ಮಾರ್ಚ್-ಮೇ ವೇಳೆಗೆ ವಿದ್ಯುತ್ ಸಮಸ್ಯೆ ತಲೆದೋರದಂತೆ ಎಚ್ಚರ

ಮುಂಬರುವ ಮಾರ್ಚ್‍ನಿಂದ ಮೇವರೆಗೆ ವಿದ್ಯುತ್ ಸಮಸ್ಯೆ ತಲೆದೋರದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಬೆಸ್ಕಾಂ ತಿಳಿಸಿದೆ. ಸುದ್ದಿಗೋಷ್ಠಿಯಲ್ಲಿ...
ವಿದ್ಯುತ್ ಉತ್ಪಾದನೆ
ವಿದ್ಯುತ್ ಉತ್ಪಾದನೆ
Updated on

ಬೆಂಗಳೂರು: ಮುಂಬರುವ ಮಾರ್ಚ್‍ನಿಂದ ಮೇವರೆಗೆ ವಿದ್ಯುತ್ ಸಮಸ್ಯೆ ತಲೆದೋರದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಬೆಸ್ಕಾಂ ತಿಳಿಸಿದೆ. ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಬೆಸ್ಕಾಂ ಎಂಡಿ ಪಂಕಜ್ ಕುಮಾರ್ ಪಾಂಡೆ ಹೇಳಿದ್ದಿಷ್ಟು...

 ಹೆಚ್ಚುವರಿಯಾಗಿ ವಿದ್ಯುತ್ ಖರೀದಿ ಸೇರಿದಂತೆ ಗ್ರಾಮೀಣ ಭಾಗದಲ್ಲಿ ರೈತರ ಪಂಪ್‍ಸೆಟ್‍ಗಳಿಗೆ ರೋಸ್ಟರ್ ಆಧಾರದಲ್ಲಿ ವಿದ್ಯುತ್ ನೀಡಲು ವ್ಯವಸ್ಥೆ ಮಾಡಲಾಗಿದೆ. ಇದರಿಂದ ವಿದ್ಯುತ್ ಗರಿಷ್ಠ ಬಳಕೆ ಅವಧಿಯಲ್ಲಿ ಸಮಸ್ಯೆಯಾಗುವುದಿಲ್ಲ. ಇನ್ನು ಸದ್ಯರಾಜ್ಯದೊಳಗಿನ ವಿದ್ಯುತ್ ಉತ್ಪಾದನೆ -ಸರಬರಾಜು ಉತ್ತಮ ರೀತಿಯಲ್ಲಿದೆ. ಒಂದು ವೇಳೆ ರಾಜ್ಯದೊಳಗಿನ ವಿದ್ಯುತ್ ಉತ್ಪಾದನೆಯಲ್ಲಿ ವ್ಯತ್ಯಯವಾದರೆ ಮಾತ್ರ ಗ್ರಾಹಕರಿಗೆ ಕೊಂಚ ವ್ಯತ್ಯಾಸವಾಗಬಹುದು.

ಕೇಂದ್ರದ ಪವರ್ ಕಾರಿಡಾರ್‍ನಿಂದ ಬರುವ ವಿದ್ಯುತ್‍ಗೆ ತಮಿಳುನಾಡು ಕಡೆಯಿಂದ ಕೊಂಚ ಸಮಸ್ಯೆಯಾಗುತ್ತಿದೆ. ಹೀಗಾಗಿ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೇವೆ. ಕೊರತೆ ಬೀಳುವ ವಿದ್ಯುತ್ತನ್ನು ಖಾಸಗಿಯಾಗಿ ಖರೀದಿಸುವ ನಿಟ್ಟಿನಲ್ಲೂ ಪ್ರಯತ್ನ ನಡೆದಿದೆ. ಮಧ್ಯಮ ಅವಧಿಯ ವಿದ್ಯುತ್ ಖರೀದಿ ಮತ್ತು ಅಲ್ಪ ಕಾಲದ ವಿದ್ಯುತ್ ಖರೀದಿ ಎಂದು ಎರಡು ವಿಭಾಗ ಮಾಡಿಕೊಂಡಿದ್ದು ಒಡಂಬಡಿಕೆ ಮೂಲಕ ವಿದ್ಯುತ್ ಖರೀದಿಸಲಾಗುತ್ತದೆ.

