• Tag results for ಶಿರಾ

ತುಮಕೂರು: ಮದುವೆಗೆ ನಿರಾಕರಿಸಿದ ಯುವತಿಯನ್ನು ಚೂರಿಯಿಂದ ಇರಿದು ಕೊಂದ ಭಗ್ನಪ್ರೇಮಿ!

ಶಿರಾ ತಾಲೂಕಿನ ದೊಡ್ಡಗುಳ್ಳದಲ್ಲಿ ನಡೆದ ಘಟನೆಯೊಂದರಲ್ಲಿ ಬಲವಂತವಾಗಿ ತಾಳಿ ಕಟ್ಟಿ ಮದುವೆಯಾಗಲು ನಿರಾಕರಿಸಿದ ಯುವತಿಗೆ ಪ್ರೇಮಿಯೊಬ್ಬ ಚಾಕುವಿನಿಂದ ಮಾರಣಾಂತಿಕವಾಗಿ ಇರಿದು ಹತ್ಯೆ ಮಾಡಿದ್ದಾನೆ.

published on : 5th April 2021

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಪ್ರಮುಖ ಆರೋಪಿಯ ಶಿರಾ ಮನೆಗೆ ಎಸ್ಐಟಿ ದಾಳಿ, ಪರಿಶೀಲನೆ

ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಎಸ್ಐಟಿ ಅಧಿಕಾರಿಗಳು, ಪ್ರಕರಣದ ಪ್ರಮುಖ ಆರೋಪಿ ಎಂದು ಹೇಳಲಾಗುತ್ತಿರುವ ಶಿರಾ ಮೂಲದ ಪತ್ರಕರ್ತನೆಂದು ಹೇಳಲಾಗುತ್ತಿರುವ ವ್ಯಕ್ತಿಯ ಮನೆಯ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆಂದು ತಿಳಿದುಬಂದಿದೆ. 

published on : 14th March 2021

ಕಂದರಕ್ಕೆ ಬಿದ್ದ ಮದುವೆ ಬಸ್; ಇಬ್ಬರು ಸಾವು, 40 ಕ್ಕೂ ಹೆಚ್ಚು ಮಂದಿಗೆ ಗಾಯ!

ಮದುವೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಬಸ್ ಕಂದರಕ್ಕೆ ಬಿದ್ದು ಇಬ್ಬರು ಸಾವನ್ನಪ್ಪಿ, 40 ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಸಿರಾ-ಬುಕ್ಕಾಪಟ್ಟಣ ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿದೆ. 

published on : 19th February 2021

ಪಂಚಮಸಾಲಿ 2ಎಗೆ ಸೇರ್ಪಡೆ: ಶಿರಾ ತಲುಪಿದ ಪಾದಯಾತ್ರೆ

ಪಂಚಮಸಾಲಿಗಳನ್ನು 2ಎ ಮೀಸಲಾತಿ ಪಟ್ಟಿಗೆ ಸೇರಿಸಲು ಮುಖ್ಯಮಂತ್ರಿಗಳು ಶೀಘ್ರ ಸಂಪುಟ ಸಭೆ ಕರೆದು ನಿರ್ಣಯ ಕೈಗೊಳ್ಳಬೇಕೆಂದು ಕೂಡಲಸಂಗಮ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದ್ದಾರೆ.

published on : 8th February 2021

ಶಿರಾ: ಉಪಚುನಾವಣೆ ಗೆಲುವಿನ ಹುಮ್ಮಸ್ಸಿನಲ್ಲಿರುವ ಕೇಸರಿ ಪಕ್ಷ, ತಳಮಟ್ಟದಲ್ಲಿ ಬಲವರ್ಧನೆಗೆ ಮುಂದಾದ ಬಿಜೆಪಿ

ನವೆಂಬರ್ 3 ರಂದು ವಿಧಾನಸಭೆ ಉಪಚುನಾವಣೆ ನಡೆದಿದ್ದ ಶಿರಾದಲ್ಲಿ ಇಂದು (ಡಿಸೆಂಬರ್ 27)ಗ್ರಾಮ ಪಂಚಾಯಿತಿ ಚುನಾವಣೆ ನಡೆಯಲಿದೆ. ವಿಶೇಷವೆಂದರೆ ಜನರ ಉತ್ಸಾಹ ಇಲ್ಲಿಯೂ ಕಡಿಮೆ ಇಲ್ಲ. ವಿಧಾನಸಭೆ ಉಪಚುನಾವಣೆಯಲ್ಲಿ ಮೊದಲ ಬಾರಿಗೆ ಕಾಂಗ್ರೆಸ್-ಜೆಡಿಎಸ್ ಭದ್ರಕೋಟೆಯನ್ನು ಪುಡಿಗಟ್ಟಿದ ಬಿಜೆಪಿ ಇದೀಗ ತಳಮಟ್ಟದಲ್ಲಿ ಪಕ್ಷ ಸಂಘಟಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ.

