ನಿತ್ಯಾಶ್ರಮದಲ್ಲಿ ಸಾಧುಗಳಿಗೆ ಪ್ರವೇಶ ನಿರ್ಬಂಧ; ಆಕ್ರೋಶ

ವಿವಾದಿತ ಸ್ವಾಮಿ ತನ್ನ ಬಿಡದಿ ಧ್ಯಾನಪೀಠಕ್ಕೆ ಸಾಧುಗಳಿಗೆ ಪ್ರವೇಶ ನಿರಾಕರಿಸಿ ಅವರ ಕೆಂಗಣ್ಣಿಗೆ ಗುರಿಯಾಗುವ ಜತೆಗೆ ಇನ್ನೊಂದು ವಿವಾದ..
ನಾಗಾ ಸಾಧುಗಳು (ಸಾಂದರ್ಭಿಕ ಚಿತ್ರ)
ನಾಗಾ ಸಾಧುಗಳು (ಸಾಂದರ್ಭಿಕ ಚಿತ್ರ)

ರಾಮನಗರ: ಸ್ವಯಂ ಘೋಷಿತ ದೇವಮಾನವ ನಿತ್ಯಾನಂದನಿಗೂ ವಿವಾದಕ್ಕೂ ಎಡೆಬಿಡದ ನಂಟು. ವಿವಾದಿತ ಸ್ವಾಮಿ ತನ್ನ ಬಿಡದಿ ಧ್ಯಾನಪೀಠಕ್ಕೆ ಸಾಧುಗಳಿಗೆ ಪ್ರವೇಶ ನಿರಾಕರಿಸಿ ಅವರ ಕೆಂಗಣ್ಣಿಗೆ ಗುರಿಯಾಗುವ ಜತೆಗೆ ಇನ್ನೊಂದು ವಿವಾದ ಮೈ ಮೇಲೆ ಎಳೆದುಕೊಂಡಿದ್ದಾನೆ.

ಧ್ಯಾನಪೀಠದಲ್ಲಿ ವಿಶ್ವಶಾಂತಿ ಹೆಸರಲ್ಲಿ ಭಾನುವಾರದಿಂದ ಆತಿರುದ್ರ ಮಹಾಯಾಗ ನಡೆದಿದ್ದು, ಮಂಗಳವಾರ ಪೂರ್ಣಾಹುತಿ ನೀಡಲಾಯಿತು. ಅದರಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಗುಜರಾತಿನ 40ಕ್ಕೂ ಹೆಚ್ಚು ಸಾಧುಗಳನ್ನು ಮುಖ್ಯ ದ್ವಾರದಿಂದಲೇ ಹೊರಗಟ್ಟಿ ಅಪಮಾನಿಸಲಾಗಿದೆ. ನಿತ್ಯಾನಂದ 108 ಪೀಠಾಧಿಪತಿಗಳ ಸಮೇತ 108 ಹೋಮ ಕುಂಡಗಳನ್ನು ಸ್ಥಾಪಿಸಿ ಮಹಾಯಾಗ ನಡೆಸಿದ್ದಾನೆ. 108 ಮಂಟಪಗಳಲ್ಲಿ ಪೂಜೆ ನೆರವೇರಿದೆ. ಮುನ್ನೂರು ಅರ್ಚತಕು ರುದ್ರ ಪಾರಾಯಣ ನಡೆಸಿದ್ದು, ಆಗಮಾಚಾರ್ಯ ಸೋಮಸುಂದರ ದೀಕ್ಷಿತ್ ಯಾಗ ನಡೆಸಿಕೊಟ್ಟಿದ್ದಾರೆ.