 ಕೊಜೆಂಟ್ರಿಕ್, ಜೆಎಸ್‍ಡಬ್ಲ್ಯು ಸೇರಿದಂತೆ ಸಣ್ಣಪುಟ್ಟ ವಿದ್ಯುತ್ ಉತ್ಪಾದಕರಿಂದ ಅಗತ್ಯ ವಿದ್ಯುತ್ ಖರೀದಿಸಲಾಗುತ್ತದೆ. ಇದಕ್ಕಿಂತ ಮುಖ್ಯವಾಗಿ ಗ್ರಾಮೀಣ ಭಾಗದಲ್ಲಿ ರೈತರ ಐಪಿಸೆಟ್‍ಗಳಿಗೆ ನೀಡುವ ವಿದ್ಯುತ್ ವ್ಯವಸ್ಥೆಯಲ್ಲಿ ರೋಸ್ಟರ್ ಪದಟಛಿತಿ ತರಲಾಗಿದೆ. ಈ ಮುಂಚೆ ಬೆಳಿಗ್ಗೆ 5 ಗಂಟೆ ಕಾಲ, ರಾತ್ರಿ 2 ಗಂಟೆ ಕಾಲ ವಿದ್ಯುತ್ ನೀಡಲಾಗುತ್ತಿತ್ತು.
ಇದೀಗ ಅದನ್ನು ಬದಲಿಸಿ ಬೆಳಗಿನ ಅವಧಿಯಲ್ಲಿ 4 ತಾಸು ರಾತ್ರಿ ವೇಳೆ 3 ತಾಸು ವಿದ್ಯುತ್ ನೀಡಲಾಗುತ್ತಿದೆ. ಇದರಿಂದ ನಗರದ ಗರಿಷ್ಠ ವಿದ್ಯುತ್ ಬಳಕೆ ಅವ„ಯನ್ನು ತೂಗಿಸಲು ಸಾಧ್ಯವಾಗಲಿದೆ.

 ನಿರಂತರ ಜ್ಯೋತಿ ಮತ್ತು ಬೆಂಗಳೂರು ನಗರ ವ್ಯಾಪ್ತಿಗೆ ಗರಿಷ್ಠ ಪ್ರಮಾಣದಲ್ಲಿ ವಿದ್ಯುತ್ ನೀಡಲು ನಾವು ಸಿದಟಛಿರಿದ್ದೇವೆ. ಕಳೆದ ಬಾರಿಯ ಗರಿಷ್ಠ ವಿದ್ಯುತ್ ಬಳಕೆಗಿಂತ ಈ ಬಾರಿ ಕೊಂಚ ಪ್ರಮಾಣದಲ್ಲಿ ಬೇಡಿಕೆ ಹೆಚ್ಚಾಗಬಹುದೆಂಬ ಅಂದಾಜಿದೆ. ಅದಕ್ಕೂ ಪೂರ್ವತಯಾರಿ
ಮಾಡಿಕೊಂಡಿದ್ದೇವೆ.

 ಸೋಲಾರ್ ವಿದ್ಯುತ್  ಯೋ ಜನೆಯಡಿ 15 ಘಟಕಗಳು ಕಾರ್ಯಾರಂಭ ಮಾಡಿವೆ. ಒಟ್ಟಾರೆ ಯೋಜನೆ ಆರಂಭಿಸಲು 400 ಅರ್ಜಿಗಳು ಬಂದಿದ್ದವು. 100 ಘಟಕಗಳ ಅರ್ಜಿಯನ್ನು ಸದ್ಯಕ್ಕೆ ಪುರಸ್ಕರಿಸಲಾಗಿದ್ದು, ಅಲ್ಲಿ ಉತ್ಪಾದಕರು ಪೂರ್ವ ತಯಾರಿ  ಮಾಡಿಕೊಳ್ಳುತ್ತಿದ್ದಾರೆ.

