• Tag results for drugs

ಮುಂಬೈ ಬಳಿ 1,400 ಕೋಟಿ ರೂ. ಮೊತ್ತದ ಮಾದಕ ವಸ್ತು ಜಪ್ತಿ: ಸ್ನಾತಕೋತ್ತರ ಪದವೀಧರ ಸೇರಿ ಐವರ ಬಂಧನ

ಮಹಾರಾಷ್ಟ್ರದ ಪಲ್ಗಾರ್ ಜಿಲ್ಲೆಯ ನಾಲಸೊಪಾರಾದ ಮಾದಕ ವಸ್ತು ಉತ್ಪಾದನಾ ಘಟಕದ ಮೇಲೆ ದಾಳಿ ನಡೆಸಿದ ಮುಂಬೈ ಪೊಲೀಸರು, ಐವರನ್ನು ಬಂಧಿಸಿ ಸುಮಾರು 1,400 ಕೋಟಿ ಮೊತ್ತದ 700 ಕಿಲೋಗ್ರಾಮ್ ಗೂ ಹೆಚ್ಚಿನ ಪ್ರಮಾಣದ ಮಾದಕ ವಸ್ತುವನ್ನು ಜಪ್ತಿ ಮಾಡಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

published on : 4th August 2022

ರಾಜಸ್ಥಾನ: ಭಾರತ-ಪಾಕ್ ಗಡಿಯಲ್ಲಿ ಬಿಎಸ್‌ಎಫ್ ನಿಂದ 4.7 ಕೆಜಿ ಡ್ರಗ್ಸ್ ಜಪ್ತಿ

ರಾಜಸ್ಥಾನದ ಶ್ರೀ ಗಂಗಾನಗರ ಜಿಲ್ಲೆಯ ಭಾರತ-ಪಾಕಿಸ್ತಾನ ಗಡಿ ಬಳಿ 4.7 ಕೆಜಿ ಡ್ರಗ್ಸ್ ಇದ್ದ ಐದು ಪ್ಯಾಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಗಡಿ ಭದ್ರತಾ ಪಡೆ ಮೂಲಗಳು ಬುಧವಾರ ತಿಳಿಸಿವೆ. ಪ್ಯಾಕೆಟ್‌ಗಳು ಪತ್ತೆಯಾದ ಕರಣ್‌ಪುರದ...

published on : 27th July 2022

ದೆಹಲಿ ವಿಶ್ವವಿದ್ಯಾನಿಲಯ ಕ್ಯಾಂಪಸ್: 1 ಕೋಟಿ ರೂ. ಮೌಲ್ಯದ ಡ್ರಗ್ಸ್ ನೊಂದಿಗೆ ಮಾಡೆಲ್ ಬಂಧನ

ಒಂದು ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ನೊಂದಿಗೆ ಮಾಡೆಲ್ ಹಾಗೂ ಆತನ ಸ್ನೇಹಿತನನ್ನು ದೆಹಲಿ ಪೊಲೀಸರು ಇಂದು ಬಂಧಿಸಿದ್ದಾರೆ. ಆರೋಪಿಗಳು ದೆಹಲಿ ವಿಶ್ವವಿದ್ಯಾನಿಲಯ ಕ್ಯಾಂಪಸ್ ಸುತ್ತ ಡ್ರಗ್ಸ್ ಸರಬರಾಜು ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

published on : 18th July 2022

ಬೆಂಗಳೂರು: ಅಲೆಮಾರಿಗಳ ಗ್ಯಾಂಗ್ ಪತ್ತೆ; 4 ಕೋಟಿ ರೂ. ಮೌಲ್ಯದ ಗಾಂಜಾ ವಶ!

ಅಲೆಮಾರಿಗಳ ಸೋಗಿನಲ್ಲಿ ಆಶಿಶ್ ಆಯಿಲ್ ಹಾಗೂ ಗಾಂಜಾ ಕಳ್ಳ ಸಾಗಾಣೆ ಮಾಡುತ್ತಿದ್ದ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರ ತಂಡವನ್ನು ಪತ್ತೆ ಮಾಡಿರುವ ಸಿಸಿಬಿ ಪೊಲೀಸರು 4 ಕೋಟಿ ರೂ. ಮೌಲ್ಯದ ಡ್ರಗ್ಸ್‌ನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

published on : 13th July 2022

ನಟ ಸುಶಾಂತ್ ಸಿಂಗ್ ಸಾವು ಪ್ರಕರಣ: ಎನ್‌ಸಿಬಿ ಆರೋಪ ಪಟ್ಟಿಯಲ್ಲಿ ನಟಿ ರಿಯಾ ಚಕ್ರವರ್ತಿ ಪ್ರಮುಖ ಆರೋಪಿ!

