ಪರೀಕ್ಷೆ ಬರೆದಿದ್ದು 800, ಅರ್ಹರಾಗಿದ್ದು 5 ಮಂದಿ !

ಜಿಲ್ಲಾ ನ್ಯಾಯಾಧೀಶರ ಹುದ್ದೆಯ ಆಕಾಂಕ್ಷಿಗಳಾಗಿ ಪರೀಕ್ಷೆ ಬರೆದಿದ್ದ 800 ಅಭ್ಯರ್ಥಿಗಳ ಪೈಕಿ ಮೌಖಿಕ ಸಂದರ್ಶನದ ಹಂತಕ್ಕೆ ತಲುಪಲು ಸಾಧ್ಯವಾಗಿದ್ದು ಕೇವಲ 5 ಮಂದಿಗೆ ಮಾತ್ರ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಜಿಲ್ಲಾ ನ್ಯಾಯಾಧೀಶರ ಹುದ್ದೆಯ ಆಕಾಂಕ್ಷಿಗಳಾಗಿ ಪರೀಕ್ಷೆ ಬರೆದಿದ್ದ 800 ಅಭ್ಯರ್ಥಿಗಳ ಪೈಕಿ ಮೌಖಿಕ ಸಂದರ್ಶನದ ಹಂತಕ್ಕೆ ತಲುಪಲು ಸಾಧ್ಯವಾಗಿದ್ದು ಕೇವಲ 5 ಮಂದಿಗೆ ಮಾತ್ರ

ನಾನಾ ಜಿಲ್ಲೆಗಳ 17 ಜಿಲ್ಲಾನ್ಯಾಯಾಧೀಶರ ಹುದ್ದೆ ಭರ್ತಿಗೆ ಅರ್ಜಿ ಆಹ್ವಾಸನಿಸಲಾಗಿತ್ತು. 1169 ಮಂದಿ ಈ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. 2014ರ ಅ.11 ರಂದು ಮೊದಲ ಹಂತದ ಲಿಖಿತ ಪರೀಕ್ಷೆ ನಡೆದಿತ್ತು. ಪರೀಕ್ಷೆಗೆ ಹಾಜರಾದ 800 ಮಂದಿಯಲ್ಲಿ ತೇರ್ಗಡೆಯಾಗಿದ್ದು ಕೇವಲ 5 ಮಂದಿ ಮಾತ್ರ. ಈ ಐವರ ಪೈಕಿ ಮೌಖಿಕ ಸಂದರ್ಶನದಲ್ಲಿ ಉತ್ತೀರ್ಣರಾಗಿ ಕಟ್ಟಕಡೆದಾಗಿ ಎಷ್ಟು ಜನ ಉಳಿಯುತ್ತಾರೆ ಎಂಬುದನ್ನು ಕಾದು ನೋಡಬೇಕು.

ಸಿವಿಲ್ ಮತ್ತು ಕ್ರಿಮಿನಲ್ಲ ಲಾ ಎಂಬ ಎರಡು ಭಾಗಗಳಲ್ಲಿ ಪರೀಕ್ಷೆ ಏರ್ಪಡಿಸಲಾಗಿತ್ತು. ಈ ಹಂತದಲ್ಲಿ ಎರಡಂಕಿದಾಟಲೂ ಕೆಲವು ಅಭ್ಯರ್ಥಿಗಳು ಹರಸಾಹಸಪಟ್ಟಿದ್ದಾರೆ. 17 ಹುದ್ದೆಗಳಿದ್ದು, 5 ಮಂದಿ ಮಾತ್ರ ತೇರ್ಗಡೆ ಹೊಂದಿರುವುದರಿಂದಿ ಉಲಿದ 12 ಹುದ್ದಿಗಳನ್ನು ತುಂಬಲು ಸಾಹಸಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಬೇರೆ ವೃತ್ಥಿಯಂತೆ ಹೊಸ ಬರಿಗೆ ನೇರವಾಗಿ ಜಿಲ್ಲಾ ನ್ಯಾಯಾಧೀಶರ ಹುದ್ದೆಯ ಪರೀಕ್ಷೆಗೆ ಕೂರಲು ಅರ್ಹತೆ ಇರುವುದಿಲ್ಲ. 10 ವರ್ಷ ವಕೀಲಿ ವೃತ್ತಿ ಮಾಡಿದವರು ಮಾತ್ರ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ರೀತಿ ವಕೀಲ ವೃತ್ತಿಯಲ್ಲಿದ್ದವರಿಗೇ ಈ ಹುದ್ದೆ ಅಲಂಕರಿಸಲು ಸಾಧ್ಯವಾಗುತ್ತಿಲ್ಲ.

ಈ ಫಲಿತಾಂಶದ ಅಂಕಿ ಅಂಶ ಗಮನಿಸಿದರೆ ಯುವಕರಲ್ಲಿ ಕಲಿಕೆಯ ಗುಣಮಟ್ಟ ಯಾವ ಹಂತದಲ್ಲಿದೆ ಎಂಬುದು ಗೋಚರವಾಗುತ್ತದೆ. ಪಠ್ಯ ಕ್ರಮ ಅಷ್ಟೇನೂ ಕಷ್ಟವಿಲ್ಲದಿದ್ದರೂ ವೃತ್ತಿಯಲ್ಲಿ ಗುಣಮಟ್ಟದ ಕೊರತೆ ಎದ್ದು ಕಾಣುತ್ತಿರುವುದಂತೂ ಸತ್ಯ ಎಂದು ನ್ಯಾಯವಾದಿ ಎನ್.ಪಿ. ಅಮೃತೇಶ್ ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com