ಸ್ನೇಹಿತನನ್ನೇ ಅಪಹರಿಸಿ ಕೊಲೆ

ಸಾಲವನ್ನು ಹಿಂತಿರುಗಿಸದ ಕಾರಣ ಯುವಕರ ಗುಂಪೊದು ಸ್ನೇಹಿತನನ್ನು ಅಪಹರಿಸಿ, ತಲೆಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವ ಘಟನೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಸಾಲವನ್ನು ಹಿಂತಿರುಗಿಸದ ಕಾರಣ ಯುವಕರ ಗುಂಪೊದು ಸ್ನೇಹಿತನನ್ನು ಅಪಹರಿಸಿ, ತಲೆಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವ ಘಟನೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ನಾಗರಬಾವಿ ಐಟಿಐ ಲೇಔಟ್‍ನ ಹೇಮಂತ್ (27) ಕೊಲೆಯಾದ ಯುವಕ. ವೆಸ್ಟ್ ಆಫ್  ಕಾರ್ಡ್ ರಸ್ತೆಯ ಇಸ್ಕಾನ್ ದೇವಾಲಯದ ಬಳಿಯ ಕಮಲಮ್ಮನ ಗುಂಡಿ ಮೈದಾನದಲ್ಲಿ ಸೋಮವಾರ ಬೆಳಗ್ಗೆ ಮೃತದೇಹ ಪತ್ತೆಯಾಗಿದೆ. ಅದನ್ನು ಕಂಡ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಪಹರಣದ ಘಟನೆ ಬಗ್ಗೆ ಮೃತರ ಕುಟುಂಬ ಸದಸ್ಯರಿಂದ ಸಂಪೂರ್ಣ ಮಾಹಿತಿ ಪಡೆದ ಪೊಲೀಸರು, ಘಟನೆಗೆ ಕಾರಣ ಎನ್ನಲಾದ ಪ್ರಮುಖ ಆರೋಪಿ ಕೃಷ್ಣಮೂರ್ತಿ ಮತ್ತು ಆತನ ಸಹಚರರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.

ಕರ್ನಾಟಕ ಪ್ರಜಾ ವೇದಿಕೆ ಸಂಘಟನೆ ಸದಸ್ಯ ಹೇಮಂತ್, ಕೆಲ ತಿಂಗಳ ಹಿಂದೆ ಕೃಷ್ಣಮೂರ್ತಿ ಬಳಿ ಸಾಲ ಪಡೆದಿದ್ದ. ಆದರೆ, ಹಿಂದಿರುಗಿಸಲಿಲ್ಲ ಎಂಬ ಕಾರಣಕ್ಕೆ ಇಬ್ಬರ ನಡುವೆ ಮನಸ್ತಾಪವಾಗಿ ಜಗಳವಾಗಿತ್ತು. ಹಾಗಾಗಿ ಹೇಮಂತ್ ವಿರುದ್ಧ ಕೋಪಗೊಂಡಿದ್ದ ಕೃಷ್ಣಮೂರ್ತಿ ಹತ್ಯೆ ಸಂಚು ರೂಪಿಸಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com