2020ರಲ್ಲಿ ನಿಧನರಾದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಪ್ರೇಯಸಿ ರಿಯಾ ಚಕ್ರವರ್ತಿ ಅವರು ಡ್ರಗ್ಸ್ ಖರೀದಿಸಿದ್ದಾರೆ ಎಂದು ದೇಶದ ಡ್ರಗ್ಸ್ ವಿರೋಧಿ ಸಂಸ್ಥೆ ಆರೋಪ ಮಾಡಿದೆ.

published on : 13th July 2022

ಬೆಂಗಳೂರು: ಜೈಲಿನಲ್ಲಿರುವ ಮಗನಿಗೆ ಡ್ರಗ್ಸ್ ನೀಡಲು ಹೋದ ತಾಯಿಯ ಬಂಧನ

ಜೈಲಿನಲ್ಲಿರುವ ಮಗನಿಗೆ ಮಾದಕ ವಸ್ತು ನೀಡಲು ಹೋದ ತಾಯಿಯು ಜೈಲು ಸೇರಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

published on : 18th June 2022

ಡ್ರಗ್ಸ್ ಕೇಸ್: ಜಾಮೀನು ಮೇಲೆ ನಟ ಸಿದ್ದಾಂತ್ ಕಪೂರ್ ಬಿಡುಗಡೆ

ಪಾರ್ಟಿಯಲ್ಲಿ ಡಿ.ಜೆ ಆಗಿ‌ ಪಾಲ್ಗೊಂಡು ಡ್ರಗ್ಸ್ ಸೇವಿಸಿದ್ದ ಆರೋಪದಡಿ ಬಂಧಿಸಲಾಗಿದ್ದ ಬಾಲಿವುಡ್ ಹಿರಿಯ ನಟ ಶಕ್ತಿ ಕಪೂರ್ ಪುತ್ರ, ನಟಿ ಶ್ರದ್ಧಾ ಕಪೂರ್ ಸಹೋದರ ಸಿದ್ದಾಂತ್ ಕಪೂರ್ ಅವರನ್ನು ಠಾಣೆ ಜಾಮೀನು ಮೇಲೆ ಸೋಮವಾರ ರಾತ್ರಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

published on : 14th June 2022

ಬೆಂಗಳೂರು: ರೇವ್ ಪಾರ್ಟಿ ಮೇಲೆ ಪೊಲೀಸರ ದಾಳಿ, ನಟಿ ಶ್ರದ್ಧಾ ಕಪೂರ್ ಸಹೋದರ ಸಿದ್ಧಾಂತ್ ಕಪೂರ್ ಬಂಧನ

ಬೆಂಗಳೂರಿನ ಹೋಟೆಲ್ ವೊಂದರಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಅವರ ಸಹೋದರ ಸಿದ್ಧಾಂತ್ ಕಪೂರ್ ಅವರನ್ನು ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದುಬಂದಿದೆ.

published on : 13th June 2022

ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಪ್ರಕರಣದ ಹಿಂದಿನ ಸಂಚನ್ನು ನವಾಬ್ ಮಲಿಕ್ ಬಹಿರಂಗಪಡಿಸಿ ಅದಕ್ಕೆ ಬೆಲೆ ತೆರುತ್ತಿದ್ದಾರೆ: ಸಂಜಯ್ ರಾವತ್

ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಭಾಗಿಯಾಗಿದ್ದರು ಎನ್ನಲಾದ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಪ್ರಕರಣದ ಹಿಂದಿನ ಪ್ರಹಸನವನ್ನು ಬಹಿರಂಗಪಡಿಸಿದ ಎನ್‌ಸಿಪಿ ನಾಯಕ ನವಾಬ್ ಮಲಿಕ್ ಅವರಿಗೆ ಅಭಿನಂದನೆಗಳು ಎಂದು ಶಿವಸೇನಾ ಸಂಸದ ಸಂಜಯ್ ರಾವುತ್ ಹೇಳಿದ್ದಾರೆ.

published on : 28th May 2022

ಬೆಂಗಳೂರು: ಕೆ.ಆರ್.ಮಾರುಕಟ್ಟೆಯಲ್ಲಿ ಮಾದಕವಸ್ತು ಮಾರುತ್ತಿದ್ದ ಆರೋಪಿ ಬಂಧನ

ಸಿಟಿ ಮಾರುಕಟ್ಟೆ ಸಮೀಪದ ಮಟನ್ ಮಾರುಕಟ್ಟೆ ರಸ್ತೆಯಲ್ಲಿ ಮಾದಕವಸ್ತು ಮಾರಾಟ ಮಾಡುತ್ತಿದ್ದ ಡ್ರಗ್ಸ್ ಪೆಡ್ಲರ್'ವೊಬ್ಬನನ್ನು ಸಿಟಿ ಮಾರುಕಟ್ಟೆ ಠಾಣೆ ಪೊಲೀಸರು ಶುಕ್ರವಾರ ಬಂಧನಕ್ಕೊಳಪಡಿಸಿದ್ದಾರೆ.

published on : 28th May 2022

ಮತ್ತಷ್ಟು ಹದಗೆಟ್ಟ ಶ್ರೀಲಂಕಾ ಪರಿಸ್ಥಿತಿ: ಔಷಧ-ವೈದ್ಯಕೀಯ ಸಾಮಗ್ರಿಗಳ ಕೊರತೆಯ ಎಚ್ಚರಿಕೆ ನೀಡಿದ ವೈದ್ಯಕೀಯ ಸಂಘ