ಸಾಗ ಹಾಕಲು ಯತ್ನ
ಬಡ ಭಕ್ತರ ಪಾಲಿಗೆ ನಿತ್ಯಾಶ್ರಮ ಧ್ಯಾನಪೀಠದ ಬಾಗಿಲು ಸದಾ ಬಂದ್ ಆಗಿರುತ್ತದೆ. ಅಲ್ಲೇನಿದ್ದರೂ ಪರದೇಶಿ ಮತ್ತು ಸಿರಿವಂತ ಭಕ್ತರು, ಖ್ಯಾತನಾಮ  ಪೀಠಾಧಿಪತಿಗಳು, ಪ್ರಭಾವಿ ರಾಜಕಾರಣಿಗಳಿಗಷ್ಟೇ ಮಣೆ ಎನ್ನುವ ಆರೋಪ ಹೊಸದಲ್ಲ. ಕಾರಿನಲ್ಲಿ ಬಂದ ಭಕ್ತರು, ಗಣ್ಯರಿಗೆ ಮುಖ್ಯ ದ್ವಾರ ತೆರೆದುಕೊಳ್ಳುತ್ತಿತ್ತು. ಸಾಧುಗಳು ಸುಮಾರು 3 ತಾಸು ಕಾದು ಕುಳಿತರೂ ಅವರನ್ನು ಕ್ಯಾರೆ ಎನ್ನುವವರು ಇರಲಿಲ್ಲ. ಕಡೆಗೆ ನಿತ್ಯಾನಂದ ಅನುಯಾಯಿಗಳು ತಲಾ ರು.500 ಕೊಟ್ಟು ಸಾಗಹಾಕಲೆತ್ನಿಸಿದರು. ಹಣ ತಿರಸ್ಕರಿಸಿದ ಸಾಧುಗಳು ಅಲ್ಲಿಂದ ಹೊರಟರು.

ಸಾಧು, ಸಂತರ ಆಕ್ಷೇಪ

ರಾಜ್ಯ, ಹೊರ ರಾಜ್ಯಗಳಿಂದ ಪೀಠಾಧಿಪತಿಗಳು ಮತ್ತು ಅರ್ಚಕರನ್ನು ಕರೆಸಿಕೊಂಡು ಅತಿರುದ್ರ ಮಹಾಯಾಗ ನಡೆಸಿರುವ ಪೂರ್ಣಾಹುತಿ ಸಂದರ್ಭದಲ್ಲಿ ತಮ್ಮನ್ನು ಹೊರಗಿಟ್ಟಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರವೇಶ ನಿರಾಕರಣೆಗೆ ಒಳಗಾದ ಸಾಧುಗಳು ಆಕ್ಷೇಪ ವ್ಯಕ್ತಪಡಿಸಿದರು. ಅತಿರುದ್ರ ಮಹಾಯಾಗವು ಪುರಾತನ ಮತ್ತು ಶಕ್ತಿಶಾಲಿ ವೈದಿಕ ಪ್ರಕ್ರಿಯೆ. ನೂರೆಂಟು ಮಠಾಧೀಶರು ಸೇರಿ ಇಂಥದ್ದೊಂದು ಮಹಾಯಾಗ ನಡೆಸುತ್ತಿರುವುದು ದೇಶದಲ್ಲೇ ಮೊದಲು ಎಂದು ಯಾಗಕ್ಕೆ ಚಾಲನೆ ನೀಡಿದ ಕೊಳದ ಮಠದ ಶ್ರೀಶಾಂತವೀರ ಸ್ವಾಮೀಜಿ ಹೇಳಿದ್ದರು. ಆದರೆ ಯಾಗವು ವಿವಾದಕ್ಕೆ ಸಿಲುಕಿದೆ.

ದೂರು ನೀಡುವೆವು

ನಾವೆಲ್ಲರೂ ಜೂನಾ ಅಖಾಡಕ್ಕೆ ಸೇರಿದ ಸಾಧುಗಳು. ಅಕಿರುದ್ರ ಮಹಾಯಾಗಕ್ಕೆ ಬಂದ ನಮಗೆ ಪ್ರವೇಶ ನಿರಾಕರಿಸಿ ನಿತ್ಯಾನಂದ ಮತ್ತು ಅನುಯಾಯಿಗಳು ಅಪಮಾನಿಸಿದ್ದಾರೆ. ಸೇನಾಪತಿಗೆ ದೂರು ನೀಡುತ್ತೇವೆ ಎಂದು ಸಾಧು ಸಂಬಲ್‌ಪುರಿ ಬಾಬಾ ಕಿಡಿಕಾರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com