ಮಹಿಳೆಯ ಬರ್ಬರ ಕೊಲೆ(ಸಾಂದರ್ಭಿಕ ಚಿತ್ರ)
ಜಿಲ್ಲಾ ಸುದ್ದಿ
ಸಾರ್ವಜನಿಕರ ಎದುರೇ ಮಹಿಳೆಯ ಬರ್ಬರ ಕೊಲೆ
ನಿಪ್ಪಾಣಿ(ಬೆಳಗಾವಿ): ನೂರಾರು ಮಂದಿ ಎದುರೇ ಮಹಿಳೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿರುವ ದಾರುಣ ಘಟನೆ ಬೆಳಗಾವಿಯ ಚಿಕ್ಕೊಡಿಯಲ್ಲಿ ನಡೆದಿದೆ.
ಚಿಕ್ಕೊಡಿಯ ನಿಪ್ಪಾಣಿ ಪಟ್ಟಣದಲ್ಲಿ ಹಾಡುಹಗಲೆ ಸಾರ್ವಜನಿಕರ ಎದುರೇ ಮಹಿಳೆಯಗೆ ಬೆಂಕಿ ಹಚ್ಚಿ ಬರ್ಬರವಾಗಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ.
ಸ್ಥಳಕ್ಕೆ ನಿಪ್ಪಾಣಿ ಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಯಾವ ಕಾರಣಕ್ಕಾಗಿ ಆಕೆಯ್ನು ಹತ್ಯೆ ಮಾಡಲಾಗಿದೆ ಎಂಬುದು ತಿಳಿಸಿದುಬಂದಿಲ್ಲ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