಯಾನದ ಬಗ್ಗೆ ಜನರು ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರು ತಮ್ಮ ಸ್ಥಾನದ ಜವಾಬ್ದಾರಿ ಅರಿತು ಪ್ರತಿ ಮನೆಗೆ ಭೇಟಿ ನೀಡಬೇಕು. ಅಭಿಯಾನದ ಬಗ್ಗೆ ಮಾಹಿತಿ ಹಾಗೂ ಮಹತ್ವ ತಿಳಿಸಿ ಆಸಕ್ತಿ ಮೂಡುವಂತೆ ಮಾಡಬೇಕು ಎಂದರು.

ಗಾಂಧೀಜಿ ಕಂಡ ಸ್ವಚ್ಛ ಭಾರತ ಕನಸನ್ನು ಮುಂದಿನ ನಾಲ್ಕು ವರ್ಷಗಳಲ್ಲಿ ನನಸು ಮಾಡುವುದಾಗಿ ಪ್ರಧಾನಿ ಘೋಷಿಸಿದ್ದಾರೆ. ಇದಕ್ಕೆ ತಕ್ಕಂತೆ ಕಾರ್ಯಕರ್ತರು ಕೆಲಸ
ಮಾಡಬೇಕಿದೆ. ದೇಶದ ಸ್ವಚ್ಛತೆ ಕಾಪಾಡಬೇಕಿರುವುದು ನಾಗರಿಕರ ಕರ್ತವ್ಯ. ಸ್ವಚ್ಛತಾ ಅಭಿಯಾನದ ಗುರಿ ಯನ್ನು ಸಾರ್ವಜನಿಕರೇ ಈಡೇರಿಸಬೇಕು ಎಂದರು. ಬಿಜೆಪಿ ಕ್ಷೇತ್ರಾಧ್ಯಕ್ಷ ವೆಂಕಟಸ್ವಾಮಿ ರೆಡ್ಡಿ, ಮುಖಂಡರಾದ ಮಹೇಂದ್ರ ಮೋದಿ, ಅನಂತರಾಮಯ್ಯ, ಅರುಣಾ ರೆಡ್ಡಿ ಹಾಜರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com