ದೇಶದ ಆರ್ಥಿಕ ಬಿಕ್ಕಟ್ಟಿನಿಂದ ಔಷಧಗಳು ಮತ್ತು ವೈದ್ಯಕೀಯ ಉಪಕರಣಗಳ ತೀವ್ರ ಕೊರತೆಯಿಂದಾಗಿ ಮುಂಬರುವ ವಾರಗಳಲ್ಲಿ ಆಸ್ಪತ್ರೆಗಳು ತುರ್ತು ಸೇವೆಗಳನ್ನು ಸಹ ಒದಗಿಸಲು ಸಾಧ್ಯವಾಗಲಿಕ್ಕಿಲ್ಲ  ಎಂದು ಶ್ರೀಲಂಕಾದ ರಾಷ್ಟ್ರೀಯ ವೈದ್ಯಕೀಯ ಸಂಘ ಗುರುವಾರ ಎಚ್ಚರಿಕೆ ನೀಡಿದೆ.

published on : 8th April 2022

5 ಪೆಡ್ಲರ್ ಗಳ ಬಂಧನ: 102 ಕೆಜಿ ಗಾಂಜಾ ವಶ

ಅಕ್ರಮವಾಗಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಐವರು ಡ್ರಗ್ಸ್ ಪೆಡ್ಲರ್ ಗಳನ್ನು ಕೋರಮಂಗಲ ಪೊಲೀಸರು ಬಂದನಕ್ಕೊಳಪಡಿಸಿದ್ದು, ರೂ.40 ಲಕ್ಷ ಮೌಲ್ಯದ 102 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.

published on : 28th March 2022

ಬೆಂಗಳೂರು: ಪುರಾತನ ಗೋಡೆ ಗಡಿಯಾರದಲ್ಲಿ ಬಚ್ಚಿಟ್ಟಿದ್ದ 40 ಲಕ್ಷ ರೂ. ಮೌಲ್ಯದ ಡ್ರಗ್ಸ್ ವಶ

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪುರಾತನ ಗೋಡೆ ಗಡಿಯಾರದಲ್ಲಿ ಬಚ್ಚಿಟ್ಟಿದ್ದ 40 ಲಕ್ಷ ರೂಪಾಯಿ ಮೌಲ್ಯದ ಅರ್ಧ ಕೆಜಿ ಆಂಫೆಟಮೈನ್ ಮತ್ತು ಆಮದು ಮಾಡಿಕೊಂಡ ಸುಮಾರು 6 ಕೋಟಿ ರೂಪಾಯಿ ಮೌಲ್ಯದ ಸಿಗರೇಟ್‌ಗಳನ್ನು ಇತ್ತೀಚೆಗೆ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಬೆಂಗಳೂರು ಘಟಕವು ಎರಡು ಪ್ರಮುಖ ವಶಪಡಿಸಿಕೊಂಡಿದೆ.

published on : 7th March 2022

ಡ್ರಗ್ಸ್​ ದಂಧೆ: ಬೆಂಗಳೂರಿನಲ್ಲಿ ವಿದೇಶಿ ಪ್ರಜೆಗಳು ಸೇರಿ ನಾಲ್ವರು ಆರೋಪಿಗಳ ಬಂಧನ

ಸಾರ್ವಜನಿಕ ಪ್ರದೇಶಗಳಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರು ವಿದೇಶಿ ಪ್ರಜೆಗಳು, ಓರ್ವ ಮಾದಕ ವ್ಯಸನಿ ಸೇರಿದಂತೆ ನಾಲ್ವರು ಆರೋಪಿಗಳನ್ನು ಯಲಹಂಕ‌ ಪೊಲೀಸರು ಭಾನುವಾರ ಬಂಧನಕ್ಕೊಳಪಡಿಸಿದ್ದಾರೆ.

published on : 6th March 2022

ಬೆಂಗಳೂರು: ಅಂತಾರಾಜ್ಯ ಮಾದಕ ವಸ್ತು ಕಳ್ಳಸಾಗಣೆ ಜಾಲ ಭೇದಿಸಿದ ಪೊಲೀಸರು; 3 ಬಂಧನ, 80 ಕೆಜಿ ಗಾಂಜಾ ವಶ!

ಮತ್ತೊಂದು ಅಂತಾರಾಜ್ಯ ಮಾದಕವಸ್ತು ಕಳ್ಳಸಾಗಣೆ ಜಾಲವನ್ನು ಮಹಾಲಕ್ಷ್ಮೀ ಲೇಔಟ್ ಠಾಣೆಯ ಪೊಲೀಸರು ಭೇದಿಸಿದ್ದು ಮೂವರನ್ನು ಬಂಧಿಸಿದ್ದಾರೆ. 

published on : 26th February 2022
1 2 3 4 5 6 > 

ರಾಶಿ ಭವಿಷ್ಯ