published on : 27th December 2020

ನನಸಾಯಿತು ದಶಕಗಳ ಕನಸು: ಮದಲೂರು ಕೆರೆಗೆ ನೀರು ಹರಿಸಿ ಭರವಸೆ ಈಡೇರಿಸಿದ ಸಿಎಂ ಯಡಿಯೂರಪ್ಪ

ಶಿರಾ ಉಪಚುನಾವಣೆ ವೇಳೆ ರಾಜ್ಯ ಬಿಜೆಪಿ ಸರ್ಕಾರ ಜನತೆಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದೆ. ಆರು ತಿಂಗಳಲ್ಲಿ ಹೇಮಾವತಿ ನೀರನ್ನು ಮದಲೂರು ಕೆರೆಗೆ ಬಿಡುತ್ತೇವೆ ಎಂದು ಶಿರಾ ಉಪಚುನಾವಣೆ ವೇಳೆ ಸಿಎಂ ವಾಗ್ದಾನ ಮಾಡಿದ್ದರು.

published on : 2nd December 2020

ವಿಜಯೇಂದ್ರ ವೈಭವೀಕರಣಕ್ಕೆ ನನ್ನ ಅಭ್ಯಂತರವಿಲ್ಲ; ಆದ್ರೆ ಒಬ್ಬರ ಪ್ರಯತ್ನದಿಂದ ಗೆಲುವು ಸಾಧ್ಯವಿಲ್ಲ: ಸಚಿವ ಈಶ್ವರಪ್ಪ

ಬಿಜೆಪಿ ಎಂದಿಗೂ ಒಬ್ಬ ವ್ಯಕ್ತಿಯ ಮೇಲೆ ಚುನಾವಣೆ ಮಾಡುವುದಿಲ್ಲ. ಸಂಘಟಿತ ಪ್ರಯತ್ನದಿಂದ ಚುನಾವಣೆ ಮಾಡಿ ಗೆಲುವು ಸಾಧಿಸುತ್ತಿದ್ದೇವೆ. ಆದರೆ, ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರನ್ನು ವೈಭವೀಕರಿಸುವ ಕೆಲಸಗಳನ್ನು ಕೆಲವರು ಮಾಡುತ್ತಿದ್ದಾರೆಂದು ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ಅವರು ಬೇಸರ ವ್ಯಕ್ತಪಡಿಸಿದ್ದಾರೆ. 

published on : 17th November 2020

ಶಿರಾ ಚುನಾವಣೆಯಿಂದ ಪ್ರೀತಮ್ ಗೌಡಗೆ ಹೊಸ ಜವಾಬ್ದಾರಿ: ಸಿಟಿ ರವಿ ಸ್ಥಾನಕ್ಕೆ ಹಾಸನ ಶಾಸಕ?

ಶಿರಾದಲ್ಲಿ ಬಿಜೆಪಿಯ ಡಾ.ರಾಜೇಶ್ ಗೌಡ ವಿಜಯದ ಮೂಲಕ ಹಾಸನ ಬಿಜೆಪಿ ಶಾಸಕ ಪ್ರೀತಮ್ ಗೌಡ ಅವರ ವೃತ್ತಿಗೆ ಹೊಸ ಹುರುಪು ನೀಡಿದ್ದು. ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಸಿಟಿ ರವಿ ನೇಮಕಗೊಂಡಿದ್ದು, ಅವರು ನಿರ್ವಹಿಸುತ್ತಿದ್ದ ಪ್ರವಾಸೋದ್ಯಮ ಖಾತೆಯನ್ನು ಪ್ರೀತಂ ಗೌಡ ಅವರಿಗೆ ನೀಡುವ ಸಾಧ್ಯತೆಯಿದೆ.

published on : 13th November 2020

ಶಿರಾದಲ್ಲಿ ಗೆದ್ದ ಕಮಲ: ವಿಜಯೇಂದ್ರ, ರವಿ ಕುಮಾರ್, ಗೋವಿಂದ ಕಾರಜೋಳರ ಒಗ್ಗಟ್ಟಿನ ಕೆಲಸ

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಪುತ್ರ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಕಳೆದ ಸೆಪ್ಟೆಂಬರ್ 21ರಂದು ತುಮಕೂರಿನ ಶಿರಾ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಆದರೆ ಈ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿಗೆ ಅವರು ಅದಕ್ಕಿಂತಲೂ ಮೊದಲು ತಳಮಟ್ಟದಲ್ಲಿ ಕೆಲಸ ಆರಂಭಿಸಿದ್ದರು.

published on : 11th November 2020

ಬೂತ್ ಮಟ್ಟದಲ್ಲಿ ಗೆದ್ದರೆ ಕ್ಷೇತ್ರ ಗೆಲ್ಲಬಹುದು: ಶಿರಾದಲ್ಲಿ ವರ್ಕೌಟ್ ಆಯ್ತು ಅಮಿತ್ ಶಾ ಕಾನ್ಸೆಪ್ಟ್!