 ಐಪಿ ಸೆಟ್‍ಗಳ ಅಕ್ರಮಸಕ್ರಮ ಆಂದೋಲನದಲ್ಲಿ 84 ಸಾವಿರ ಮಂದಿ ಅರ್ಜಿ ಸಲ್ಲಿಸಿದ್ದರು, ಈ ಪೈಕಿ 45 ಸಾವಿರ ಮಂದಿ ತಲಾ 10 ಸಾವಿರ ರು.
ಶುಲ್ಕ ಮತ್ತು ಅಲ್ಲಿನ ಸೌಕರ್ಯಕ್ಕೆ 6 ಸಾವಿರ ರು. ನಂತೆ 16 ಸಾವಿರ ರುಪಾಯಿ ಕಟ್ಟಿದ್ದಾರೆ. ಇದರಲ್ಲಿ 23 ಸಾವಿರ ಮಂದಿಯ ಐಪಿ ಸೆಟ್
ಗಳಿಗೆ ಸೌಕರ್ಯ ಕಲ್ಪಿಸಿ ಸಕ್ರಮಗೊಳಿಸಲಾಗಿದೆ. ಮುಂದಿನ ಏಪ್ರಿಲ್ ಒಳಗೆ ಉಳಿದ 15 ಸಾವಿರ ಐಪಿ ಸೆಟ್‍ಗಳು ಸಕ್ರಮಗೊಳ್ಳಲಿವೆ. ಉಳಿದವರಿಗೆ ನೋಟಿಸ್ ಜಾರಿ ಮಾಡಲಾಗಿದೆ.

ರು.5 ಲಕ್ಷ ಬಹುಮಾನ
ಟ್ರಾನ್ಸ್ ಫಾರ್ಮರ್ ಉಪಕರಣ ಮರು ವಿನ್ಯಾಸಕ್ಕೆ ಬೆಸ್ಕಾಂ ಮುಂದಾಗಿದೆ. ಇದಕ್ಕಾಗಿ ಸಲಹೆಗಾರ ರಾಜಸಿಂಹ ಅವರಿರುವ ಸಣ್ಣ ಸಮಿತಿ ರಚಿಸಿದ್ದು, ಪಾದಚಾರಿ ಸ್ನೇಹಿ, ನೋಡಲು ಸರಳವಾಗಿರುವ, ಭದ್ರತಾ ದೃಷ್ಟಿಯಿಂದ ಮತ್ತು ಆದಾಯತರುವ ಮಾಡೆಲ್ ಅಭಿವೃದ್ಧಿಪಡಿಸಬೇಕೆಂಬ ಉದ್ದೇಶವಿದೆ. ಈ ನಿಟ್ಟಿನಲ್ಲಿ ಸ್ಪರ್ಧೆ ನಡೆಸಲಾಗುತ್ತಿದೆ. ಸಾರ್ವಜನಿಕರು- ವಿದ್ಯಾರ್ಥಿಗಳು ತಮ್ಮಲ್ಲಿನ ಆಲೋಚನಾತ್ಮಕ ವಿನ್ಯಾಸಗಳನ್ನು ಬೆಸ್ಕಾಂಗೆ ಮಾರ್ಚ್ 9ರೊಳಗೆ ಸಲ್ಲಿಸಬೇಕು. ಆಯ್ಕೆ ಯಾದ ವಿನ್ಯಾಸಕ್ಕೆ 5 ಲಕ್ಷ ರುಪಾಯಿ
ಬಹುಮಾನ ನೀಡಲಾಗುತ್ತದೆ. ಆ ವಿನ್ಯಾಸ ಒಪ್ಪಿಗೆಯಾದರೆ ಬೆಸ್ಕಾಂ ಅದರ ಪೇಟೆಂಟ್ ಹೊಂದುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com