ಕ್ರೂಸರ್ಗೆ ಲಾರಿ ಡಿಕ್ಕಿ: ಐವರ ಸಾವು

ಕ್ರೂಸರ್ಗೆ ಲಾರಿ ಡಿಕ್ಕಿ
ಕ್ರೂಸರ್ಗೆ ಲಾರಿ ಡಿಕ್ಕಿ
Updated on

ತುಮಕೂರು: ಕೂಲಿ ಕೆಲಸಕ್ಕಾಗಿ ರಾಯಚೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ಕೂಲಿ ಕೆಲಸಗಾರರ ಕ್ರೂಸರ್ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಐವರು ದಾರುಣವಾಗಿ ಸಾವನ್ನಪ್ಪಿದ್ದಾರೆ.

ತುಮಕೂರು ಜಿಲ್ಲೆ ಶಿರಾ ತಾಲೂಕಿನ ಕಳ್ಳಂಬೆಳ್ಳ ಪೊಲೀಸ್ ಠಾಣೆ ವ್ಯಾಪ್ತಿಯ ಚಿಕ್ಕನಹಳ್ಳಿಯಲ್ಲಿ ಈ ದುರ್ಘಟನೆ ನಡೆದಿದೆ. ಈ ಅಪಘಾತದಲ್ಲಿ ಐವರು ಮೃತಪಟ್ಟಿದ್ದು, ನಾಲ್ವರಿಗೆ ಗಂಭೀರ ಗಾಯಗಳಾಗಿದೆ. ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಗಾಯಗೊಂಡವರನ್ನು ತಾಲೂಕು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮೃತರನ್ನು ಆಂಜನಮ್ಮ (22), ಪೂಜಾ (35), ಮರಿಯಮ್ಮ(55), ಲಕ್ಷ್ಮಿ (28) ಎಂದು ಗುರುತಿಸಲಾಗಿದೆ. ಮೃತರೆಲ್ಲರು ರಾಯಚೂರಿನ ದೇವದುರ್ಗ ತಾಲೂಕಿನವರು, ಬೆಂಗಳೂರಿಗೆ ಕೂಲಿ ಕೆಲಸ ಹುಡುಕಿಕೊಂಡು ಬರುತ್ತಿದ್ದರು ಎಂದು ತಿಳಿದು ಬಂದಿದೆ.

ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಮೃತ ದುರ್ದೈವಿಗಳಿದ್ದ ಕ್ರೂಸರ್ ವಾಹನ ಚಲಿಸುವಾಗ ಟೈರ್ ಪಂಕ್ಚರ್ ಆಗಿದೆ. ಟೈರು ಬದಲಾವಣೆ ವೇಳೆ ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ. ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರೆದಿದೆ.

ಸುಮಾರು 15 ಮಂದಿ ಹಬ್ಬದ ನಿಮಿತ್ತ ಗ್ರಾಮಕ್ಕೆ ತೆರಳಿದ್ದು, ಹಬ್ಬ ಮುಗಿಸಿಕೊಂಡು ಕ್ರೂಸರ್ ವಾಹನದಲ್ಲಿ ಬೆಂಗಳೂರಿಗೆ ತೆರಳುತ್ತಿದ್ದಾಗ ಬೆಳಗಿನ ಜಾವ 3.30ರ ಸಮಯದಲ್ಲಿ ಚಿಕ್ಕನಹಳ್ಳಿ ಸಮೀಪ ಕ್ರೂಸರ್ ಪಂಚರ್ ಆಗಿದ್ದು, ಚಕ್ರ ಬದಲಾಯಿಸುವಾಗ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದಿದೆ.


Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com