ಶಿರಾ ಮತ್ತು ರಾಜರಾಜೇಶ್ವರಿ ನಗರ ಉಪಚುನಾವಣೆಯಲ್ಲಿ ಬಿಜೆಪಿ ಗೆದ್ದು ಬೀಗುತ್ತಿದೆ. ಶಿರಾದಲ್ಲಿ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದ ರಾಜೇಶ್ ಗೌಡ ಕಾಂಗ್ರೆಸ್ ಹಿರಿಯ ನಾಯಕ ಜಯಚಂದ್ರ ಅವರನ್ನು ಸೋಲಿಸಿದ್ದಾರೆ.

published on : 11th November 2020

ಕಾಂಗ್ರೆಸ್-ಜೆಡಿಎಸ್ ಭದ್ರಕೋಟೆ ಛಿದ್ರ: ಶಿರಾದಲ್ಲಿ ಮೊದಲ ಬಾರಿಗೆ ಅರಳಿದ ಕಮಲ

ಶಿರಾ ಉಪ ಚುನಾವಣೆಯಲ್ಲಿ ಡಾ.ರಾಜೇಶ್ ಗೌಡ ಗೆಲ್ಲುವ ಮೂಲಕ ಬಿಜೆಪಿ ಹೊಸ ಇತಿಹಾಸ ಸೃಷ್ಟಿಸಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ನ ಸಾಂಪ್ರಾದಾಯಿಕ ಭದ್ರಕೋಟೆಯಾಗಿರುವ ಶಿರಾದಲ್ಲಿ ಮೊಟ್ಟ ಮೊದಲ ಬಾರಿಗೆ ಕಮಲ ಅರಳಿದೆ,

published on : 11th November 2020

ಅಕ್ರಮ ಗಳಿಕೆಯ ಹಣ ಮತ್ತು ಆಡಳಿತ ಯಂತ್ರದ ದುರುಪಯೋಗಕ್ಕೆ ಸಿಕ್ಕಿರುವ ಗೆಲುವು: ಸಿದ್ದರಾಮಯ್ಯ

ಬೆಂಗಳೂರಿನ ರಾಜರಾಜೇಶ್ವರಿ ಹಾಗೂ ತುಮಕೂರಿನ ಶಿರಾ ಉಪಚುನಾವಣೆಗಳಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದೆ. ಆದರೆ ಬಿಜೆಪಿಯ ಈ ಗೆಲುವು "ಪ್ರಜಾಪ್ರಭುತ್ವದ ಸೋಲು. ಅಕ್ರಮ ಗಳಿಕೆಯ ಹಣ ಮತ್ತು ಆಡಳಿತ ಯಂತ್ರದ ದುರುಪಯೋಗಕ್ಕೆ ಸಿಕ್ಕಿರುವ ಗೆಲುವು" ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

published on : 10th November 2020

ಶಿರಾ, ಆರ್ ಆರ್ ನಗರ ಉಪಚುನಾವಣೆ ಫಲಿತಾಂಶ: ಬಿಜೆಪಿ ಅಭ್ಯರ್ಥಿಗಳ ಮುನ್ನಡೆ 

ಶಿರಾದಲ್ಲಿ ನಿರೀಕ್ಷೆಗೂ ಮೀರಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದ್ದು, ಕ್ಷೇತ್ರದಲ್ಲಿ ಮೊದಲ ಬಾರಿಗೆ ಖಾತೆ ತೆರೆಯುವ ಮುನ್ಸೂಚನೆ ಇದೆ. 

published on : 10th November 2020

ಉಪಚುನಾವಣೆ ಫಲಿತಾಂಶ: ದೇವೇಗೌಡ, ವಿಜಯೇಂದ್ರ, ಡಿಕೆ ಶಿವಕುಮಾರ್ ಸಾಮರ್ಥ್ಯಕ್ಕೆ ಸತ್ವ ಪರೀಕ್ಷೆ!

ನವೆಂಬರ್ 3 ರಂದು ನಡೆದ ಶಿರಾ ಮತ್ತು ಆರ್ ಆರ್ ನಗರ ಉಪಚುನಾವಣೆ ಫಲಿತಾಂಶ ಇಂದು ಹೊರ ಬೀಳಲಿದೆ. ಮೂರು ಪಕ್ಷಗಳ ಅಭ್ಯರ್ಥಿಗಳ ಹಣೆ ಬರಹ ಇಂದು ನಿರ್ಧಾರವಾಗಲಿದೆ. 

published on : 10th November 2020

ಕರ್ನಾಟಕ ಉಪಚುನಾವಣೆ: ಮತಎಣಿಕೆ ಪ್ರಕ್ರಿಯೆ ಆರಂಭ, ಮಧ್ಯಾಹ್ನ 12ರ ವೇಳೆಗೆ ಶಿರಾ, ರಾಜರಾಜೇಶ್ವರಿ ನಗರ ಭವಿಷ್ಯ ನಿರ್ಧಾರ

ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್, ಜೆಡಿಎಸ್ ನಡುವಿನ ಜಿದ್ದಾಜಿದ್ದಿ ಕಣವಾಗಿರುವ ತುಮಕೂರು ಜಿಲ್ಲೆಯ ಶಿರಾ ಹಾಗೂ ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದೆ. 

published on : 10th November 2020
1 2 3 4 5 6 >